ಅಮೆರಿಕಾಗೇ ಭಾರತ ಬಿಗ್ ಶಾಕ್

First Published Jun 22, 2018, 10:46 AM IST
Highlights

ಭಾರತದಿಂದ ರಫ್ತಾಗುವ ಹಲವು ಉತ್ಪನ್ನಗಳ ಮೇಲೆ ಸುಂಕ ಹೇರಿ ಭಾರಿ ಆರ್ಥಿಕ ಹೊರೆ ಸೃಷ್ಟಿಸಿದ್ದ ಅಮೆರಿಕಕ್ಕೆ ಭಾರತ ತಿರುಗೇಟು ನೀಡಿಕೆ ಮುಂದುವರಿಸಿದೆ. ಅಮೆರಿಕದ 29 ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಭಾರತ ಏರಿಸಿ ಅಮೆರಿಕಕ್ಕೆ ಎದಿರೇಟು ಕೊಟ್ಟಿದೆ. 

ನವದೆಹಲಿ: ಭಾರತದಿಂದ ರಫ್ತಾಗುವ ಹಲವು ಉತ್ಪನ್ನಗಳ ಮೇಲೆ ಸುಂಕ ಹೇರಿ ಭಾರಿ ಆರ್ಥಿಕ ಹೊರೆ ಸೃಷ್ಟಿಸಿದ್ದ ಅಮೆರಿಕಕ್ಕೆ ಭಾರತ ತಿರುಗೇಟು ನೀಡಿಕೆ ಮುಂದುವರಿಸಿದೆ. ಅಮೆರಿಕದ 29 ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಭಾರತ ಏರಿಸಿ ಅಮೆರಿಕಕ್ಕೆ ಎದಿರೇಟು ಕೊಟ್ಟಿದೆ. 
 
ಈ ಪ್ರಕಾರ ಕಡಲೆಕಾಳು, ಕಡಲೇಬೇಳೆ ಹಾಗೂ ಚನ್ನಂಗಿ ಬೇಳೆ ಸೇರಿದಂತೆ ಹಲವು ಉತ್ಪನ್ನಗಳ ಸುಂಕವನ್ನು ಶೇ.30ರಿಂದ ಶೆ.70ಕ್ಕೆ ಹೆಚ್ಚಿಸಲಾಗಿದೆ. ಇತ್ತೀಚೆಗೆ ಉಕ್ಕು ಹಾಗೂ ಅಲ್ಯುಮಿನಿಯಂ ಪದಾರ್ಥಗಳ ಮೇಲೆ ಸುಂಕ ಹೇರುವ ಮೂಲಕ 1650 ಕೋಟಿ ರು. ಆರ್ಥಿಕ ಹೊರೆಯನ್ನು ಅಮೆರಿಕ ವಿಧಿಸಿತ್ತು. 

ಇದಕ್ಕೆ ಪ್ರತಿಯಾಗಿ ಅಮೆರಿಕದ ಕೆಲವೊಂದು ಮೋಟರ್ ಸೈಕಲ್‌ಗಳು, ಕಬ್ಬಿಣ, ಉಕ್ಕು ಸರಕುಗಳು ಸೇರಿದಂತೆ 30 ಪದಾರ್ಥಗಳ ಮೇಲಿನ ಸೀಮಾಸುಂಕವನ್ನು ಶೇ.50 ರಷ್ಟು ಏರಿಕೆ ಮಾಡಬೇಕು ಎಂದು ವಿಶ್ವ ವ್ಯಾಪಾರ ಸಂಘಟನೆ ಗೆ ಪರಿಷ್ಕೃತ ಪಟ್ಟಿ ಸಲ್ಲಿಸಿತ್ತು. ಅದರ ಬೆನ್ನಲ್ಲೇ ಮತ್ತಷ್ಟು ಉತ್ಪನ್ನಗಳ ಸುಂಕವನ್ನು ಭಾರತ ಹೆಚ್ಚಿಸಿದೆ.

click me!