ಸಂಸತ್ತಿನೆದುರು ಪಾಶ್ಚಾತ್ಯ ಉಡುಗೆ ತೊಟ್ಟು ಪೋಸ್: ಸಂಸದೆಯರು ಟ್ರೋಲ್!

Published : May 29, 2019, 12:36 PM ISTUpdated : May 29, 2019, 12:37 PM IST
ಸಂಸತ್ತಿನೆದುರು ಪಾಶ್ಚಾತ್ಯ ಉಡುಗೆ ತೊಟ್ಟು ಪೋಸ್: ಸಂಸದೆಯರು ಟ್ರೋಲ್!

ಸಾರಾಂಶ

ಸಂಸತ್ತಿಗೆ ಪ್ರವೆಶಿಸಿದ ಮೊದಲ ದಿನವೇ ಪಾಶ್ಚಾತ್ಯ ಉಡುಗೆ ಧರಿಸಿದ್ದ ಟಿಎಂಸಿ ಸಂಸದೆಯರು| ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ನಾಯಕಿಯರು ಫುಲ್ ಟ್ರೋಲ್!

ನವದೆಹಲಿ[ಮೇ.29]: ಲೋಕಸಭೆಗೆ ಆಯ್ಕೆಯಾದ ಟಿಎಂಸಿಯ ಮಿಮಿ ಚಕ್ರವರ್ತಿ ಹಾಗೂ ನುಸ್ರುತ್‌ ಜಹಾನ್‌ ಅವರು ಪಾಶ್ಚಿಮಾತ್ಯ ಸಂಸ್ಕೃತಿ ಬಿಂಬಿಸುವ ಉಡುಗೆಯಲ್ಲಿ ಸಂಸತ್ತಿನ ಎದುರು ಕಾಣಿಸಿಕೊಂಡಿದ್ದಕ್ಕಾಗಿ ಟ್ರೋಲಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಹೊಸ ಲೋಕಸಭೆಯಲ್ಲಿ 29 ವರ್ಷದ ಬೆಂಗಾಲಿ ಬೆಡಗಿ, ಎಲ್ಲಿಯ ಸಂಸದೆ?

ಸಂಸತ್ತಿನ ಎದುರು ಬಂಗಾಳಿ ನಟಿಯರಾಗಿದ್ದ ಮಿಮಿ ಹಾಗೂ ನುಸ್ರುತ್‌ ಕ್ಯಾಮೆರಾಗೆ ಪೋಸ್‌ ನೀಡಿದ್ದರು. ಈ ಫೋಟೋ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಇದು ಫೋಟೋ ಸ್ಟುಡಿಯೋ ಅಲ್ಲ. ಮಿಮಿ ಸಂಸದೆಯಾಗಲು ಅರ್ಹಳಲ್ಲ ಎಂದೆಲ್ಲಾ ಟೀಕಿಸಿದ್ದಾರೆ.

ಮತ್ತೆ ಕೆಲವರು ಸಾಮಾನ್ಯವಾಗಿ ಮಹಿಳಾ ಸಂಸದರು ಸೀರೆಯಲ್ಲಿ ಸಂಸತ್ತಿಗೆ ಆಗಮಿಸುತ್ತಾರೆ. ಆದರೆ, ಟಿಎಂಸಿಯ ಈ ಇಬ್ಬರು ಸಂಸದೆಯರು ವಿಶಿಷ್ಟಉಡುಗೆಯಲ್ಲಿ ಆಗಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಲ ಬದಲಾಗಿದೆ ನಂಬಲೇಬೇಕು, ಇವರಿಬ್ಬರು ನೂತನ ಎಂಪಿಗಳು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!