
ಕೊಚ್ಚಿ: ಆತ ಅಂತಿಂಥ ಕಳ್ಳನಲ್ಲ. ವಿಮಾನದಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗುತ್ತಿದ್ದ. ಫೈವ್'ಸ್ಟಾರ್ ಹೋಟೆಲ್'ನಲ್ಲಿ ಉಳಿದುಕೊಂಡಿದ್ದ ಗಣ್ಯವ್ಯಕ್ತಿಗಳ ಬಳಿಯಿದ್ದ ಹಣ ಲೂಟಿ ಮಾಡುತ್ತಿದ್ದ. ಬಳಿಕ ವಿಮಾನ ದಲ್ಲೇ ಪರಾರಿಯಾಗುತ್ತಿದ್ದ.
ಬೆಂಗಳೂರು ಮತ್ತು ರಾಜಸ್ಥಾನ, ಗುಜರಾತ್, ತಮಿಳುನಾಡಿನ ಪ್ರಮುಖ ನಗರಗಳಲ್ಲಿ ತನ್ನ ಕೈಚಳಕ ತೋರಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಮುಂಬೈನ ಪಶ್ಚಿಮ ಅಂಧೇರಿಯ ನಿವಾಸಿ ಕಮರುದ್ದೀನ್ ಶೇಖ್ ಎಂಬಾತನನ್ನು ಎರ್ನಾಕುಲಂನ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಜನವರಿ, ಮೇ ಮತ್ತು ಏಪ್ರಿಲ್'ನಲ್ಲಿ ನಡುಂಬಸ್ಸೆರಿ ಮತ್ತು ಎಲಮಕ್ಕರದ ಮೂರು ಹೋಟೆಲ್‌ಗಳಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಪೊಲೀಸರು ಈತನ ಹುಡುಕಾಟ ನಡೆಸುತ್ತಿದ್ದರು. ವಪಾಲಸ್ಸೆರಿ ಹೋಟೆಲ್'ನ ಸಿಸಿಟೀವಿ ಕ್ಯಾಮರಾದಲ್ಲಿ ಆತನ ಮುಖ ಸೆರೆಯಾಗಿತ್ತು. ಅದನ್ನು ಆಧರಿಸಿ ಶೇಖ್'ನನ್ನು ಎರ್ನಾಕುಲಂ ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಎಲ್ಲಾ ಕಳ್ಳತನ ಪ್ರಕರಣದಲ್ಲೂ 1 ಗಂಟೆಯ ಅಂತರದಲ್ಲೇ ಹಿಂದಿರುಗುವ ಟಿಕೆಟ್ ಅನ್ನು ಕಾಯ್ದಿರಿಸುತ್ತಿದ್ದ. ಇತರ ನಗರಗಳಲ್ಲಿ ಕಳ್ಳತನ ಮಾಡುವಾಗಲೂ ಇದೇ ರೀತಿಯ ತಂತ್ರ ಅನುಸರಿಸುತ್ತಿದ್ದ. ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಹೋಗಲು ಆನ್‌ಲೈನ್ ಮೂಲಕ ಕ್ಯಾಬ್‌ಗಳನ್ನು ಬುಕ್ ಮಾಡುತ್ತಿದ್ದ. ಗರಿಗರಿ ಬಟ್ಟೆತೊಟ್ಟು ಹೋಟೆಲ್ ಒಳಗೆ ಹೋಗಿ, ಯಾರೂ ಇಲ್ಲದೇ ಇರುವ ಕೋಣೆಗಳನ್ನು ಲೂಟಿ ಮಾಡುತ್ತಿದ್ದ. ಲೂಟಿಯ ಬಳಿಕ ಮತ್ತೆ ಕ್ಯಾಬ್‌ನಲ್ಲೇ ವಿಮಾನ ನಿಲ್ದಾಣಕ್ಕೆ ಹೋಗಿ ಪರಾರಿಯಾಗುತ್ತಿದ್ದ.
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.