ಇನ್ಫೋಸಿಸ್ ನಿರ್ದೇಶಕ ರಾಜೀನಾಮೆ

Published : May 11, 2018, 10:21 PM IST
ಇನ್ಫೋಸಿಸ್ ನಿರ್ದೇಶಕ ರಾಜೀನಾಮೆ

ಸಾರಾಂಶ

ಇನ್ಫೋಸಿಸ್’ನ ಸ್ವತಂತ್ರ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ರವಿ ವೆಂಕಟೇಶನ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಇನ್ಫೋಸಿಸ್ ಮಂಡಳಿಯ ಸಹ-ಚೇರ್‌ಮೇನ್ ಆಗಿ ಆಯ್ಕೆಯಾಗಿದ್ದ ರವಿ

ನವದೆಹಲಿ [ಮೇ.11]: ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್‌  ಕಂಪನಿಯ ಸ್ವತಂತ್ರ ನಿರ್ದೇಶಕರಾಗಿರುವ ರವಿ ವೆಂಕಟೇಶನ್ ಕಂಪನಿಯ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.

ಶುಕ್ರವಾರ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೀಡಿರುವ ಹೇಳಿಕೆಯಲ್ಲಿ ಇನ್ಫೋಸಿಸ್ ಈ ವಿಚಾರವನ್ನು ಬಹಿರಂಗಪಡಿಸಿದ್ದು,  ಸ್ವತಂತ್ರ ನಿರ್ದೇಶಕರಾಗಿದ್ದ ರವಿ ವೆಂಕಟೇಶನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಎಂದು ಹೇಳಿದೆ.

ಏಪ್ರಿಲ್ 2011ರಿಂದ ಇನ್ಫೋಸಿಸ್ ಮಂಡಳಿಯ ಸದಸ್ಯರಾಗಿರುವ ರವಿ ವೆಂಕಟೇಶನ್, ಹೊಸ ಅವಕಾಶಗಳ ನಿರೀಕ್ಷೆಯಲ್ಲಿ  ಈ ನಿರ್ಧಾರವನ್ನು ಕೈಗೊಂಡಿದ್ದಾರೆನ್ನಲಾಗಿದೆ. 

ಕಳೆದ ವರ್ಷ ಏಪ್ರಿಲ್‌ನಲ್ಲಿ ರವಿ ವೆಂಕಟೇಶನ್ ಅವರನ್ನು ಇನ್ಫೋಸಿಸ್ ಮಂಡಳಿಯ ಸಹ-ಅಧ್ಯಕ್ಷನಾಗಿ ನೇಮಿಸಲಾಗಿತ್ತು. ಆದರೆ  ಆಗಸ್ಟ್ 2017ರಲ್ಲಿ ನಂದನ್ ನೀಲೆಕಣಿ ಇನ್ಪೋಸಿಸ್ ಅಧ್ಯಕ್ಷರಾಗಿ ನೇಮಕವಾದ ಬಳಿಕ ಅವರು ಆ ಸಹ-ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!