
ಚಿಕ್ಕಮಗಳೂರು(ಡಿ.1): ಇಂದಿನಿಂದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ಕಾಲ ದತ್ತ ಜಯಂತಿ ಸಂಭ್ರಮ ಕಳೆಗಟ್ಟಲಿದೆ. ಆದರೆ, ನಾಳೆ, ದತ್ತ ಜಯಂತಿಯ ಅಂಗವಾಗಿ ಬೃಹತ್ ಶೋಭಾಯಾತ್ರೆ ನಡೆಸಲು ತೀರ್ಮಾನ ಮಾಡಲಾಗಿದೆ. ಇದೇ ವೇಳೆ, ಈದ್'ಮಿಲಾದ್ ಕೂಡ ಇದ್ದು, ಮುಸ್ಲಿಮರು ಮೆರವಣಿಗೆ ಕೂಡ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಾಹ್ನದವರೆಗೆ ಮುಸ್ಲಿಮರು ಮೆರವಣಿಗೆ ನಡೆಸಲು ಅನುಮತಿ ನೀಡಲಾಗಿದೆ. ಮಧ್ಯಾಹ್ನ ನಂತರ ದತ್ತ ಜಯಂತಿಯ ಪ್ರಯುಕ್ತ ಶೋಭಾಯಾತ್ರೆಗೆ ಅನುಮತಿ ಕಲ್ಪಿಸಲಾಗಿದೆ.
ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯಾದ ಅಹಿತಕರವಾದ ಘಟನೆಗಳು ಜರುಗದಂತೆ 3 ದಿನ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗುತ್ತಿದೆ. ಅಲ್ಲದೇ ನಗರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳೂ ಕೂಡ ಮುಚ್ಚಿರಲಿವೆ. ದತ್ತ ಜಯಂತಿ ಹಿನ್ನೆಲೆಯಲ್ಲಿ ಭದ್ರತೆಯನ್ನು ಒದಗಿಸುವ ಸಲುವಾಗಿ ಓರ್ವ ಎಸ್ಪಿ, ಮೂವರು ಎಎಸ್ಪಿ, 10 ಡಿಎಸ್ಪಿ, 30 ಇನ್'ಸ್ಪೆಕ್ಟರ್ಸ್, 134 ಪಿಎಸ್'ಐ, 227 ಎಎಸೈ, 2000 ಪೇದೆಗಳ ಜೊತೆ 20 ಡಿಎಆರ್ ಹಾಗೂ 16 ಕೆಎಸ್‍ಆರ್'ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.