ರಾತ್ರಿಗಿಂತ ಹಗಲಿನ ವೇಳೆಯೇ ರಸ್ತೆ ಅಪಘಾತ ಜಾಸ್ತಿ..!

By Web DeskFirst Published Oct 15, 2018, 9:14 AM IST
Highlights

2017ರಲ್ಲಿ ಸಂಭವಿಸಿದ ಅಪಘಾತಗಳ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ವರದಿಯ ಪ್ರಕಾರ, ಭಾರೀ ಮಳೆ, ಮಂಜು ಕವಿದ ವಾತಾವರಣ, ಆಲಿಕಲ್ಲು ಮಳೆಯಂತಹ ವಿಷಮ ಪರಿಸ್ಥಿತಿಯಲ್ಲಿ ವಾಹನ ಚಲಾಯಿಸುವಾಗ ಶೇ.16ರಷ್ಟು ಅಪಘಾತಗಳು ಮಾತ್ರ ಸಂಭವಿಸಿವೆ. 

ನವದೆಹಲಿ[ಅ.15]: ಸಾಮಾನ್ಯವಾಗಿ ರಾತ್ರಿಯ ವೇಳೆ ಮಳೆ ಹಾಗೂ ಮಂಜು ಕವಿದ ಸಂದರ್ಭದಲ್ಲಿ ರಸ್ತೆ ಅಪಘಾತಗಳು ಅಪಘಾತಕ್ಕೆ ಎಡೆ ಮಾಡಿಕೊಡುತ್ತವೆ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಈ ನಂಬಿಕೆಗೆ ವ್ಯತಿರಿಕ್ತವಾಗಿ ಶೇ.70ರಷ್ಟು ಅಪಘಾತಗಳು ಹಾಡ ಹಗಲೇ ಸಂಭವಿಸಿವೆ ಎಂದು ಸರ್ಕಾರದ ವರದಿಯೊಂದು ತಿಳಿಸಿದೆ. 

2017ರಲ್ಲಿ ಸಂಭವಿಸಿದ ಅಪಘಾತಗಳ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ವರದಿಯ ಪ್ರಕಾರ, ಭಾರೀ ಮಳೆ, ಮಂಜು ಕವಿದ ವಾತಾವರಣ, ಆಲಿಕಲ್ಲು ಮಳೆಯಂತಹ ವಿಷಮ ಪರಿಸ್ಥಿತಿಯಲ್ಲಿ ವಾಹನ ಚಲಾಯಿಸುವಾಗ ಶೇ.16ರಷ್ಟು ಅಪಘಾತಗಳು ಮಾತ್ರ ಸಂಭವಿಸಿವೆ. 

ಸರ್ಕಾರದ ವರದಿಯಂತೆ, ಕಳೆದ ವರ್ಷ ಸಂಭವಿಸಿದ ಒಟ್ಟು 4.7 ಲಕ್ಷ ಅಪಘಾತ ಪ್ರಕರಣಗಳ ಪೈಕಿ 3.4 ಲಕ್ಷ ಅಪಘಾತಗಳು ಬೆಳಗಿನ ಸಂದರ್ಭದಲ್ಲಿ ಸಂಭವಿಸಿವೆ ಎಂದು ತಿಳಿದುಬಂದಿದೆ. 2017ರ ಅಪಘಾತದಲ್ಲಿ ಒಟ್ಟು 1.02 ಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ.

click me!