ಇಂದಿನಿಂದ ವೈಭವದ ಆಳ್ವಾಸ್ ನುಡಿಸಿರಿ

By suvarna Web DeskFirst Published Dec 1, 2017, 8:18 AM IST
Highlights

ನುಡಿ ಸಿರಿಯು ಕಲೆ ಮತ್ತು ಸಾಹಿತ್ಯಾಸಕ್ತರಿಗೆ ಸಂಸ್ಕೃತಿಯ ರಸದೌತಣ ಉಣಬಡಿಸಲಿದೆ. 'ಕರ್ನಾಟಕ ಬಹುತ್ವದ ನೆಲೆಗಳು' ಎಂಬ ಪ್ರಧಾನ ಪರಿಕಲ್ಪನೆಯಡಿ ಒಟ್ಟು 3 ದಿನಗಳ ಕಾಲ ವಿಚಾರಗೋಷ್ಠಿಗಳು ನುಡಿಸಿರಿ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೂಡಬಿದ್ರೆ(ಡಿ.1): ಜೈನ ಕಾಶಿ ಮೂಡಬಿದ್ರೆಯಲ್ಲಿ 14ನೇ ವರ್ಷದ ಆಳ್ವಾಸ್ ನುಡಿಸಿರಿಯ ಕಂಪು ಹರಡಲು ಕ್ಷಣಗಣನೆ ಆರಂಭವಾಗಿದೆ. ನುಡಿ ಸಿರಿಯು ಕಲೆ ಮತ್ತು ಸಾಹಿತ್ಯಾಸಕ್ತರಿಗೆ ಸಂಸ್ಕೃತಿಯ ರಸದೌತಣ ಉಣಬಡಿಸಲಿದೆ. 'ಕರ್ನಾಟಕ ಬಹುತ್ವದ ನೆಲೆಗಳು' ಎಂಬ ಪ್ರಧಾನ ಪರಿಕಲ್ಪನೆಯಡಿ ಒಟ್ಟು 3 ದಿನಗಳ ಕಾಲ ವಿಚಾರಗೋಷ್ಠಿಗಳು ನುಡಿಸಿರಿ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.

ಇಂದು ನಡೆಯುವ ಕನ್ನಡ ನಾಡು-ನುಡಿಯ ರಾಷ್ಟ್ರೀಯ ನುಡಿ ತೇರಿಗೆ ಪೂರ್ವಭಾವಿಯಾಗಿ 'ಆಳ್ವಾಸ್ ವಿದ್ಯಾರ್ಥಿ ಸಿರಿ' ನಡೆದಿದೆ.  ನಾಡಿನ ಸುಮಾರು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡರು. ಹಿರಿಯ ರಂಗಕರ್ಮಿ ಹಾಗೂ ಕಲಾವಿದ ಮಂಡ್ಯ ರಮೇಶ್ 'ವಿದ್ಯಾರ್ಥಿ ಸಿರಿ'ಗೆ ಚಾಲನೆ ನೀಡಿದರು.

ಈಗಾಗಲೇ 12ಸಾವಿರಕ್ಕೂ ಹೆಚ್ಚು ಅತಿಥಿಗಳು, ಆಹ್ವಾನಿತರು ಹಾಗೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಅವರಿಗೆ ಊಟ, ವಸತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗಿದೆ.ಕೃಷಿ ವೈವಿಧ್ಯತೆಯ ಪರಿಚಯ ಮತ್ತು ವಸ್ತು ಪ್ರದರ್ಶನಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

click me!