ಯಡ್ಡಿಯೂರಪ್ಪ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಹೇಳಿ ಕೊನೆಗೆ ಕೊಟ್ಟಿದ್ದೇನು?

By Suvarna Web DeskFirst Published Mar 21, 2018, 9:16 PM IST
Highlights
  • ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ, ಯಡ್ಡಿಯೂರಪ್ಪ ಹಾಗೂ ಈಶ್ವರಪ್ಪನವರ ವಿರುದ್ದ ವಾಗ್ದಾಳಿ
  • ಕಾಂಗ್ರೆಸ್’ನ ಯಾವ ಶಾಸಕರಾರೂ ಬಿಜೆಪಿ ಸೇರುವುದಿಲ್ಲ

ಶಿವಮೊಗ್ಗ: ಬಿಜೆಪಿಯ ಭದ್ರಕೋಟೆ ಎಂದೇ ಹೆಸರಾಗಿರುವ ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ, ಯಡ್ಡಿಯೂರಪ್ಪ ಹಾಗೂ ಈಶ್ವರಪ್ಪನವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಯಡ್ಡಿಯೂರಪ್ಪ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಹೇಳಿ ಕೊನೆಗೆ ಕೊಟ್ಟಿದ್ದೇನು ಎಂದು ಪ್ರಶ್ನಿಸಿರುವ ಸಚಿವ ಖರ್ಗೆ ಚುನಾವಣೆ ಹೊಸ್ತಿನಲ್ಲಿ ನಿಂತಿರುವ ರಾಜ್ಯದಲ್ಲಿ ಬಿಜೆಪಿ ಮುಖಂಡರು ಅಸ್ತಿತ್ವ ಉಳಿಸಿಕೊಳ್ಳಲು ಇಲ್ಲಸಲ್ಲದ್ದನ್ನ ಹೇಳುತ್ತಿದ್ದಾರೆ. ಬಿಜೆಪಿ ಮುಖಂಡರು ಹೇಳಿದಂತೆ ಕಾಂಗ್ರೆಸ್’ನ ಯಾವ ಶಾಸಕರಾರೂ ಬಿಜೆಪಿ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಯಡಿಯೂರಪ್ಪ, ಈಶ್ವರಪ್ಪ ಹೇಳಿದ್ದು ಯಾವುದೂ ನಿಜ ಆಗ್ತಾ ಇಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ದ ಆರೋಪ ಮಾಡಲು ಅವರಿಗೆ ಯಾವುದೇ ವಿಷಯ ಸಿಗ್ತಾ ಇಲ್ಲ. ಹಾಗಾಗಿ ಈ ರೀತಿ ಚಟಪಟಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ವಿರುದ್ದ ಹೇಳಿಕೆ ನೀಡಿರುವ ವಿಷಯದಲ್ಲಿ ಹರ್ಷ ಮೊಯಿಲಿಯವರಿಗೆ ನೋಟಿಸ್ ನೀಡಲಾಗಿದೆ. ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷ ಟೇಕ್ ಆಫ್ ಆಗುವುದಿಲ್ಲವೆಂದು ಹೇಳುತ್ತಿದ್ದರು ನಾವು ಅಧಿಕಾರವನ್ನು ಸಂಪೂರ್ಣ ಮಾಡಿದ್ದೇವೆ. ಕಾಂಗ್ರೆಸ್ ನಿಂದ ಯಾವ ಮಂತ್ರಿಯೂ ಬಿಜೆಪಿ ಸೇರೋಲ್ಲವೆಂದು  ಹೇಳಿದರು.

click me!