
ನವದೆಹಲಿ : ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುತ್ತಿದ್ದ ಮುಂಗಾರು ಮಾರುತಗಳು ಈ ಬಾರಿ ಮೇ 25ರಂದೇ ಪ್ರವೇಶಿಸುವ ಸಾಧ್ಯತೆಯಿದ್ದು, ಕರ್ನಾಟಕದಲ್ಲೂ ಒಂದು ವಾರ ಮೊದಲು ಮುಂಗಾರು ಮಳೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಅರಬ್ಬಿ ಸಮುದ್ರದ ಮೇಲೆ ಮುಂಗಾರು ಮಾರುತಗಳ ಸಂಚಾರವನ್ನು ಗಮನಿಸಿದರೆ ಈ ಬಾರಿ ಮೇ 25ಕ್ಕೆ ಅವು ಕೇರಳವನ್ನು ಪ್ರವೇಶಿಸಲಿವೆ.
ಸಾಮಾನ್ಯವಾಗಿ ಮುಂಗಾರು ಮಾರುತಗಳು ಜೂನ್ 1ರಂದು ಕೇರಳದಲ್ಲಿ ಮಳೆ ಸುರಿಸುತ್ತಿದ್ದವು. ಈ ಬಾರಿ ನಮ್ಮ ಲೆಕ್ಕಾಚಾರದಂತೆ ಮೇ 25ಕ್ಕೆ ಕೇರಳ ಪ್ರವೇಶಿಸಿದರೆ ಕಳೆದ 7 ವರ್ಷಗಳಿಂದೀಚೆಗೆ ಇದು ಮೊದಲ ಬಾರಿ ಬಹಳ ಬೇಗ ಆರಂಭವಾದ ಮುಂಗಾರು ಮಳೆ ಯಾಗಲಿದೆ.
ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶಿಸಿದ 2-3 ದಿನದ ನಂತರ ಕರ್ನಾಟಕದ ಕರಾವಳಿಯಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತದೆ. ನಂತರ ಒಳನಾಡುಗಳಿಗೆ ಪ್ರವೇಶಿಸುತ್ತದೆ. ಈ ಬಾರಿ ಕೇರಳದಲ್ಲಿ 25ಕ್ಕೆ ಮುಂಗಾರು ಮಳೆ ಆರಂಭವಾದರೆ ಕರ್ನಾಟಕದಲ್ಲಿ 27-28ರಂದೇ ಮಳೆ ಪ್ರಾರಂಭವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.