ಟಿಟಿಡಿ ಆಭರಣ ಎಲ್ಲಿದೆ ಎಂದು ಪವನ್ ಕಲ್ಯಾಣ್ ಗೆ ಗೊತ್ತಾ?

First Published Jun 22, 2018, 11:04 AM IST
Highlights

ಟಿಟಿಡಿ ಆಭರಣ ಎಲ್ಲಿದೆ ಎಂದು ಪವನ್ ಕಲ್ಯಾಣ್ ಗೆ ಗೊತ್ತಾ?

ನಾಪತ್ತೆಯಾಗಿರುವ ಆಭರಣ ಮಧ್ಯಪ್ರಾಚ್ಯದಲ್ಲಿದೆ ಎಂದ ಪವನ್

ಹಿರಿಯ ಐಪಿಎಸ್ ಅಧಿಕಾರಿಯಿಂದ ಸಿಕ್ಕಿದೆಯಂತೆ ಮಾಹಿತಿ

ಆಂಧ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪವನ್ 

ಹೈದರಾಬಾದ್(ಜೂ.22): ತಿರುಪತಿ ತಿರುಮಲ ದೇವಾಸ್ಥಾನದ ಆಭರಣ ನಾಪತ್ತೆ ಪ್ರಕರಣ ಕುರಿತು ಟಾಲಿವುಡ್ ನಟ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಣ್ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ. ತಿರುಪತಿ ತಿರುಮಲ ದೇವಾಸ್ಥಾನದ ನಾಪತ್ತೆಯಾಗಿರುವ ಆಭರಣಗಳು ಮಧ್ಯ ಪ್ರಾಚ್ಯದಲ್ಲಿವೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಆಭರಣ ನಾಪತ್ತೆಯಾಗಿರುವ ಬಗ್ಗೆ ಆಂಧ್ರ ಪ್ರದೇಶ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೇ ಇರುವ ಬಗ್ಗೆ ಪವನ್ ಅಪಹಾಸ್ಯ ಮಾಡಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಪವನ್ ಕಲ್ಯಾಣ್, ಕೆಲವು ವರ್ಷಗಳ ಹಿಂದೆ ವಿಮಾನ ನಿಲ್ದಾಣದಲ್ಲಿ  ಹಿರಿಯ ಐಪಿಎಸ್ ಅಧಿಕಾರಿಯನ್ನು ಭೇಟಿಯಾದಾಗ, ಟಿಟಿಡಿಯಲ್ಲಿ ನಾಪತ್ತೆಯಾಗಿರುವ ಅಭರಣಗಳ ಬಗ್ಗೆ ತಮಗೆ ಮಾಹಿತಿ ನೀಡಿದ್ದರು ಎಂದು ಪವನ್ ತಿಳಿಸಿದ್ದಾರೆ. ಈ ಆಭರಣ ನಾಪತ್ತೆ ಬಗ್ಗೆ ವಿರೋಧ ಪಕ್ಷದ ನಾಯಕರಿಗೂ ಅರಿವು ಇದೆ ಎಂದು ಅವರು ಹೇಳಿದ್ದಾರೆ.

pic.twitter.com/SRsmpFrSb8

— Pawan Kalyan (@PawanKalyan)

ನಮ್ಮ ದೇಶದಿಂದ ಮಧ್ಯ ಪ್ರಾಚ್ಯಕ್ಕೆ  ಖಾಸಗಿ ವಿಮಾನದಲ್ಲಿ ಆಭರಣ ರವಾನೆಯಾಗಿದೆ. ಟಿಟಿಡಿಯ ಪ್ರಧಾನ ಅರ್ಚಕರ ಕಳವಳ ನನಗೆ ಅಚ್ಚರಿ ತರಿಸಿಲ್ಲ, ಬಾಲಾಜಿ ಮೂಕರಾಗಿದ್ದಾರೆ ಎಂದು ದರೋಡೆಕೋರರು ತಿಳಿದುಕೊಂಡಿದ್ದಾರೆ. ಗುಲಾಬಿ ಬಣ್ಣದ ವಜ್ರ ಹಾಗೂ ಮತ್ತಿತರರ ಆಭರಣಗಳು ನಾಪತ್ತೆಯಾಗಿದೆ ಎಂದು ಮಾಜಿ ಅರ್ಚಕ ಎ,ವಿ ರಾಮಣ್ಣ ದೀಕ್ಷಿತ್ ಆರೋಪಿಸಿದ್ದಾರೆ. ಇದಕ್ಕೆಲ್ಲಾ ಆಂಧ್ರ ಪ್ರದೇಶ ಸರ್ಕಾರ ಹೊಣೆ ಎಂದು ಹೇಳಿದ್ದಾರೆ ಎಂದು ಪವನ್ ಕಲ್ಯಾಣ್ ಹರಿಹಾಯ್ದಿದ್ದಾರೆ.

Entire Nation is closely watching,how TDP & YSRCP will respond in this TTD jewels robbery issue? Whoever has robbed the Jewellery of Lord Balaji & the accomplices who supported the Robbers,they all will rot in hell & they will face the wrath of Kaliyuga Daivam ‘Lord Balaji’.

— Pawan Kalyan (@PawanKalyan)
click me!