ರೈಲು ಆಹಾರ ತಿನ್ನುತ್ತಿದ್ದೀರಾ : ಹಾಗಾದರೆ ಕಾದಿದೆ ಗ್ರಹಚಾರ

By Suvarna Web DeskFirst Published Jan 27, 2017, 3:52 PM IST
Highlights

ಈ ಉಪಗುತ್ತಿಗೆದಾರರೋ ಲಾಭದಾಸೆಗೆ ಅತ್ಯಂತ ಕೊಳಕಾಗಿ, ಕೆಟ್ಟದಾಗಿ, ಕಳಪೆ ಆಹಾರ ಪದಾರ್ಥ ಉಪಯೋಗಿಸಿ ಜನರಿಗೆ ಆಹಾರ ಪೂರೈಸುತ್ತಿದ್ದಾರೆ. ಇದು ನಮ್ಮ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡದ ರಿಯಾಲಿಟಿ ಚೆಕ್​ನಲ್ಲಿ ಬಯಲಾಗಿದೆ.

ನಮ್ಮ ದೇಶದ ನರನಾಡಿಯಾಗಿರೋ ರೈಲು ಇಲಾಖೆಯಲ್ಲಿ ಆಹಾರ ಟೆಂಡರುದಾರರು ನಿಯಮ ಮೀರಿ ವರ್ತಿಸುತ್ತಿದ್ದಾರೆ. ಪ್ರಯಾಣಿಕರಿಗೆ ಕಳಪೆ ಆಹಾರ ನೀಡಿ ಅವರ ಪ್ರಾಣದ ಜೊತೆ ಚಲ್ಲಾಟ ಆಡುತ್ತಿದ್ದಾರೆ.

ಇದಕ್ಕೆ  ಬೆಂಗಳೂರಿನಿಂದ ಹೊರಡೋ  ರೈಲುಗಳಿಗೆ ಆಹಾರ ಸರಬರಾಜು ಮಾಡೋ ಟೆಂಡರ್​ ಪಡೆದಿರೋ  ಕೆ.ಎಮ್​.ಎ ಕ್ಯಾಟರ್ಸ್​​ ಸಾಕ್ಷಿ. ಕೆ.ಎಮ್​.ಎ ಕ್ಯಾಟರ್ಸ್ ಮಾಲೀಕರಾದ ಖದೀರ್​ ಅಹಮ್ಮದ್,  ಟೆಂಡರು ನಿಯಮಗಳನ್ನ ಸಂಪೂರ್ಣವಾಗಿ ಗಾಳಿಗೆ ತೂರಿ ಸಿಕ್ಕ ಸಿಕ್ಕ ಗುತ್ತಿಗೆಯನ್ನ ಕಂಡಕಂಡವರಿಗೆ ಅಕ್ರಮವಾಗಿ ಲಕ್ಷಾಂತರ ರೂಪಾಯಿಗೆ ಮಾರಿ ಉಪಗುತ್ತಿಗೆ ನೀಡಿದ್ದಾರೆ.

ಈ ಉಪಗುತ್ತಿಗೆದಾರರೋ ಲಾಭದಾಸೆಗೆ ಅತ್ಯಂತ ಕೊಳಕಾಗಿ, ಕೆಟ್ಟದಾಗಿ, ಕಳಪೆ ಆಹಾರ ಪದಾರ್ಥ ಉಪಯೋಗಿಸಿ ಜನರಿಗೆ ಆಹಾರ ಪೂರೈಸುತ್ತಿದ್ದಾರೆ. ಇದು ನಮ್ಮ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡದ ರಿಯಾಲಿಟಿ ಚೆಕ್​ನಲ್ಲಿ ಬಯಲಾಗಿದೆ.

ಟೆಂಡರುದಾರರು ರೈಲು ಪ್ರಯಾಣಿಕರಿಗೆ ಕೆಟ್ಟ, ಕೊಳಕು, ವಿಷ ಆಹಾರ ಸರಬರಾಜು ಮಾಡುತ್ತಿರೋದು ರೈಲ್ವೇ ಅಧಿಕಾರಿಗಳಿಗೆ ಗೊತ್ತಿಲ್ವಾ? ಅವರು ಯಾಕೆ ಮೌನವಹಿಸಿದ್ದಾರೆ? ಈ ಪ್ರಶ್ನೆಗೆ ಉತ್ತರ ಪಡೆಯಲು  ನಾವು ಟೆಂಡರುದಾರರ ಬಳಿ ವೇಷ ಮರೆಸಿ ಹೋಗಿ ಬಾಯ್ಬಿಡಿಸಿದಾಗ ಗೊತ್ತಾದ ಸತ್ಯ ಲಂಚದ ಅವ್ಯವಹಾರ.

ಟೆಂಡರುದಾರರು ಬೇಕಾಬಿಟ್ಟಿ ವ್ಯವಹಾರ ಮಾಡಲು ರೈಲ್ವೇ ಅಧಿಕಾರಿಗಳಿಂದ ಹಿಡಿದು, ರೈಲ್ವೇ ಪೊಲೀಸರು, ಟಿಟಿಗಳವರೆಗೆ ಪ್ರತಿಯೊಬ್ಬರಿಗೂ ಲಂಚ ಕೊಡಲೇ ಬೇಕಂತೆ. ಕೊಡದಿದ್ದರೆ ಗೇಟ್​ ಪಾಸ್​ ಕೊಡ್ತಾರಂತೆ. ಪ್ರತಿ ತಿಂಗಳು ಲಕ್ಷಗಟ್ಟಲೆ ಲಂಚಕೊಟ್ರೆ ಪಾಸ್​, ಮೆಡಿಕಲ್​, ಪೊಲೀಸ್ ಸರ್ಟಿಫಿಕೇಟ್​ ಇಲ್ಲದೆಯೂ ರೈಲಲ್ಲಿ ಆಹಾರ ಮಾರಬಹುದುದಂತೆ. ಈ ಸತ್ಯ ನಮ್ಮ ರಿಯಾಲಿಟಿ ಚೆಕ್​ನಲ್ಲೂ ಬಯಲಾಯ್ತು.

ಹೇಗಿದೆ ನೋಡಿ ರೈಲ್ವೇ ಇಲಾಖೆಯ ವಿಷ ಆಹಾರ ಮಾಫಿಯಾದ ಕಾರುಬಾರು. ಈ ಹಗರಣವನ್ನ ಗಂಭೀರವಾಗಿ ಪರಿಗಣಿಸಿ  ಕೇಂದ್ರ ರೈಲ್ವೇ ಸಚಿವ ಸುರೇಶ್​ ಪ್ರಭು ತನಿಖೆಗೆ ಆದೇಶ ನೀಡಬೇಕು. ಇಲ್ಲದಿದ್ದರೆ ಪ್ರಯಾಣಿಕರಿಗೆ ಅಪಾಯ ತಪ್ಪಿದ್ದಲ್ಲ.

ವರದಿ: ವಿಜಯಲಕ್ಷ್ಮಿ ಶಿಬರೂರು,ಸುವರ್ಣ ನ್ಯೂಸ್

click me!