ಶಿವಮೊಗ್ಗದಲ್ಲಿ 3 ಮಾಜಿ ಸಿಎಂ ಪುತ್ರರ ಕದನ: ಗೆಲ್ಲೋರ್‍ಯಾರು..?

By Web DeskFirst Published Oct 15, 2018, 9:23 AM IST
Highlights

ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರ ನಡುವಿನ ಕದನಕ್ಕೆ ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ವೇದಿಕೆಯಾಗಿದೆ. ಹಾಗಾದ್ರೆ ಯಾರು ಅವರು ಇಲ್ಲಿದೆ ವಿವರ.

ಶಿವಮೊಗ್ಗ, [ಅ.15]: ರಾಜ್ಯದಲ್ಲಿ ಎದುರಾಗಿರುವ ಉಪಚುನಾವಣೆ ರಂಗೇರಿದ್ದು, ಪ್ರತಿಷ್ಠಿತ ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಈಗ ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರ ನಡುವಿನ ಕದನಕ್ಕೆ ವೇದಿಕೆಯಾಗಲಿದೆ. 

ಬಿಜೆಪಿ ಅಭ್ಯರ್ಥಿಯಾಗಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹೆಸರು ಘೋಷಿಸಲಾಗಿದೆ. ಇನ್ನು ಸಮ್ಮಿಶ್ರ ಸರ್ಕಾರದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪರ ಕಣಕ್ಕಿಳಿಯುತ್ತಿದ್ದಾರೆ.

ಮಧು ಬಂಗಾರಪ್ಪಗೆ ಬಯಸದೆ ಬಂದ ಭಾಗ್ಯ..!

ಇವರಿಬ್ಬರ ನಡುವೆ ಮಾಜಿ ಸಿಎಂ ಜೆ. ಎಚ್.ಪಟೇಲರ ಪುತ್ರ, ಜೆಡಿಯು ಮುಖಂಡ ಮಹಿಮಾ ಪಟೇಲ್ ಕೂಡ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ. ಬಿ.ವೈ.ರಾಘವೇಂದ್ರ ಅವರಿಗೆ ಇದು ಎರಡನೇ ಲೋಕಸಭಾ ಚುನಾವಣೆಯಾಗಿದ್ದರೆ, ಮಧು ಬಂಗಾರಪ್ಪ ಮತ್ತು ಮಹಿಮಾ ಪಟೇಲ್ ಅವರಿಗೆ ಇದು ಪ್ರಥಮ ಲೋಕಸಭಾ ಚುನಾವಣೆ. ರಾಘವೇಂದ್ರ ಅವರಿಗೆ ತಂದೆಯ ವರ್ಚಸ್ಸು, ಪಕ್ಷದ ವರ್ಚಸ್ಸು ಬೆಂಬಲಕ್ಕಿದ್ದರೆ, ಮಧು ಬಂಗಾರಪ್ಪ ಅವರಿಗೆ ಅವರದೇ ವರ್ಚಸ್ಸು ಕೆಲಸ ಮಾಡಬೇಕಿದೆ. 

ಶಿವಮೊಗ್ಗವನ್ನು ನಮಗೇ ಬಿಡಿ : ಎಚ್‌ಡಿಕೆ

ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ಅವರ ಪಾಲಿಗೆ ಪ್ಲಸ್ ಪಾಯಿಂಟ್. ಈ ನಡುವೆ, ಮಹಿಮಾ ಪಟೇಲ್ ತಾವೂ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಫರ್ಧಿಸುವುದಾಗಿ ದಿಢೀರ್ ಘೋಷಿಸಿದ್ದು, ಇದರೊಂದಿಗೆ ಕದನ ಕಣ ಇನ್ನಷ್ಟು ಕಳೆಗಟ್ಟಿದಂತಾಗಿದೆ. 

ಆದರೆ ಅವರ ಜೊತೆಗೆ ಇಲ್ಲಿ ಯಾವ ನಾಯಕರೂ ಇಲ್ಲ, ಜಿಲ್ಲೆಯಲ್ಲಿ ಜೆಡಿಯು ಪಕ್ಷಕ್ಕೆ ಸಂಘಟನೆಯೂ ಇಲ್ಲ. ಇದ್ರಿಂದ ರಾಘವೇಂದ್ರ ಹಾಗೂ ಮಧು ಬಂಗಾರಪ್ಪ ನಡುವೆ ತೀವ್ರ ಪೈಪೋಟಿ ನಡೆಯಲಿ ಎನ್ನಬಹುದು. ಶಿವಮೊಗ್ಗ ಬಿಜೆಪಿಯ ಭದ್ರಕೋಟೆಯಾಗಿದ್ದು, ಮತ್ತೆ ಕಮಲ ಅರಳುಸ ಸಾಧ್ಯತೆಗಳು ಹೆಚ್ಚಿವೆ.

 ಮತ್ತೊಂದೆಡೆ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಮೈತ್ರಿಯಿಂದ ಎರಡು ಪಕ್ಷಗಳ ಮತಗಳು ಮಧು ಬಂಗಾರಪ್ಪ ಕಡೆ ವಾಲಿದರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ. ಒಟ್ಟಿನಲ್ಲಿ ಮೂವರು ಮುಖ್ಯಮಂತ್ರಿಗಳ ಕದನ ತುರುಸಿನಿಂದ ಕೂಡಿದ್ದು, ಮತದಾರ ಯಾರನ್ನು ಕೈಹಿಡಿಯಲಿದ್ದಾನೆ ಎನ್ನುವುದನ್ನು ಕಾದುನೋಡಬೇಕಿದೆ.

click me!