ಸ್ವದೇಶಿ ಜಿಪಿಎಸ್ ’ನಾವಿಕ್’ ಲೋಕಾರ್ಪಣೆಗೆ ಸಿದ್ಧ

First Published Jun 20, 2018, 12:54 PM IST
Highlights

ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಅಮೆರಿಕದ ಜಿಪಿಎಸ್‌ಗೆ  ಪರ‌್ಯಾಯವಾಗಿ ಭಾರತ ಸರ್ಕಾರ ಅಭಿವೃದ್ಧಿಪಡಿಸಿರುವ ಸ್ವದೇಶಿ ಜಿಪಿಎಸ್ ‘ನಾವಿಕ್’ ಶೀಘ್ರದಲ್ಲೇ ತನ್ನ ಸೇವೆ ಆರಂಭಿಸಲಿದೆ.

ನವದೆಹಲಿ (ಜೂ. 20): ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಅಮೆರಿಕದ ಜಿಪಿಎಸ್‌ಗೆ ಪರ‌್ಯಾಯವಾಗಿ ಭಾರತ ಸರ್ಕಾರ ಅಭಿವೃದ್ಧಿಪಡಿಸಿರುವ ಸ್ವದೇಶಿ ಜಿಪಿಎಸ್ ‘ನಾವಿಕ್’ ಶೀಘ್ರದಲ್ಲೇ ತನ್ನ ಸೇವೆ ಆರಂಭಿಸಲಿದೆ.

ತನ್ಮೂಲಕ ಸ್ವದೇಶಿ ಜಿಪಿಎಸ್ ಹೊಂದಿದ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಲಿದೆ.‘ನಾವಿಕ್’ ಸೇವೆ ಲೋಕಾರ್ಪಣೆಗೊಳ್ಳುವ ಅಂತಿಮ ಹಂತದಲ್ಲಿದೆ. ಅದಾದ ಬಳಿಕ ಮೊಬೈಲ್ ಫೋನ್ ಹಾಗೂ ಕಾರಿನ ದಿಕ್ಸೂಚಿ ವ್ಯವಸ್ಥೆಯಲ್ಲಿ ‘ನಾವಿಕ್’  ಮೂಲಕವೇ ದಾರಿ ಹುಡುಕಿಕೊಳ್ಳಬಹುದಾಗಿರುತ್ತದೆ.

‘ನಾವಿಕ್’ ಸೇವೆ ಆರಂಭಿಸುವ ಸಂಬಂಧ ಕೋರಿಕೆ  ಪ್ರಸ್ತಾವವನ್ನು ಕೇಂದ್ರ ಸರ್ಕಾರ ಆಹ್ವಾನಿಸಿದೆ. ಇಸ್ರೋ ನಾವಿಕ್ ಸೇವೆಗಾಗಿ 7 ಉಪಗ್ರಹ ಉಡಾವಣೆ ಮಾಡಿದೆ. ಅಮೆರಿಕ ಬಳಿ ‘ಜಿಪಿಎಸ್’, ರಷ್ಯಾ ಬಳಿ ‘ಗ್ಲೋನಾಸ್’, ಐರೋಪ್ಯ ಒಕ್ಕೂಟ ‘ಗೆಲಿಲಿಯೋ’ ದಿಕ್ಸೂಚಿ ವ್ಯವಸ್ಥೆ ಇದೆ. ಚೀನಾ ಬೀಡೌ’ ಎಂಬ ವ್ಯವಸ್ಥೆ ರೂಪಿಸುತ್ತಿದೆ. 

click me!