ಸುಪ್ರೀಂನಲ್ಲಿ ನಡೆದ ಕರ್ನಾಟಕ ಹಾಗೂ ತಮಿಳುನಾಡು ವಾದ-ವಿವಾದವೇನು?

By Internet DeskFirst Published Sep 27, 2016, 3:11 PM IST
Highlights

ಬೆಂಗಳೂರು (ಸೆ.27): ಕಾವೇರಿ ನದಿ ನೀರು ಹಂಚಿಕೆ ಸಂಬಂಧ ರಾಜ್ಯಕ್ಕೆ ಮತ್ತೆ ಹಿನ್ನೆಡೆಯಾಗಿದೆ. ಮುಂದಿನ 3 ದಿನಗಳ ಕಾಲ ತಮಿಳುನಾಡಿಗೆ ತಲಾ 6 ಸಾವಿರ ಕ್ಯುಸೆಕ್ ನೀರು ಹರಿಸಲು ಸುಪ್ರೀಂ ಆದೇಶ ನೀಡಿದೆ.

ಸುಪ್ರೀಂ ವಾದವೇನು?

Latest Videos

ಇದುವರೆಗೆ ಸುಪ್ರೀಂ ಕೋರ್ಟ್ ಆದೇಶವನ್ನು ಯಾಕೆ ಪಾಲಿಸಿಲ್ಲ ಎಂದ ಕೋರ್ಟ್

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಪರಸ್ಪರ ಸಹಕರಿಸಿಕೊಂಡು ಹೋಗಬೇಕು.

ಒಕ್ಕೂಟ ವ್ಯವಸ್ಥೆಯನ್ನು ಈ ಮೂಲಕ ಉಳಿಸಿಕೊಂಡು ಹೋಗಬೇಕೆಂದು ಸೂಚನೆ

ನಿಮ್ಮ ಸಮಸ್ಯೆ ಏನೇ ಇರಲಿ ಮೊದಲು ನೀರು ಹರಿಸಲೇಬೇಕೆಂದ ಸುಪ್ರೀಂ

ಮೊದಲು ನೀರು ಹರಿಸಿ ನಂತರ ಸ್ಪಷ್ಟನೆ ನೀಡಿ

ಈಗ ಕೇಂದ್ರ ಮಧ್ಯಸ್ಥಿಕೆ ವಹಿಸಲು ಈಗ ಸಾಧ್ಯವೇ? ಕೇಂದ್ರಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಸೂಚನೆ ನೀಡಿ

ನಾರಿಮನ್ ವಾದ ಏನು?

ನಮ್ಮಲ್ಲಿ ನೀರಿಲ್ಲ ಮತ್ತೆ ಒತ್ತಡ ಹೇರಬೇಡಿ. ನಮಗೆ ವಿಧಾನಮಂಡಲ ನಿರ್ಣಯವೇ ಅಂತಿಮ

ಎಲ್ಲವೂ ದೇವರ ಇಚ್ಚೆ ಮೇಲೆ ನಿರ್ಧಾರವಾಗುತ್ತದೆ

ತಮಿಳುನಾಡಿನ ವಾದದಂತೆ ನಮ್ಮ ಯಾವುದೇ ಪುರಸ್ಕಾರವನ್ನು ಆಲಿಸಬೇಡಿ ನಮ್ಮ ಬಳಿ ನೀರಿಲ್ಲ ನೀರು ಬಿಡೋಕೆ ಸಾಧ್ಯವಿಲ್ಲ

ಸರಿಯೋ ತಪ್ಪೋ ಒಂದು ನಿರ್ಣಯ ತೆಗೆದುಕೊಂಡಿದ್ದೇವೆ. ಡಿಸಂಬರ್'ವರೆಗೆ ಕಾಯುತ್ತೇವೆ.

ಮೆಟ್ಟೂರು ಡ್ಯಾಂನಲ್ಲಿ 51 ಟಿಎಂಸಿ ನೀರಿದೆ. ನಮಗೆ ಡಿಸಂಬರ್ ಅಂತ್ಯದವರೆಗೆ ನಮಗೆ ನಿರು ಬಿಡಲು ಸಾಧವಿಲ್ಲ

ಡಿಸಂಬರ್ ನಲ್ಲಿ ತಮಿಳುನಾಡಿಗೆ ಈಶಾನ್ಯ ಮಾರುತಗಳ ಮಳೆಯೂ ಸಿಗುತ್ತೆ.

ದೇವರು ಕೃಪೆ ಮಾಡಿದ್ರೆ ಮಳೆ ಬಂದರೆ ನೀರು ಬಿಡ್ತೀವಿ

ತಮಿಳುನಾಡು ಪರ ವಕೀಲರ ವಾದವೇನು?

ಈ ಪ್ರಕರಣದ ವಿಚಾರಣೆಯಿಂದ ನಾವು ದಣಿದು ಹೋಗಿದ್ದೇವೆ.

ಸುಪ್ರೀಂ ಆದೇಶ ಹೊರಡಿಸಿದ್ರೂ ಕರ್ನಾಟಕ ನೀರು ಬಿಡುತ್ತಿಲ್ಲ. ಬೆಂಗಳೂರಿಗೆ ಕಾವೇರಿ ನೀರು ಕೇಳುವುದು ಸರಿಯಲ್ಲ ಕರ್ನಾಟಕ ಮೊದಲಿನಿಂದಲೂ ಹಠಮಾರಿ ಧೋರಣೆ ಅನಿಸರಿಸುತ್ತಿದೆ. ಇದು ಸರಿಯಲ್ಲ ಇದರಿಂದ ಅರಾಜಕತೆ ಉಂಟಾಗುತ್ತದೆ.

ಹೀಗಾಗಿ ಕರ್ನಾಟಕದ ಯಾವುದೇ ಅರ್ಜಿಗಳನ್ನು ಪುರಸ್ಕರಿಸಬಾರದು.

click me!