ಹೇಗಿರುತ್ತೆ ಸಿದ್ದು ಕೊನೆ ಬಜೆಟ್! ‘ಭಾಗ್ಯ'ಗಳಿಗೆ ಈ ಬಾರಿ ಹಿಂದಿಗಿಂತಲೂ ಹೆಚ್ಚು ಒತ್ತು

Published : Mar 12, 2017, 01:00 PM ISTUpdated : Apr 11, 2018, 12:40 PM IST
ಹೇಗಿರುತ್ತೆ  ಸಿದ್ದು ಕೊನೆ ಬಜೆಟ್! ‘ಭಾಗ್ಯ'ಗಳಿಗೆ ಈ ಬಾರಿ ಹಿಂದಿಗಿಂತಲೂ ಹೆಚ್ಚು ಒತ್ತು

ಸಾರಾಂಶ

ಈಗಂತೂ ಸಾರ್ವತ್ರಿಕ ಚುನಾವಣೆ ಕಣ್ಣ ಮುಂದಿದೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಎಂತಹ ಬಜೆಟ್‌ ಮಂಡಿಸಬಹುದು ಎಂಬುದನ್ನು ಯಾರೂ ಬೇಕಾದರೂ ಊಹಿಸಬಹುದು. ಈ ಬಾರಿ ಅವರು ಕಲ್ಯಾಣ ಕಾರ್ಯಕ್ರಮಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ಒತ್ತು ನೀಡಬಹುದು. ಪ್ರಸಕ್ತ ವರ್ಷದಲ್ಲಿ ಸರ್ಕಾರ ಬರೀ ಸಬ್ಸಿಡಿಗೆಂದೇ .18,491ಕೋಟಿಗಳನ್ನು ವೆಚ್ಚ ಮಾಡುತ್ತಿದ್ದು, ಈ ಬಾರಿ ಅದರ ಎರಡು ಪಟ್ಟು ಈ ಬಾಬ್ತಿಗೆ ವೆಚ್ಚ ಮಾಡಬೇಕು ಎಂಬ ಒತ್ತಡ ಅವರ ಮೇಲಿದೆ.

ಬೆಂಗಳೂರು(ಮಾ.12): ಜನರಿಗೆ ನೇರವಾಗಿ ಲಾಭ ತರುವ ಕಲ್ಯಾಣ ಕಾರ್ಯಕ್ರಮಗಳು ಎಂದರೆ ರಾಜಕಾರಣಿಗಳಿಗೆ ಅಚ್ಚುಮೆಚ್ಚು. ನಿರ್ದಿಷ್ಟ ಮತದಾರರನ್ನು ನೇರವಾಗಿ ಮುಟ್ಟುವ, ಅವರ ಮನಗೆಲ್ಲುವ ಅವಕಾಶ ನೀಡುವ ಕಲ್ಯಾಣ ಕಾರ್ಯಕ್ರಮಗಳು ತಮಗೆ ಚುನಾವಣಾ ಲಾಭ ತಂದುಕೊಡುತ್ತವೆ ಎಂಬುದು ಇದರ ಹಿಂದಿನ ಲೆಕ್ಕಾಚಾರ. ಆದರೆ, ರಾಜ್ಯದಲ್ಲೇ ಅತಿ ಹೆಚ್ಚು ಬಜೆಟ್‌ ಮಂಡಿಸಿದ ಶ್ರೇಯಸ್ಸಿಗೆ ಪಾತ್ರರಾಗಿರುವ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾದ ಕೆಲವೇ ಕ್ಷಣಗಳಲ್ಲಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸುವ ಮೂಲಕ ತಮ್ಮ ಗುರಿಯೇನು ಎಂದು ಮೊದಲ ವರ್ಷವೇ ಸ್ಪಷ್ಟಪಡಿಸಿದ್ದರು. 
ಆದರೆ, ಇಲ್ಲಿ ಪ್ರಶ್ನೆಯಿರುವುದು ಕಳೆದ ನಾಲ್ಕು ವರ್ಷದಿಂದ ರಾಜ್ಯ ಸರ್ಕಾರ ದೂರದರ್ಶಿತ್ವದ ಯೋಜನೆಗಳಿಗಿಂತ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿದ್ದರ ಪರಿಣಾಮ ಏನಾಗಿದೆ ಎಂಬುದು. ನಿಜಕ್ಕೂ ಕಲ್ಯಾಣ ಕಾರ್ಯಕ್ರಮಗಳು ಫಲಾನುಭವಿಗಳಿಗೆ ನೆರವಾಗಿದೆಯೇ? ಈ ಕುಟುಂಬಗಳ ಆರ್ಥಿಕ ಸಾಮರ್ಥ್ಯ ಹಿಗ್ಗಿದೆಯೇ?
ಈ ಪ್ರಶ್ನೆಗಳ ದೊರೆಯುವ ಉತ್ತರ ತಕ್ಕಮಟ್ಟಿಗೆ ಕಲ್ಯಾಣ ಕಾರ್ಯಕ್ರಮಗಳು ಜನರನ್ನು ಮುಟ್ಟಿವೆ ಹಾಗೂ ಅವರ ಆರ್ಥಿಕ ಸಾಮರ್ಥ್ಯದಲ್ಲಿ ಗಮನಾರ್ಹವಲ್ಲದಿದ್ದರೂ ಸಣ್ಣ ಪ್ರಮಾಣದ ಬದಲಾವಣೆಗೆ ಕಾರಣವಾಗಿದೆ. 

ಸಬ್ಸಿಡಿಗಾಗಿ 18,491 ಕೋಟಿ ರೂ.
ಒಂದು ಅಂದಾಜಿನ ಪ್ರಕಾರ ರಾಜ್ಯ ಸರ್ಕಾರ ಕಳೆದ ಒಂದು ವರ್ಷದಲ್ಲಿ ಕೇವಲ ಸಬ್ಸಿಡಿಗಾಗಿಯೇ .18,491ಕೋಟಿಗಳನ್ನು ವೆಚ್ಚ ಮಾಡಿದೆ. ಆಹಾರ, ಇಂಧನ, ವಸತಿ ಮತ್ತು ಕೃಷಿ ಇಲಾಖೆಗಳಲ್ಲಿ ಪ್ರೋತ್ಸಾಹ ಧನ ನೀಡಲಾಗಿದೆ. ಇದರಿಂದ ಸಾಮಾಜಿಕ, ಆರ್ಥಿಕ ಪ್ರಗತಿ ಕೂಡ ಸದ್ದಿಲ್ಲದೆ ಉತ್ತಮಗೊಂಡಿದೆ. ಅದರಲ್ಲೂ ‘ಭಾಗ್ಯ' ಸರಣಿ ಯೋಜನೆಗಳು ಸಾಮಾಜಿಕ ಸುಸ್ಥಿರತೆಗೆ ಕಾರಣವಾಗಿವೆ. ಆದರೆ, ಈ ಪ್ರಮಾಣದ ಕಲ್ಯಾಣ ಕಾರ್ಯಕ್ರಮಗಳು ರಾಜ್ಯವೊಂದರ ಅಭಿವೃದ್ಧಿಗೆ ಪೂರಕವಾಗುವ ಉದ್ಯೋಗ ಸೃಷ್ಟಿ, ಕೈಗಾರಿಕಾ ಅಭಿವೃದ್ಧಿ ಮೂಲ ಸೌಕರ್ಯ ಸೃಷ್ಟಿಯಂತಹ ಮಹತ್ವದ ಕ್ಷೇತ್ರಗಳ ಮೇಲೆ ಋುಣಾತ್ಮಕ ಪರಿಣಾಮ ಬೀರುವುದು ಸಹ ಕಣ್ಣಿಗೆ ಕಟ್ಟುವಂತೆ ಕಾಣುತ್ತಿದೆ.
ಈಗಂತೂ ಸಾರ್ವತ್ರಿಕ ಚುನಾವಣೆ ಕಣ್ಣ ಮುಂದಿದೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಎಂತಹ ಬಜೆಟ್‌ ಮಂಡಿಸಬಹುದು ಎಂಬುದನ್ನು ಯಾರೂ ಬೇಕಾದರೂ ಊಹಿಸಬಹುದು. ಈ ಬಾರಿ ಅವರು ಕಲ್ಯಾಣ ಕಾರ್ಯಕ್ರಮಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ಒತ್ತು ನೀಡಬಹುದು. ಪ್ರಸಕ್ತ ವರ್ಷದಲ್ಲಿ ಸರ್ಕಾರ ಬರೀ ಸಬ್ಸಿಡಿಗೆಂದೇ .18,491ಕೋಟಿಗಳನ್ನು ವೆಚ್ಚ ಮಾಡುತ್ತಿದ್ದು, ಈ ಬಾರಿ ಅದರ ಎರಡು ಪಟ್ಟು ಈ ಬಾಬ್ತಿಗೆ ವೆಚ್ಚ ಮಾಡಬೇಕು ಎಂಬ ಒತ್ತಡ ಅವರ ಮೇಲಿದೆ.
ಭಾಗ್ಯ ಯೋಜನೆಗಳ ಫಲಾಫಲ

ಮುಖ್ಯಮಂತ್ರಿಯಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ ಪ್ರಥಮ ಯೋಜನೆ ಅನ್ನಭಾಗ್ಯ. ಇದಕ್ಕೆ ಸರ್ಕಾರ ವರ್ಷಕ್ಕೆ .2,028ಕೋಟಿಗಳನ್ನು ನೀಡುತ್ತದೆ. ಇದರಿಂದ ರಾಜ್ಯದ 1.5ಕೋಟಿ ಕುಟುಂಬಕ್ಕೆ ಅಂದರೆ 3.60 ಕೋಟಿ ವ್ಯಕ್ತಿಗಳಿಗೆ ಉಚಿತವಾಗಿ ಅಕ್ಕಿ ಅಥವಾ ಹಣ ತಲುಪುತ್ತಿದೆ. ಇದರಿಂದ ನಾಲ್ಕು ಮಂದಿಯಿರುವ ಕುಟುಂಬಕ್ಕೆ ನಾಲ್ವರಿಗೆ ಅನ್ನಭಾಗ್ಯ ಯೋಜನೆ ಅಡಿ ತಲುಪುತ್ತಿರುವ ದವಸ-ಧಾನ್ಯವನ್ನು ಹಣದ ರೂಪದಲ್ಲಿ ನೋಡಿದರೆ, ಅವರಿಗೆ ತಲುಪುತ್ತಿರುವುದು ಸುಮಾರು .400 ಉಳಿಸಿದಂತಾಗುತ್ತದೆ. ಇದರಿಂದ ಸಹಜವಾಗಿಯೇ ಆತನ ಆರ್ಥಿಕ ಬೆಳೆವಣಿಗೆ ಕನಿಷ್ಠ 2ರಷ್ಟುಹೆಚ್ಚಾಗುತ್ತಿದೆ ಎನ್ನುತ್ತದೆ ಸರ್ಕಾರದ ಅಂಕಿಅಂಶ.
1.08 ಲಕ್ಷ ಹೊಂಡ

ಕೃಷಿ ಭಾಗ್ಯ ಯೋಜನೆಯಡಿ ಸರ್ಕಾರ ಸಬ್ಸಿಡಿಗಾಗಿ ಪ್ರತಿವರ್ಷ .500 ಕೋಟಿನಂತೆ ಇದುವರೆಗೂ .1500ಕೋಟಿ ವೆಚ್ಚ ಮಾಡಿದೆ. ಸುಮಾರು 1.08ಲಕ್ಷ ರೈತರಿಗೆ ಹೊಂಡ ನಿರ್ಮಿಸಿಕೊಡಲಾಗಿದೆ. ಹಾಗೆಯೇ 2.500 ಮಂದಿಗೆ ಬೆಳೆ ಸಂರಕ್ಷಣೆ ಮತ್ತು ನೀರು ಸದ್ಬಳಕೆಗೆ ಪರದೆ ನಿರ್ಮಿಸಿಕೊಡಲಾಗಿದೆ. ಇದರಿಂದ ಕೃಷಿ ಭಾಗ್ಯ ರೈತರು, ಸಾಮಾನ್ಯ ರೈತರಿಗಿಂತ ಮೂರು ಪಟ್ಟು ಹೆಚ್ಚಿನ ಆಹಾರ ಉತ್ಪಾದಿಸುತ್ತಿದ್ದಾರೆ ಎಂಬುದು ಕೃಷಿ ಅಧಿಕಾರಿಗಳ ವಾದ.
ಪಶುಭಾಗ್ಯಕ್ಕೆ ಸರ್ಕಾರ 52 ಕೋಟಿ ವರೆಗೂ ಸಬ್ಸಿಡಿ ನೀಡುತ್ತಿದೆ. ಕಳೆದ ವರ್ಷ 15,000ಮಂದಿಗೆ ಹಸು, ಕುರಿ, ಮೇಕೆಗಳನ್ನು ನೀಡಲಾಗಿದೆ. ಈ ವರ್ಷ 22,000 ಮಂದಿಗೆ ನೀಡಲಾಗುತ್ತಿದೆ. ಇದರಿಂದ ಫಲಾನುಭವಿಯ ತಿಂಗಳ ಆದಾಯ ಸುಮಾರು 6,000 ವರೆಗೂ ಹೆಚ್ಚಾಗಲಿದ್ದು, ಹಾಲಿನ ಉತ್ಪಾದನೆ ಕೂಡ 66ಲಕ್ಷದಿಂದ 69ಲಕ್ಷಕ್ಕೇ ಏರಿಕೆಗೆ ಕಾರಣವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಹೀಗೆ ಸಬ್ಸಿಡಿಯಿರುವ ಯೋಜನೆಗಳಿಂದ ಫಲಾನುಭವಿಗಳಿಗೆ ತಕ್ಕಮಟ್ಟಿಗೆ ಲಾಭವಾಗಿದೆ ಎಂಬುದಕ್ಕೆ ಇವು ಕೆಲ ಉದಾಹರಣೆಗಳು. ಆದರೆ, ಹೀಗೆ ನಿರ್ದಿಷ್ಟಫಲಾನುಭವಿಗಳಿಗೆ ಮಾತ್ರ ಲಾಭವಾಗುವ ಯೋಜನೆಗಳಿಂದ ಮಾತ್ರ ರಾಜ್ಯಕ್ಕೆ ಒಳಿತಾಗುವುದಿಲ್ಲ. ಹೀಗಾಗಿ ಕಲ್ಯಾಣ ಕಾರ್ಯಕ್ರಮ ಹಾಗೂ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ತೂಗಿಸಿಕೊಂಡು ಹೋಗಬೇಕಾದ ಹೊಣೆ ಸಿದ್ದರಾಮಯ್ಯ ಅವರ ಮೇಲಿದೆ. ಆದರೆ, ಕಲ್ಯಾಣ ಕಾರ್ಯಕ್ರಮಗಳಿಗೆ ಅವರ ಮೇಲಿನ ಒತ್ತಡ ಗಮನಿಸಿದರೆ, ಇಂತಹ ಬಜೆಟ್‌ ಈ ಬಾರಿ ಮಂಡನೆಯಾಗುವ ಯಾವ ಸಾಧ್ಯತೆಯೂ ಇಲ್ಲ.

ಕಳೆದ ನಾಲೈದು ವರ್ಷಗಳಿಗೆ ಹೋಲಿಸಿದರೆ, ಸಬ್ಸಿಡಿ ಯೋಜನೆಗಳು ಮತ್ತು ಇತ್ತೀಚಿನ ಭಾಗ್ಯಯೋಜನೆಗಳಿಂದ ನಿಜಕ್ಕೂ ಸಾಕಷ್ಟುಸಾಮಾಜಿಕ ಬದಲಾವಣೆಗಳು ಕಂಡು ಬಂದಿದೆ. ಇದು ನಮ್ಮ ಅಧ್ಯಯನ ಸಂದರ್ಭದಲ್ಲೇ ಗೊತ್ತಾಗಿದೆ. ಆದರೆ ಆ ದರವನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲ. ಸಬ್ಸಿಡಿಯನ್ನು ನಿಗದಿತ ಚೌಕಟ್ಟಿನಲ್ಲಿ ಸಬ್ಸಿಡಿ ನೀಡಬೇಕು. ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸ ಬೇಕು. ನೈಜ ಫಲಾನುಭವಿಗೆ ಸಿಗುವಂತಾಗ ಬೇಕು. ಒಟ್ಟಾರೆ ಸಬ್ಸಿಡಿ ಪ್ರಗತಿ ತಂದಿದೆ. ಇನ್ನೂ ಹೆಚ್ಚಿಸದಷ್ಟುಬದಲಾವಣೆ ಇಮ್ಮಡಿಯಾಗಲಿದೆ.
-ಡಾ.ಎಂ. ಲಿಂಗರಾಜು, ಆರ್ಥಿಕ ವಿಚಾರಗಳ ಸಂಶೋಧಕ

 

ಪ್ರಸ್ತುತ ರಾಜ್ಯ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಅನೇಕ ಯೋಜನೆಗಳು ಸಾಮಾಜಿಕ ಬದಲಾವಣೆ ತಂದಿವೆ. ಇಂಥ ಯೋಜನೆಗಳಿಗೆ ಸರ್ಕಾರ ಇನ್ನೂ ಹೆಚ್ಚಿನ ಅನುದಾನ ಒದಗಿಸಬೇಕು. ಅದರಲ್ಲೂ ಕೃಷಿ ಆಧಾರಿತ ಯೋಜನೆಗಳಿಗೆ ಹೆಚ್ಚಿನ ಸಬ್ಸಿಡಿ ನೀಡಬೇಕು. ಏಕೆಂದರೆ, ವಿದೇಶಗಳಲ್ಲಿ ಸಬ್ಸಿಡಿ ಹೆಚ್ಚಿಸಿರುವುದರಿಂದ ಅಲ್ಲಿನ ರೈತರು ಮಾಡುವ ಉತ್ಪಾದನಾ ವೆಚ್ಚ ಕಡಿಮೆಯಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವರ ಹೆಚ್ಚು ಮಾರಾಟ ಮಾಡ ಲಾಭ ಪಡೆಯುತ್ತಾರೆ. ಆದ್ದರಿಂದ ಸಬ್ಸಿಡಿಗಳು ತಳಮಟ್ಟದವರ ಜತೆಗೆ ರೈತರಿಗೂ ಸಿಗುವಂತಾಗಬೇಕು.
-ಕೃಷ್ಣರಾಜು, ನಿರ್ದೇಶಕರು, ಐಸೆಕ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!