ಅಪಾಯದ ನಡುವೆಯೂ ಮೊಮ್ಮಗನಿಗೆ ಕಾದು ಕುಳಿತ 103ರ ಅಜ್ಜಿ

By Web DeskFirst Published Aug 23, 2018, 11:39 AM IST
Highlights

103 ವರ್ಷದ ಈ ಅಜ್ಜಿಯೋರ್ವರು ಕಾರ್ಗಿಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಮೊಮ್ಮಗ ಬಂದು ರಕ್ಷಿಸುತ್ತಾನೆ ಎಂದು ಕಾದು ಕುಳಿತಿದ್ದಾರೆ.ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದ ಕಾವೇರಮ್ಮ ಅವರೇ ಮೊಮ್ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಮಡಿಕೇರಿ :  ಮನೆಯ ಪಕ್ಕದಲ್ಲೇ ಗುಡ್ಡ ಕುಸಿಯುತ್ತಿದೆ, ಮನೆಯೂ ಅಪಾಯದ ಪರಿಸ್ಥಿತಿಯಲ್ಲಿದೆ. ಆದರೂ 103 ವರ್ಷದ ಈ ಅಜ್ಜಿ ಮಾತ್ರ ಕಾರ್ಗಿಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಮೊಮ್ಮಗ ಬಂದು ರಕ್ಷಿಸುತ್ತಾನೆ ಎಂದು ಕಾದು ಕುಳಿತಿದ್ದಾರೆ.

 ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದ ಕಾವೇರಮ್ಮ ಅವರೇ ಮೊಮ್ಮಗನ ಬರುವಿಕೆಗಾಗಿ ಕಾಯುತ್ತಿರುವ ಶತಾಯುಷಿ ಅಜ್ಜಿ. ಇವರ ಒಬ್ಬ ಮೊಮ್ಮಗ ಕಾರ್ಗಿಲ್‌ನಲ್ಲಿ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮತ್ತೊಬ್ಬ ಮಡಿಕೇರಿಯಲ್ಲಿ ವಾಸವಿದ್ದಾನೆ. ಸೇನೆಯಲ್ಲಿರುವ ಮೊಮ್ಮಗ ಬಂದು ತನ್ನನ್ನು ಕರೆದುಕೊಂಡು ಹೋಗುತ್ತಾನೆಂಬ ನಂಬಿಕೆಯಲ್ಲೇ ಅಜ್ಜಿ ಕಾದು ಕುಳಿತಿದ್ದಾರೆ. 

ಈಕೆ ತನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದು, ಈಗ ಸೊಸೆಯೊಬ್ಬರು ನೋಡಿಕೊಳ್ಳುತ್ತಿದ್ದಾರೆ. ಈ ಸೊಸೆ ಪಕ್ಕದಲ್ಲೇ ವಾಸವಿದ್ದು, ತನ್ನ ಮನೆಯಿಂದ ಅಡುಗೆ ತಂದು ನೀಡುತ್ತಿದ್ದಾರೆ. ಎಲ್ಲರೂ ಬಂದು ಅಜ್ಜಿಯನ್ನು ನೋಡಿ ಹಿಂತಿರುಗುತ್ತಿದ್ದಾರೆ. ಮತ್ತೊಬ್ಬ ಮೊಮ್ಮಗ ಬಿಜು ಮಡಿಕೇರಿಯಲ್ಲಿ ತಂಗಿದ್ದಾರೆ. ಆತ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ ಅಜ್ಜಿಯನ್ನು ಮಡಿಕೇರಿಗೆ ಕರೆ ತರುವುದಾಗಿ ತಿಳಿಸಿದ್ದಾರೆ.

click me!