
ನವದೆಹಲಿ(ಜೂ.20): ‘ಭಾರತ ತಂಡದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮಗ ಅರ್ಜುನ್ ಕೂಡ ತಂಡದ ಎಲ್ಲರಂತೆ ಒಬ್ಬ ಆಟಗಾರನಷ್ಟೇ ಎಂದು ಭಾರತ ತಂಡದ ಅಂಡರ್-19 ಬೌಲಿಂಗ್ ಕೋಚ್ ಸನತ್ ಕುಮಾರ್ ಹೇಳಿದ್ದಾರೆ.
ಸನತ್ ಎರಡನೇ ಬಾರಿಗೆ ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುತ್ತಿದ್ದು, ಸದ್ಯ ಶ್ರೀಲಂಕಾ ವಿರುದ್ಧದ ಸರಣಿಗಾಗಿ ಅಂಡರ್-19 ತಂಡಕ್ಕೆ ಬೌಲಿಂಗ್ ತರಬೇತಿ ನೀಡುತ್ತಿದ್ದಾರೆ. ‘ಒಬ್ಬ ಕೋಚ್ ಆಗಿ ನನಗೆ ಎಲ್ಲರೂ ಸಮಾನರು. ಹಾಗೆಯೇ ಅರ್ಜುನ್ ಕೂಡ. ಹುಡುಗರಲ್ಲಿರುವ ಪ್ರತಿಭೆಯನ್ನು ಹೊರತರುವುದಷ್ಟೇ ನನ್ನ ಕೆಲಸ. ಅಕ್ಟೋಬರ್‌ನಲ್ಲಿ
ಬಾಂಗ್ಲಾದಲ್ಲಿ ನಡೆಯಲಿರುವ ಅಂಡರ್-19 ಏಷ್ಯಾಕಪ್‌ವರೆಗೂ ಕಾರ್ಯನಿರ್ವಹಿಸಲಿದ್ದೇನೆ’ ಎಂದು ಸನತ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.