
ಜೈಪುರ(ಜ.27): ಜೈಪುರದಲ್ಲಿ ನಡೆಯುತ್ತಿದ್ದ ಪದ್ಮಾವತಿ ಚಿತ್ರದ ಚಿತ್ರಕರಣ ವೇಳೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೇಲೆ ಕೆಲ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.
ಜೈಪುರದ ಕೋಟೆಯೊಳಗೆ ಚಿತ್ರೀಕರಣ ನಡೆಯುತ್ತಿರುವ ವೇಳೆಯೇ ಈ ದಾಳಿ ನಡೆಸಲಾಗಿದೆ. ರಜಪೂತ್ ರಾಣಿಯನ್ನು ಚಿತ್ರದಲ್ಲಿ ನಿಕೃಷ್ಟವಾಗಿ ತೋರಿಸಲಾಗಿದೆ ಎಂದು ರಜ್'ಪೂತ್ ಕರ್ಣಿ ಸೇನಾದ ಪ್ರತಿಭಟನಾಕಾರರು ಬನ್ಸಾಲಿ ಅವರ ಕಪಾಳಮೋಕ್ಷ ಮಾಡಿದ್ದೂ ಅಲ್ಲದೇ, ಕೂದಲನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ರಾಣಿ ಪದ್ಮಿನಿ, ಇಸ್ಲಾಂ ದಾಳಿಕೋರ ಅಲಾವುದ್ದೀನ್ ಖಿಲ್ಜಿಗೆ ಸೆರೆಸಿಕ್ಕುವ ಬದಲು ತನ್ನ ಜೀವನವನ್ನು ತ್ಯಾಗಮಾಡಿದ ಮಹಾನ್ ಮಹಿಳೆ. ಆದರೆ, ಚಿತ್ರದಲ್ಲಿ ಪದ್ಮಿನಿ (ದೀಪಿಕಾ) ಹಾಗೂ ಅಲಾವುದ್ದೀನ್ ಖಿಲ್ಜಿ (ರಣಬೀರ್) ನಡುವೆ ಹಲವು ಪ್ರೇಮ, ಪ್ರಣಯ ಪ್ರಸಂಗಗಳನ್ನು ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಚಿತ್ರದಲ್ಲಿರುವ ಇಂತಹ ದೃಶ್ಯಗಳನ್ನು ನಾಶಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಅಹಿತಕರ ಘಟನೆ ನಡೆದ ಬಳಿಕ ಚಿತ್ರತಂಡ ಜೈಪುರದಲ್ಲಿ ಚಿತ್ರೀಕರಣ ನಡೆಸದಿರಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.