ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಕರ್ನಾಟಕ ವಿರೋಧ

By suvarna Web DeskFirst Published Dec 1, 2017, 7:53 AM IST
Highlights

ರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ಕೂಡ ಒಪ್ಪಿಗೆ ನೀಡುವುದಿಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಕೇಂದ್ರ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

ಬೆಂಗಳೂರು(ಡಿ.1): ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.  ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ  ಇಲಾಖೆ ಮತ್ತು ನೀತಿ ಆಯೋಗ ಕಳುಹಿಸಿದ್ದ ಕಡತವನ್ನು ವಾಪಸ್ ಕಳುಹಿಸಿದೆ. ಈ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ಕೂಡ ಒಪ್ಪಿಗೆ ನೀಡುವುದಿಲ್ಲ  ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಕೇಂದ್ರ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

ಸರ್ಕಾರಿ ಆಸ್ಪತ್ರೆ ಖಾಸಗೀಕರಣಕ್ಕೆ ಯೋಜನೆ ರೂಪಿಸಿ ಈ ಬಗ್ಗೆ ಜೂನ್ 5ರಂದು ಎಲ್ಲಾ ರಾಜ್ಯಗಳಿಗೂ ನೀತಿ ಆಯೋಗದಿಂದ ಜಿಲ್ಲೆಗಳಲ್ಲಿನ ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ಮಾಡುತ್ತೇವೆಂದು ಪ್ರಸ್ತಾವನೆ ನೀಡಲಾಗಿದೆ. ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ (PPP) ಸುಧಾರಣೆಗೆ ಯೋಜನೆ ಹಾಕಲಾಗಿದೆ.

Latest Videos

ಖಾಸಗೀಕರಣದಿಂದ  ಜಿಲ್ಲಾ, ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ  ಹೃದ್ರೋಗ, ಶ್ವಾಸಕೋಶ ತೊಂದರೆ, ಕ್ಯಾನ್ಸರ್ ಸೇರಿ ಆಯ್ದ ಸೇವೆಗಳು ಲಭ್ಯವಾಗಲಿವೆ. 50 ಅಥವಾ 100 ಬೆಡ್'ಗಳನ್ನು ಹೊಂದಿರುವ  ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸಲುನೀತಿ ಆಯೋಗ ಪ್ರಸ್ತಾವನೆ ಸಲ್ಲಿಸಿದೆ. ಒಟ್ಟು 30 ವರ್ಷಗಳ ಕಾಲ ಖಾಸಗಿಯವರಿಗೆ ಲೀಸ್ ನೀಡುವುದಾಗಿ ತಿಳಿಸಲಾಗಿದೆ.  ಒಪ್ಪಂದ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿ ಕಳೆದ ಆ.9ರಂದು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ನೀತಿ ಆಯೋಗ ಪತ್ರಬರೆದು ತಿಳಿಸಿದೆ.

ಆದರೆ ಸದ್ಯ ಕರ್ನಾಟಕ ಸರ್ಕಾರ  ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.  ಬಡವರ ಸಂಜೀವಿನಿ ಸರ್ಕಾರಿ ಆಸ್ಪತ್ರೆಗಳನ್ನು ನಾವು ಹಾಳು ಮಾಡುವುದಿಲ್ಲ ಎಂದು ನೀತಿ ಆಯೋಗಕ್ಕೆ ಮತ್ತು ಕೇಂದ್ರಕ್ಕೆ ಕೆ.ಆರ್.ರಮೇಶ್ ಕುಮಾರ್ ಖಡಕ್ ಪತ್ರ ಬರೆದಿದ್ದಾರೆ.

click me!