
ಮೇಷ : ದಶಮದ ಕೇತುವಿನಿಂದ ಉದ್ಯೋಗಕ್ಕೆ ಹಾನಿ, ಅನಾರೋಗ್ಯದಿಂದ ಉದ್ಯೋಗ ನಷ್ಟ, ಗಂಧರ್ವರ ಆರಾಧನೆ ಮಾಡಿಕೊಳ್ಳಿ
ವೃಷಭ : ರಾಶಿಯಲ್ಲೇ ಚಂದ್ರನಿರುವುದರಿಂದ ಭೂರಿ ಭೋಜನ, ಅಜೀರ್ಣವೂ ಕಾಡಲಿದೆ, ಆಯುರ್ವೇದದ ಮೊರೆ ಹೋಗಿ
ಮಿಥುನ : ದ್ವಿತಿಯಾಧಿಪತಿ ವ್ಯಯದಲ್ಲಿ ಉಚ್ಛನಾಗಿರುವುದರಿಂದ ಧನಾಗಮನ, ರಾಹು ದೋಷಕ್ಕಾಗಿ ನಾಗಾರಾಧನೆ ಮಾಡಿ
ಕಟಕ : ಏಕಾದಶದ ಉಚ್ಛ ಚಂದ್ರ ಶುಭ ಲಾಭವನ್ನು ತರಲಿದ್ದಾನೆ, ದ್ರವ ವ್ಯಾಪಾರಿಗಳಿಗೆ ಲಾಭದ ದಿನ, ಅನ್ನಪೂರ್ಣೇಶ್ವರಿ ದರ್ಶನ ಮಾಡಿ
ಸಿಂಹ : ರಾಶ್ಯಾಧಿಪತಿ ಅಷ್ಟಮದಲ್ಲಿರುವುದರಿಂದ ರೋಗ ನಿವಾರಣೆ, ಆದರೆ ಶತ್ರು ಯುತನಾದ್ದರಿಂದ ಸ್ವಲ್ಪ ಸತ್ವ ಬಾಧೆ
ಕನ್ಯಾ : ಬಾಧಾಸ್ಥಾನದಲ್ಲಿ ರವಿ-ಶುಕ್ರರ ಯುತಿಯಿಂದ ದಾಂಪತ್ಯ ಕಲಹ, ಸಮಸ್ಯೆ ನಿವಾರಣೆಯೂ ಆಗಲಿದೆ
ತುಲಾ : ಅಷ್ಟಮದ ಚಂದ್ರ ಸ್ವಲ್ಪ ಬಾಧೆಯನ್ನುಂಟುಮಾಡುತ್ತಾನೆ ಆದರೆ ಶೀಘ್ರ ಗುಣಮುಖವೂ ಆಗಲಿದೆ, ಚಿಂತೆ ಬೇಡ.
ವೃಶ್ಚಿಕ : ಚತುರ್ಥ ಭಾವಕ್ಕೆ ಗುರು ದೃಷ್ಟಿ ಯಿರುವಿದರಿಂದ ಸುಖ ಪ್ರಾಪ್ತಿ, ಹೆಣ್ಣುಮಕ್ಕಳಿಂದ ಸಮಾಧಾನ
ಧನಸ್ಸು : ಸಾಡೇಸಾತ್ ನಿಂದಾಗಿ ಸ್ವಲ್ಪ ಕಷ್ಟದ ದಿನಗಳು, ಹಣ, ಒಡವೆಗಳನ್ನು ಕಳೆದುಕೊಳ್ಳುವ ಸಂಭವ, ಜಾಗರೂಕರಾಗಿರಿ
ಮಕರ : ಹೆಣ್ಣುಮಕ್ಕಳಿಂದ ಮನಸ್ಸಿಗೆ ಸಮಾಧಾನ, ಲಾಭದ ದಿನವಾಗಿರಲಿದೆ, ಶಿವ ಪಂಚಾಕ್ಷರಿ ಜಪ ಮಾಡಿಕೊಳ್ಳಿ
ಕುಂಭ : ಮದುವೆ ಕಾರ್ಯದಲ್ಲಿ ಸಾಧನೆ, ಅನುಕೂಲಕರ ವಾತಾವರಣ, ಶುಭದಿನ, ಮೃತ್ಯುಂಜಯ ಸ್ಮರಣೆ ಮಾಡಿ
ಮೀನ : ನಾಳೆ ಶೃಂಗೇರಿಯಲ್ಲಿ ನಡೆಯುವ ಜಗದ್ಗುರುಗಳ ವರ್ಧಂತಿ ಮಹೋತ್ಸವದಲ್ಲಿ ಪಾಲ್ಗೊಳ್ಳಿ ಗುರು ಅನುಗ್ರಹ ದೊರೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.