
ಹೈದರಾಬಾದ್(ಜೂ.20): ಅಮೆರಿಕದಲ್ಲಿ ಟಾಲಿವುಡ್ ಸೆಕ್ಸ್ ರಾಕೆಟ್ ಸುದ್ದಿ ಚಿತ್ರರಂಗವನ್ನು ಅಲ್ಲಾಡಿಸಿದೆ. ಟಾಳಿವುಡ್ ನಟಿಯರನ್ನು ಸೆಕ್ಸ್ ಧಂಧೆಗೆ ದೂಡುತ್ತಿದ್ದ ದಂಪತಿ ಈಗಾಗಲೇ ಬಂಧಿಸಲ್ಪಟ್ಟಿದ್ದಾರೆ. ಆದರೆ ಟಾಲಿವುಡ್ ನಟಿಯರು ಈ ಕುರಿತು ನೀಡುತ್ತಿರುವ ಮಾಹಿತಿ ಮಾತ್ರ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ.
ಟಾಲಿವುಡ್ ಸೆಕ್ಸ್ ರಾಕೆಟ್ ಕುರಿತು ಇದೀಗ ಮತ್ತೋರ್ವ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕ ಮೊದುಗುಮ್ಮಿಡಿ ಕಿಶನ್ ತಮ್ಮನ್ನು ಕೂಡ ಅಮೆರಿಕದಲ್ಲಿ ನಡೆಯಲಿದ್ದ ಒಂದು ಇವೆಂಟ್ ಗೆ ಆಹ್ವಾನಿಸಿದ್ದ ಎಂದು ನಟಿ ಅನುಸೂಯಾ ಭಾರಧ್ವಾಜ್ ಹೇಳಿದ್ದಾರೆ.
2014ರಲ್ಲಿ ರಲ್ಲಿ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಶ್ರೀರಾಜ್ ಎಂಬಾತ ತಮ್ಮನ್ನು ಸಂಪರ್ಕಿಸಿ ಅಸಭ್ಯವಾಗಿ ವರ್ತಿಸಿದ್ದ ಎಂದಿರುವ ಅನುಸೂಯಾ, ನಂತರ 2016ರಲ್ಲಿ ಅಮೆರಿಕದಲ್ಲಿ ನಡೆಯಲಿರುವ ತೆಲಗು ಅಸೋಸೊಯೇಶನ್ ಕಾಯರ್ಯಕ್ರಮದಲ್ಲಿ ಭಾಗವಹಿಸುವಂತೆ ಕಿಶನ್ ತಮ್ಮನ್ನು ಕೋರಿದ್ದಾಗಿ ತಿಳಿಸಿದ್ದಾರೆ.
ಆದರೆ ಕಿಶನ್ ಮಾತನಾಡಿದ ಶೈಲಿಯಿಂದ ಅನುಮಾನಪಟ್ಟ ನಾನು ಆ ಕಾರ್ಯಕ್ರಮಕ್ಕೆ ಬರಲು ನಿರಾಕರಿಸಿದ್ದಾಗಿ ಭಾರಧ್ವಾಜ್ ಹೇಳಿದ್ದಾರೆ. ಅದ್ಯಾಗ್ಯೂ ಕಾರ್ಯಕ್ರಮದ ಪೋಸ್ಟರ್ ನಲ್ಲಿ ನನ್ನ ಫೋಟೋ ಹಾಕಿ ಕಿಶನ್ ಅಸಭ್ಯತೆ ಮೆರೆದಿದ್ದ ಎಂದು ಅವರು ಹರಿಹಾಯ್ದಿದ್ದಾರೆ.
ಇನ್ನು ಮತ್ತೋವರ್ವ ಟಾಲಿವುಡ್ ನಟಿ ಸಂಜನಾ ಗಲ್ರಾನಿ ಕೂಡ ಇಂತದ್ದೇ ಆರೋಪ ಮಾಡಿದ್ದು, ನಟಿಯರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಿಶನ್ ಅವರನ್ನು ಸಂಪರ್ಕಿಸಿ ಸೆಕ್ಸ್ ಧಂಧೆಗೆ ಪ್ರಚೋದನೆ ನೀಡುತ್ತಿದ್ದ ಎಂದು ಹೇಳಿದ್ದಾರೆ. ಸದ್ಯ ಕಿಶನ್ ದಂಪತಿ ವಿರುದ್ದ ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯೂರಿಟಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.