
ನವದೆಹಲಿ(ಮಾ.22): ನಗದು ವಹಿವಾಟು ಮಿತಿಯನ್ನು ಬಜೆಟ್‌ನಲ್ಲಿ .3 ಲಕ್ಷ ಎಂದು ಪ್ರಕಟಿಸಿದ್ದ ಕೇಂದ್ರ ಸರ್ಕಾರ ಈಗ ಅದನ್ನು .2 ಲಕ್ಷಕ್ಕಿಳಿಸಿದೆ. ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾದ ವಿತ್ತೀಯ ಮಸೂದೆಯಲ್ಲಿ ಈ ಅಂಶವಿದೆ.
ವಿತ್ತೀಯ ಮಸೂದೆಯಲ್ಲಿ 40 ತಿದ್ದುಪಡಿ ಗಳನ್ನು ಮಂಡಿಸಲಾಗಿದ್ದು, ಇವುಗಳಿಗೆ ವಿಪಕ್ಷಗಳಾದ ಟಿಎಂಸಿ, ಬಿಜೆಡಿ ಹಾಗೂ ಆರ್‌ಎಸ್‌ಪಿ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು. ಆದರೆ ಈ ವಿರೋಧವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ತಳ್ಳಿಹಾಕಿದರು.
ಬಜೆಟ್‌ನಲ್ಲಿ 3 ಲಕ್ಷ ರು.ಗಿಂತ ಹೆಚ್ಚಿನ ನಗದು ವಹಿವಾಟು ನಡೆಸುವಂತಿಲ್ಲ ಎಂದು ಪ್ರಕಟಿಸಲಾಗಿತ್ತು. ಒಂದು ವೇಳೆ ಹೆಚ್ಚಿನ ವಹಿವಾಟು ನಡೆಸಿದ್ದು ಕಂಡುಬಂದರೆ ದಂಡ ಹಾಕುವುದಾಗಿ ಸರ್ಕಾರ ಹೇಳಿತ್ತು. ಈ ಮಸೂದೆ ಅನ್ವಯ ಯಾವುದೇ ವ್ಯಕ್ತಿ 2 ಲಕ್ಷ ರು.ಗಿಂತ ಹೆಚ್ಚಿನ ನಗದು ವಹಿವಾಟು ನಡೆಸಿದರೆ ಅಷ್ಟೇ ಪ್ರಮಾಣದ ಮೊತ್ತವನ್ನು ದಂಡವಾಗಿ ವಿಧಿಸಲಾಗುವುದು.
ನವದೆಹಲಿ: ಆದಾಯ ತೆರಿಗೆ ರಿಟನ್ಸ್‌ರ್ ಮಾಹಿತಿ ಸಲ್ಲಿಸುವಾಗ ‘ಆಧಾರ್ ಸಂಖ್ಯೆ' ಕಡ್ಡಾಯ ಮಾಡಲು ಸರ್ಕಾರ ನಿರ್ಧರಿಸಿದೆ. ಇದೇ ವೇಳೆ, ‘ಪಾನ್ ಸಂಖ್ಯೆ' ಪಡೆಯಲು ಕೂಡ ಆಧಾರ್ ಕಡ್ಡಾಯವಾಗಲಿದೆ.
ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿರುವ ವಿತ್ತೀಯ ಮಸೂದೆ ಯಲ್ಲಿ ಈ ಪ್ರಸ್ತಾಪಗಳನ್ನು ಇಡಲಾಗಿದೆ. ಮಸೂದೆ ಅಂಗೀಕಾರವಾದ ಬಳಿಕ ಜುಲೈ 1ರಿಂದ ಈ ನಿಯಮಗಳು ಜಾರಿಗೆ ಬರುವ ನಿರೀಕ್ಷೆಯಿದೆ. ಇದರಿಂದಾಗಿ ಪಾನ್ ಕಾರ್ಡ್ ಗೆ ಆಧಾರ್ ಸಂಯೋಜಿಸದೇ ಹೋದರೆ, ಅದು ಜು.1 ರಿಂದ ಅಮಾನ್ಯ ಎನ್ನಿಸಿಕೊಳ್ಳಲಿದೆ. ವೇತನ ಸೇರಿದಂತೆ ಅನೇಕ ವಿತ್ತೀಯ ವಹಿವಾ ಟಿಗೆ ಪಾನ್ ಸಂಖ್ಯೆ ಕಡ್ಡಾಯವಾಗಿದೆ.
ವರದಿ: ಕನ್ನಡ ಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.