
ಬೆಂಗಳೂರು(ಸೆ.27): ನಾಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದ್ದು ಪ್ರಾದೇಶಿಕ ಚುನಾವಣಾ ಆಯುಕ್ತರಾದ ಜಯಂತಿ ನೇತೃತ್ವದಲ್ಲಿ ಪ್ರಕ್ರಿಯೆ ನಡೆಯಲಿದೆ. ಈ ಚುನಾವಣಾ ಪ್ರಕ್ರಿಯೆಗೆ ನಗರ ಜಿಲ್ಲಾಧಿಕಾರಿ ಶಂಕರ್ , ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಾಕ್ಷಿಯಾಗಲಿದ್ದಾರೆ.
ಬಿಬಿಎಂಪಿ ಚುನಾವಣೆ :
ಒಟ್ಟು ಮತಗಳು - 269
ಮ್ಯಾಜಿಕ್ ನಂಬರ್ - 135
ಬಿಬಿಎಂಪಿ ನಂಬರ್ ಗೇಮ್ :ಪಕ್ಷಗಳ ಬಲಾಬಲ ಹೀಗಿದೆ
ಕಾಂಗ್ರೆಸ್ :
ಕಾರ್ಪೊರೇಟರ್ಗಳು - 76
ವಿಧಾನಸಭೆ ಸದಸ್ಯರು - 13
ವಿಧಾನ ಪರಿಷತ್ ಸದಸ್ಯರು - 15
ಸಂಸದರು - 02
ರಾಜ್ಯಸಭಾ ಸದಸ್ಯರು - 06
-----------------------------------
ಒಟ್ಟು - 112
ಜೆಡಿಎಸ್ :
ಕಾರ್ಪೊರೇಟರ್ಗಳು - 14
ವಿಧಾನಸಭೆ ಸದಸ್ಯರು - 03
ವಿಧಾನ ಪರಿಷತ್ ಸದಸ್ಯರು - 05
ಸಂಸದರು - 00
ರಾಜ್ಯಸಭಾ ಸದಸ್ಯರು - 01
-----------------------------------
ಒಟ್ಟು - 23
ಬಿಜೆಪಿ :
ಕಾರ್ಪೊರೇಟರ್ಗಳು - 99
ವಿಧಾನಸಭೆ ಸದಸ್ಯರು - 12
ವಿಧಾನ ಪರಿಷತ್ ಸದಸ್ಯರು - 08
ಸಂಸದರು - 03
ರಾಜ್ಯಸಭಾ ಸದಸ್ಯರು - 03
-------------------------------------------------------------------------------
ಒಟ್ಟು - 125
ಪಕ್ಷೇತರ ರಾಜ್ಯಸಭಾ ಸದಸ್ಯರು - 02 (ಬಿಜೆಪಿ ಬೆಂಬಲಿಸಬಹುದು)
ಪಕ್ಷೇತರ ಕಾರ್ಪೊರೇಟರ್ಗಳು - 07 (ಮೈತ್ರಿ ಬೆಂಬಲಿಗರು)
ಕಾಂಗ್ರೆಸ್ + ಜೆಡಿಎಸ್
112 + 23 = 135
ಬಿಜೆಪಿ = 125
ಪಕ್ಷೇತರರು =07 + 02
ಮೇಯರ್ ಚುನಾವಣೆಗೆ ನಡೆಯುವ ಪ್ರಮುಖ ಬೆಳವಣಿಗೆಗಳು
1) ಬೆಳಿಗ್ಗೆ 9 ರಿಂದ 10 ರೊಳಗೆ ನಾಮಪತ್ರ ಸಲ್ಲಿಕೆ
2) ಮೇಯರ್ ,ಉಪಮೇಯರ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
3) ನಾಮಪತ್ರ ವಾಪಸಾತಿಗೆ 10.30 ಗಂಟೆವರೆಗೂ ಸಮಯ
4) 11ಕ್ಕೆ ಅಧಿಕೃತ ಅಭ್ಯರ್ಥಿಯ ನಾಮಪತ್ರ ಘೋಷಣೆ
5) 11.30 ಗಂಟೆ ಕೌನ್ಸಿಲ್ ಹಾಲ್ನಲ್ಲಿ ಹಾಜರಿರೊ ಅಭ್ಯರ್ಥಿಗಳ ಏಣಿಕೆ
6) 259 ಮತದಾರರಿಂದ ಹಾಜರಾತಿ ಪುಸ್ತಕಕ್ಕೆ ಸಹಿ
7) 12ಕ್ಕೆ ಮೇಯರ್ ,ಉಪಮೇಯರ್ ಅಭ್ಯರ್ಥಿಗಳಿಗೆ ಚುನಾವಣೆ
8) ಮತದಾರರು ಕೈ ಎತ್ತುವ ಮೂಲಕ ಬೆಂಬಲ
9) ಚುನಾವಣಾ ನೋಡೆಲ್ ಅಧಿಕಾರಿಗಳು ಮತದಾರರ ಸಂಖ್ಯೆ ಏಣಿಕೆ
10) ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಅಧಿಕಾರಿಗಳಿಂದ ಮತದಾರರ ಸಂಖ್ಯೆ ಮಾಹಿತಿ
11) ಚುನಾವಣಾ ಆಯುಕ್ತರು ಮತ ಏಣಿಕೆ ಪರಿಶೀಲಸಿ ಅಂತಿಮವಾಗಿ 12.30 ಗಂಟೆಗೆ ಮೇಯರ್ ಘೋಷಣೆ
ಮೇಯರ್ ಅಭ್ಯರ್ಥಿಗಳು
1) ಕಾಂಗ್ರೆಸ್ ಮೇಯರ್ ಆಭ್ಯರ್ಥಿ
ಜಿ. ಪದ್ಮಾವತಿ
ಪ್ರಕಾಶ್ ನಗರ ವಾರ್ಡ್
4 ಬಾರಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದಾರೆ
2 ಬಾರಿ ಜೆಡಿಎಸ್ ಕಾರ್ಫೊರೇಟರ್ ಆಗಿ , ಮತ್ತೆ 2 ಬಾರಿ ಕಾಂಗ್ರೆಸ್ ಕಾರ್ಪೋರೇಟರ್ ಆಗಿ ಆಯ್ಕೆ
ಬಿಜೆಪಿ ಸುರೇಶ್ ಕುಮಾರ್ ವಿರುದ್ಧ ಶಾಸಕ ಆಭ್ಯರ್ಥಿಯಾಗಿಯೂ ಒಮ್ಮೆ ಸ್ಪರ್ಧೆ
ಹಿಂದುಳಿದ ವರ್ಗ -ಬಿ ವರ್ಗಕ್ಕೆ ಸೇರಿದ್ದಾರೆ
2) ಕಾಂಗ್ರೆಸ್ ಮೇಯರ್ ಅಭ್ಯರ್ಥಿ
ಪಿ. ಸೌಮ್ಯ ಶಿವಕುಮಾರ್
ಶಾಂತಿನಗರ ವಾರ್ಡ್
2 ಬಾರಿ ಕಾರ್ಫೋರೇಟರ್ ಆಗಿ ಆಯ್ಕೆಯಾಗಿದ್ದಾರೆ
ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ
ಸಾಮಾನ್ಯ ವರ್ಗಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿದವರು
ಎಂ.ಎ. ಪದವಿದರು
ಉಪ ಮೇಯರ್
ಉಪ ಮೇಯರ್ ರೇಸ್ನಲ್ಲಿ ರಾಧಾಕೃಷ್ಣ ವಾರ್ಡ್‌ನ ಆನಂದ್ ಹಾಗೂ ನಾಗಪುರ ವಾರ್ಡಿನ ಭದ್ರೇಗೌಡ ಇದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.