ವಿಧಾನಪರಿಷತ್ತಿಗೆ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ

First Published Jun 4, 2018, 6:47 PM IST
Highlights

ಆಡಳಿತಾರೂಢ ಕಾಂಗ್ರೆಸ್ ನಿಂದ ನಾಲ್ವರು ಅವಿರೋಧ ಆಯ್ಕೆಯಾದರೆ, ಜೆಡಿಎಸ್ ನಿಂದ ಇಬ್ಬರು ಅಭ್ಯರ್ಥಿಗಳು ಅವಿರೋಧ ಆಯ್ಕೆ | ಪ್ರತಿಪಕ್ಷ ಬಿಜೆಪಿಯಿಂದ 5 ಮಂದಿ ವಿಧಾನಪರಿಷತ್ತಿಗೆ ಆಯ್ಕೆ

ಬೆಂಗಳೂರು: ವಿಧಾನಪರಿಷತ್ತಿಗೆ 11 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್ ನಿಂದ ನಾಲ್ವರು ಅವಿರೋಧ ಆಯ್ಕೆಯಾದರೆ, ಜೆಡಿಎಸ್ ನಿಂದ ಇಬ್ಬರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಪ್ರತಿಪಕ್ಷ ಬಿಜೆಪಿಯಿಂದ 5 ಮಂದಿ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದಾರೆ.

ವಿಧಾನಸಭೆ ಕಾರ್ಯದರ್ಶಿ ಕಚೇರಿಯಿಂದ ಅಧಿಕೃತ ಘೋಷಣೆ:

11 ಸ್ಥಾನಗಳಿಗೆ 11 ಮಂದಿಯಿಂದ ಮಾತ್ರ ನಾಮಪತ್ರ ಸಲ್ಲಿಕೆಯಾಗಿತ್ತು. ನಾಮಪತ್ರ ವಾಪಸು ಪಡೆಯುವ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಎಲ್ಲಾ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ.  ನಾಮಪತ್ರ ವಾಪಸ್ ಪಡೆಯಲು ಇಂದು 3 ಗಂಟೆಯವರಿಗೆ ಕಾಲಾವಕಾಶ ನಿಗದಿಯಾಗಿತ್ತು. 

ಯಾರ್ಯಾರು?

ಕಾಂಗ್ರೆಸ್ ನಿಂದ ಸಿ.ಎಂ.ಇಬ್ರಾಹಿಂ, ಕೆ. ಗೋವಿಂದರಾಜ್ ಮರು ಆಯ್ಕೆಯಾದರೆ, ಅರವಿಂದ ಕುಮಾರ್ ಅರಳಿ ಮತ್ತು ಕೆ.ಹರೀಶ್ ಕುಮಾರ್ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ

ಬಿಜೆಪಿಯಿಂದ ರಘನಾಥ್ ರಾವ್ ಮಲ್ಕಾಪುರೆ ಮಾತ್ರ ಮರು ಆಯ್ಕೆಯಾಗಿದ್ದಾರೆ. ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ, ಎಸ್ ರುದ್ರೇಗೌಡ, ರವಿಕುಮಾರ್ ಪರಿಷತ್ತಿಗೆ  ಆಯ್ಕೆಯಾದ ಇತರರು.

ಜೆಡಿಎಸ್ ನಿಂದ ಬಿ.ಎಂ.ಫಾರೂಕ್ ಮತ್ತು ಎಸ್.ಎಲ್ ಧರ್ಮೇಗೌಡ ಆಯ್ಕೆಯಾಗಿದ್ದಾರೆ.

ಈ ಕುರಿತು ಜೂನ್ 11 ರಂದು ಚುನಾವಣಾಧಿಕಾರಿಗಳು ಅಧಿಕೃತವಾಗಿ ಅಧಿಸೂಚನೆ ಪ್ರಕಟಿಸಲಿದ್ದಾರೆ.

click me!