ಕಿಡ್ನ್ಯಾಪ್, ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟ ಬಹುಭಾಷಾ ನಟಿ: ಘಟನೆ ಬಗ್ಗೆ ಹೇಳಿದ್ದೇನು?

Published : Feb 23, 2017, 05:41 AM ISTUpdated : Apr 11, 2018, 01:07 PM IST
ಕಿಡ್ನ್ಯಾಪ್, ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟ ಬಹುಭಾಷಾ ನಟಿ: ಘಟನೆ ಬಗ್ಗೆ ಹೇಳಿದ್ದೇನು?

ಸಾರಾಂಶ

ಮಲಯಾಳಂ ನಟಿಯೊಬ್ಬಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಥಮ ವರ್ತಮಾನ ವರದಿ (FIR) ಈಗ ಮಾಧ್ಯಮಗಳಿಗೆ ಲಭ್ಯವಾಗಿದೆ. ಎಫ್ಐಆರ್‌ನಲ್ಲಿ ನಟಿಯು ತನ್ನ ಮೇಲೆ ಎರಡೂವರೆ ತಾಸು ನಡೆದ ದೌರ್ಜನ್ಯದ ಬಗ್ಗೆ ಸವಿಸ್ತಾರವಾಗಿ ದೂರಿದ್ದಾರೆ. ಇದನ್ನು ಆಧರಿಸಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.

ಕೊಚ್ಚಿ(ಫೆ.23): ಮಲಯಾಳಂ ನಟಿಯೊಬ್ಬಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಥಮ ವರ್ತಮಾನ ವರದಿ (FIR) ಈಗ ಮಾಧ್ಯಮಗಳಿಗೆ ಲಭ್ಯವಾಗಿದೆ. ಎಫ್ಐಆರ್‌ನಲ್ಲಿ ನಟಿಯು ತನ್ನ ಮೇಲೆ ಎರಡೂವರೆ ತಾಸು ನಡೆದ ದೌರ್ಜನ್ಯದ ಬಗ್ಗೆ ಸವಿಸ್ತಾರವಾಗಿ ದೂರಿದ್ದಾರೆ. ಇದನ್ನು ಆಧರಿಸಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.

‘ಪಲ್ಸರ್ ಸುನಿ ಅಲಿಯಾಸ್ ಸುನೀಲ್ ಕುಮಾರ್ ಎಂಬಾತ ಕಕ್ಕನಾಡು ಎಂಬಲ್ಲಿಗೆ ನನ್ನನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಮೂರನೇಯವರ ಅಣತಿ ಮೇರೆಗೆ ತಾನು ಈ ಕೃತ್ಯ ಎಸಗುತ್ತಿರುವುದಾಗಿ ಹೇಳಿದ’ ಎಂದು ನಟಿಯ ದೂರನ್ನು ಆಧರಿಸಿ FIR ದಾಖಲಿಸಲಾಗಿದೆ.

ದೂರಿನಲ್ಲೇನಿದೆ?:

ಸಿನಿಮಾ ಶೂಟಿಂಗ್ ಮುಗಿಸಿದ ನಾನು ತ್ರಿಶ್ಶೂರಿನಿಂದ ಸಂಜೆ 7 ಗಂಟೆಗೆ ಸಿನಿಮಾ ನಿರ್ಮಾಣ ಸಂಸ್ಥೆಯಾದ ಲಾಲ್ ಕ್ರಿಯೇಶನ್ಸ್ ಒದಗಿಸಿದ್ದ ಎಸ್‌ಯುವಿ ಕಾರಿನಲ್ಲಿ ಹೊರಟೆ. ಕೊಚ್ಚಿಯಲ್ಲಿನ ಸ್ನೇಹಿತರ ಮನೆಗೆ ನಾನು ಹೊರಟಿದ್ದೆ.

ಈ ಸಂದರ್ಭದಲ್ಲಿ ಎಸ್‌ಯುವಿ ಚಾಲನೆ ಮಾಡುತ್ತಿದ್ದ ಚಾಲಕ ಮಾರ್ಟಿನ್, ಯಾರೋ ಕೆಲವರಿಗೆ ಹಲ ಎಸ್ಸೆಮ್ಮೆಸ್ ಕಳಿಸಿದ. ಇದೇ ಮಾಹಿತಿ ಆಧಾರದಲ್ಲಿ ದುರುಳರ ತಂಡವೊಂದು ನನ್ನನ್ನು ಟೆಂಪೋದಲ್ಲಿ ಹಿಂಬಾಲಿಸಿತು. ಉದ್ದೇಶಪೂರ್ವಕವಾಗಿ ರಾತ್ರಿ 8.30ಕ್ಕೆ ನೆಡುಂಬಾಸ್ಸೆರಿ ವಿಮಾನ ನಿಲ್ದಾಣದ ಜಂಕ್ಷನ್ ಬಳಿ ನನ್ನ ಕಾರಿಗೆ ಡಿಕ್ಕಿ ಹೊಡೆಸಿತು.

ಕಾರು ನಿಂತಾಗ 2 ಮತ್ತು 3ನೇ ಆಪಾದಿತರು (ಇವರ ಹೆಸರು ಉಲ್ಲೇಖವಾಗಿಲ್ಲ) ಕಾರಿಗೆ ನುಗ್ಗಿ ನನ್ನ ಬಾಯಿ ಮುಚ್ಚುತ್ತಾರೆ. ಕೂಗದಂತೆ ಬೆದರಿಸುತ್ತಾರೆ. ಆಗ ಮಧ್ಯದಲ್ಲಿ 3ನೇ ಆಪಾದಿತ ಇಳಿಯುತ್ತಾನೆ. ಕಪ್ಪು ಟೀಶರ್ಟ್ ಧರಿಸಿದ 4ನೇ ಆಪಾದಿತ ಹತ್ತಿ ನಾನು ಕಿರುಚಾಡದಂತೆ ನೋಡಿಕೊಳ್ಳುತ್ತಾನೆ. ನಂತರ ಇಳಿದುಹೋಗುತ್ತಾನೆ.

ಆಗ 5 ಮತ್ತು 6ನೇ ಆಪಾದಿತರು ಹತ್ತಿ ಕಾರಿನ ಮಾರ್ಗ ಬದಲಿಸಿ ಗ್ರಿಲ್ ಇದ್ದ ಮನೆಗೆ ಕಾರನ್ನು ಕರೆದೊಯ್ಯುತ್ತಾರೆ. ಆಗ ಮುಖ್ಯ ಆರೋಪಿ ಪಲ್ಸರ್ ಸುನಿ ಮುಖಕ್ಕೆ ಟವಲ್ ಕಟ್ಟಿಕೊಂಡು ನಾನಿದ್ದ ಕಾರು ಹತ್ತುತ್ತಾನೆ. ಚಾಲಕ ಮಾರ್ಟಿನ್‌ನನ್ನು ಕೆಳಗಿಳಿಸಿ ತಾನೇ ಕಾರು ಚಲಾಯಿಸುತ್ತಾನೆ. ಮಾರ್ಟಿನ್ ಮತ್ತು ಇತರ ಆರೋಪಿಗಳನ್ನು ಟೆಂಪೋದಲ್ಲಿ ಕಳಿಸಿಕೊಡುತ್ತಾನೆ.

ಬಳಿಕ ಪಲ್ಸರ್ ಸುನಿ ಒಬ್ಬನೇ ಕಾರನ್ನು ಕಕ್ಕನಾಡು ಎಂಬಲ್ಲಿ ಒಯ್ದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾನೆ.

‘ನಾನು ಮೂರನೇಯವರ ಅಣತಿ ಮೇಲೆ ಈ ಕೃತ್ಯ ಎಸಗುತ್ತಿದ್ದೇನೆ. ನನಗೆ ನೀನು ರಾಸಲೀಲೆ ಭಂಗಿಯಲ್ಲಿರುವ ಫೋಟೋ ವಿಡಿಯೋ ಬೇಕೆಂದು ಕೆಲಸ ವಹಿಸಲಾಗಿದೆ. ಇದಕ್ಕೆ ಸಹಕರಿಸು’ ಎಂದು ಬೆದರಿಸುತ್ತಾನೆ. ನಂತರ ಕಾರಿನಿಂದ ಹೊರಹಾಕುತ್ತಾನೆ. ಕೊನೆಗೆ ನಿರ್ದೇಶಕ ಲಾಲ್ ಮನೆಗೆ ಹೋಗಿ ರಕ್ಷಣೆ ಪಡೆದು ಪೊಲೀಸರ ಮೊರೆ ಹೋಗುತ್ತೇನೆ.

ಅಂದೇನಾಯ್ತು?

- ಶೂಟಿಂಗ್ ಮುಗಿಸಿ ಚಿತ್ರ ನಿರ್ಮಾಣ ಸಂಸ್ಥೆ ನೀಡಿದ ಕಾರಲ್ಲಿ ಸ್ನೇಹಿತರ ಮನೆಗೆ ಹೊರಟಿದ್ದೆ

- ನನ್ನ ಕಾರಿನ ಚಾಲಕ ಮಾರ್ಟಿನ್ ಯಾರಿಗೋ ಮೊಬೈಲ್‌ನಲ್ಲಿ ಸಂದೇಶಗಳನ್ನು ಕಳುಹಿಸಿದ

- ದುರುಳರ ತಂಡವೊಂದು ಟೆಂಪೋದಲ್ಲಿ ಹಿಂಬಾಲಿಸಿ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿತು

- ಇಬ್ಬರು ಕಿರುಚದಂತೆ ಬಾಯಿ ಮುಚ್ಚಿದರು. ಬಳಿಕ ಗ್ರಿಲ್ ಇದ್ದ ಮನೆಯೊಂದಕ್ಕೆ ಒಯ್ದರು

- ಮುಖ್ಯ ಆರೋಪಿ ಪಲ್ಸರ್ ಸುನಿ ಕಾರು ಹತ್ತಿ ಬೇರೆಡೆ ಒಯ್ದು, ಲೈಂಗಿಕ ದೌರ್ಜನ್ಯ ಎಸಗಿದ

- ‘ನಿನ್ನ ಜತೆ ರಾಸಲೀಲೆಯ ವಿಡಿಯೋ ತೆಗೆಯಲು ನಮಗೆ ಹೇಳಿದ್ದಾರೆ. ಸಹಕರಿಸು’ ಎಂದ

- ಬಳಿಕ ಕಾರಿಂದ ಹೊರ ತಳ್ಳಿ ಪರಾರಿಯಾದ. ನಾನು ನಿರ್ದೇಶಕರೊಬ್ಬರ ಮನೆಗೆ ಹೋದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗನಕಾಯಿಲೆ ಪರೀಕ್ಷೆಗೆ ಶಿರಸಿಯಲ್ಲಿ ಹೊಸ ಲ್ಯಾಬ್‌: ಸಚಿವ ದಿನೇಶ್ ಗುಂಡೂರಾವ್‌
India Latest News Live: ರಾಷ್ಟ್ರೀಯ ಪ್ರೇರಣಾ ಸ್ಥಳ ಉದ್ಘಾಟನೆ; ಅಟಲ್, ಉಪಾಧ್ಯಾಯ, ಮುಖರ್ಜಿ ಪ್ರತಿಮೆ ಪಾರ್ಕ್‌