ಟ್ರಾಫಿಕ್ ಪೊಲೀಸ್ ಪೇದೆಯ ತುರ್ತು ಚಿಕಿತ್ಸೆಯಿಂದ ಬದುಕಿತು ಜೀವ

First Published Jun 4, 2018, 7:33 PM IST
Highlights

ಬೈಕ್ ಅಪಘಾತವಾಗಿ ರಸ್ತೆ ಬಿದ್ದ ವ್ಯಕ್ತಿಗೆ ತುರ್ತು ಚಿಕಿತ್ಸೆ ನೀಡಿ ವ್ಯಕ್ತಿಯ ಜೀವ ಉಳಿಸುವಲ್ಲಿ ಚೈನೈನ್ ಟ್ರಾಫಿಕ್ ಪೊಲೀಸ್ ಯಶಸ್ವಿಯಾಗಿದ್ದಾರೆ. ಪೊಲೀಸ್ ಪೇದೆಯ ಕಾರ್ಯಕ್ಕೆ ಎಲ್ಲಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಚೆನ್ನೈ(ಜೂನ್.4) ಟ್ರಾಫಿಕ್ ಪೊಲೀಸ್ ಮುಖ್ಯ ಪೇದೆಯ ತುರ್ತು ಚಿಕಿತ್ಸೆ ಹಾಗೂ ಸಮಯಪ್ರಜ್ಞೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯೋರ್ವನ ಜೀವ ಉಳಿಸಿದೆ. ಚೆನ್ನೈನ ಎಗ್ಮೋರ್ ಸಿಗ್ನಲ್‌ನಲ್ಲಿ ಅಪಘಾತಕ್ಕೀಡಾದ ಬೈಕ್ ಸವಾರನಿಗೆ ತುರ್ತು ಚಿಕಿತ್ಸೆ ನೀಡಿ ಬದುಕಿಸಿದ ಪೊಲೀಸ್ ಪೇದೆ  ಎಸ್ ಶಿವಕುಮಾರನ್ ಕಾರ್ಯಕ್ಕೆ ಇದೀಗ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಎಗ್ಮೋರ್ ಸಿಗ್ನಲ್ ಬಳಿಯ ರಸ್ತೆಯಲ್ಲಿ ಬರುತ್ತಿದ್ದ 35 ವರ್ಷದ ಬೈಕ್ ಸವಾರ ಪ್ರಸನ್ನ  ಅಪಘಾತಕ್ಕೀಡಾಗಿ 20 ಮೀಟರ್ ದೂರಕ್ಕೆ ಬಿದ್ದಿದ್ದಾರೆ.  ಬಿದ್ದ ರಭಸಕ್ಕೆ ಬೈಕ್ ಸವಾರ ಪ್ರಜ್ಞೆ ಕಳೆದುಕೊಂಡಿದ್ದಾನೆ. ಒಂದು ಕ್ಷಣ ಬೈಕ್ ಸವಾರನ ಉಸಿರಾಟವೇ ನಿಂತುಹೋಗಿದೆ.  ತಕ್ಷಣವೇ ಕಾರ್ಯಪ್ರವೃತ್ತರಾದ ಮುಖ್ಯ ಪೇದೆ ಸವಾರನ ಪರಿಸ್ಥಿತಿ ಅವಲೋಕಿಸಿ ತುರ್ತು ಚಿಕಿತ್ಸೆ ನೀಡಿದ್ದಾರೆ.  ಶ್ವಾಸಕೋಶ ಹಾಗು ಹೃದಯವನ್ನ ಒತ್ತಿ ಉಸಿರಾಟ ಸರಾಗವಾಗಿ ನಡೆಯುವಂತೆ ಮಾಡಿದ್ದಾರೆ.

ತುರ್ತು ಚಿಕಿತ್ಸೆಯಿಂದ ಚೇತರಿಸಿಕೊಂಡ ಬೈಕ್ ಸವಾರನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಹೆಚ್ಚಿನ ನೀಡಲಾಯಿತು. ಪೊಲೀಸ್ ಇಲಾಖೆಗೆ ಆಯ್ಕೆಯಾದಾಗ ಕಲಿತ ವಿದ್ಯೆ ಸಹಾಯಕ್ಕೆ ಬಂದಿರೋದು ನಿಜಕ್ಕೂ ಸಂತಸ ತಂದಿದೆ ಎಂದು ಪೇದೆ 44 ವರ್ಷದ ಸ್ ಶಿವಕುಮಾರನ್ ಹೇಳಿದ್ದಾರೆ. 


 

click me!