ಇಂಗ್ಲೆಂಡ್ ಸಂಸತ್ತಿನ ಬಳಿ ಗುಂಡಿನ ದಾಳಿ : ಇಬ್ಬರ ಸಾವು, ಹಲವರಿಗೆ ಗಾಯ

Published : Mar 22, 2017, 04:51 AM ISTUpdated : Apr 11, 2018, 12:41 PM IST
ಇಂಗ್ಲೆಂಡ್ ಸಂಸತ್ತಿನ ಬಳಿ ಗುಂಡಿನ ದಾಳಿ : ಇಬ್ಬರ ಸಾವು, ಹಲವರಿಗೆ ಗಾಯ

ಸಾರಾಂಶ

ಪೊಲೀಸನೊಬ್ಬನಿಗೆ ಇರಿದ ದುಷ್ಕರ್ಮಿಯೊಬ್ಬನನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಸಂಸತ್ತಿನ ಕೆಳಮನೆಯ ನಾಯಕರೊಬ್ಬರು ತಿಳಿಸಿದ್ದಾರೆ.

ಲಂಡನ್(ಮಾ.22): ಇಬ್ಬರು ಅಪರಿಚಿತರು ಇಂಗ್ಲೆಂಡಿನ ಸಂಸತ್ತಿನ ಬಳಿ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಪೊಲೀಸನೊಬ್ಬನಿಗೆ ಇರಿದ ದುಷ್ಕರ್ಮಿಯೊಬ್ಬನನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಸಂಸತ್ತಿನ ಕೆಳಮನೆಯ ನಾಯಕರೊಬ್ಬರು ತಿಳಿಸಿದ್ದಾರೆ. ಲಂಡನಿನ ವೆಸ್ಟ್'ಮಿನಿಸ್ಟರ್ ಸೇತುವೆ ಬಳಿ ಈ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು 12ಕ್ಕೂ ಹೆಚ್ಚು ಮಂದಿ  ಗಾಯಗೊಂಡಿದ್ದಾರೆ.ಸಂಸತ್ ಭವನದ ಒಳಗೆ 400ಕ್ಕೂ ಹೆಚ್ಚು ಸಂಸದರಿದ್ದು, ಹೊರಗೆ ಬರದಂತೆ ಸೂಚನೆ ನೀಡಲಾಗಿದೆ.

ಸಂಸತ್ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ. ದುಷ್ಕರ್ಮಿಗಳು ಸಂಸತ್ ಆವರಣದೊಳಗೆ ದುಷ್ಕರ್ಮಿಗಳು ಕಾರು ನುಗ್ಗಿಸಲು ಯತ್ನಿಸಿದ್ದಾರೆ. ಈ ವೇಳೆ ಅಡ್ಡಾದಿಡ್ಡಿ ಕಾರು ಚಲಾಯಿಸಿ ಪಾದಚಾರಿಗಳ ಮೇಲೆ ಕಾರು ನುಗ್ಗಿಸಿದ್ದಾರೆ.  ಗುಂಡಿನ ದಾಳಿ ಹಿನ್ನೆಲೆ ಸಂಸತ್ ಭವನ ಮುಚ್ಚಲಾಗಿದ್ದು ಸಂಸತ್ ಬಳಿ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ.

ಘಟನೆಯ ನಂತರ ಬ್ರಿಟನ್'ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಬ್ರಿಟನ್ ಪ್ರಧಾನಿ ಥೆರೆಸಾ ಮೇ ಸೇರಿದಂತೆ ಸಂಸದರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಸ್ತ್ರ ಸಜ್ಜಿತ ಪೊಲೀಸರ ತಂಡ ಸಂಸತ್​ ಪ್ರವೇಶಿಸಿದ್ದು, ಉಗ್ರರ ದಾಳಿ ಎಂದು ಬ್ರಿಟನ್​ ಅಧಿಕಾರಿಗಳು ಖಚಿತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌