
ಬೆಂಗಳೂರು (ಜ.30): ಚಂದ್ರ ಗ್ರಹಣ ಪ್ರಯುಕ್ತ ನಾಳೆ ತಿರುಪತಿ ತಿಮ್ಮಪ್ಪ ಸೇರಿದಂತೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ.
ನಾಳೆ ಧರ್ಮಸ್ಥಳದ ಮಂಜುನಾಥ ದರ್ಶನವೂ ಸಿಗುವುದಿಲ್ಲ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲವೂ ಬಂದ್ ಆಗಲಿದೆ. ಖಗ್ರಾಸ ಚಂದ್ರ ಗ್ರಹಣವಾದ ನಾಳೆ ಬಹುತೇಕ ದೇವರಿಗೆ ಪೂಜೆ ಇರಲ್ಲ. ದೇಶದ ಮತ್ತು ರಾಜ್ಯ ಹಲವು ಹಿಂದೂ ದೇವಾಲಯಗಳ ದರ್ಶನ ಇರುವುದಿಲ್ಲ.
ದಕ್ಷಿಣ ಕಾಶಿ ನಂಜನಗೂಡು ಹುಣ್ಣಿಮೆ ತೇರಿನ ಸಮಯ ಬದಲಾವಣೆಯಾಗಲಿದೆ. ರಾತ್ರಿ 8 ಗಂಟೆಗೆ ಬದಲಾಗಿ ಸಂಜೆ 4.30 ಕ್ಕೆ ಹುಣ್ಣಿಮೆ ತೇರು ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.