ಗ್ರಾಹಕರಿಗೆ ಸಿಹಿ ಜೊತೆಗೆ ಬಂಪರ್ ಸುದ್ದಿ: ಚಿನ್ನದ ಬೆಲೆ ದಾಖಲೆ ಇಳಿಕೆ

By Suvarna Web DeskFirst Published Mar 12, 2017, 11:13 AM IST
Highlights

ಅಂತರರಾಷ್ಟ್ರೀಯ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಉಂಟಾದ  ಕೆಲವೊಂದು ಸ್ಥಿತಿಗತಿಗಳ ಪರಿಣಾಮದಿಂದ  ಚಿನ್ನದ ಬೆಲೆ ಕಡಿಮೆಯಾಗಿದೆ.

ನವದೆಹಲಿ(ಮಾ.12): ಆಭರಣ ಕೊಳ್ಳುವ ಗ್ರಾಹಕರಿಗೆ ಬಂಪರ್  ಹಾಗೂ ಸಿಹಿ ಸುದ್ದಿ  ಬಂದಿದೆ. ಕಳೆದ  ಒಂದು ವಾರದಿಂದ  ಕಡಿಮೆಯಾಗುತ್ತಿದ್ದ  ಚಿನ್ನದ ಬೆಲೆ ಈಗ ಮತ್ತೆ ಭಾರಿ ಇಳಿದಿದೆ.

ಪ್ರತಿ 10 ಗ್ರಾಂ ಬೆಲೆಯಲ್ಲಿ 400 ರೂ. ಕಡಿಮೆಯಾಗಿದ್ದು, 28,850 ರೂ. ತಲುಪಿದೆ. ಅಂತರರಾಷ್ಟ್ರೀಯ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಉಂಟಾದ  ಕೆಲವೊಂದು ಸ್ಥಿತಿಗತಿಗಳ ಪರಿಣಾಮದಿಂದ  ಚಿನ್ನದ ಬೆಲೆ ಕಡಿಮೆಯಾಗಿದೆ.

ಅಪನಗದೀಕರಣದ ಬಳಿಕ ಚಿನ್ನದ ಆಮದು ಭಾರೀ ಕುಸಿತ

ಕೇಂದ್ರ ಸರ್ಕಾರ ಅಪನಗದೀಕರಣ ಜಾರಿಗೊಳಿಸಿದ ಬಳಿಕ ದೇಶದ ಚಿನ್ನದ ಆಮದಿನ ಪ್ರಮಾಣ ಗಣನೀಯ ಇಳಿಕೆ ಕಂಡಿದೆ. ಅಪನಗದೀಕರಣ ಜಾರಿಯಾದ 2016ರ ನವೆಂಬರ್‌ನಲ್ಲಿ 119.2 ಟನ್ ಇದ್ದ ಚಿನ್ನದ ಆಮದು ಡಿಸೆಂಬರ್‌ನಲ್ಲಿ 54.1 ಟನ್ ಮತ್ತು 2017ರ ಜನವರಿಯಲ್ಲಿ 53.2 ಟನ್‌ಗೆ ಇಳಿಕೆಯಾಗಿದೆ. 2016ಕ್ಕೆ ಹೋಲಿಸಿದರೆ ಶೇ.43ರಷ್ಟು ಇಳಿಕೆಯಾಗಿದೆ. ಅಕ ವೌಲ್ಯದ ನೋಟುಗಳನ್ನು ರದ್ದುಗೊಳಿಸಿದ್ದರಿಂದ ಚಿನ್ನ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೇಡಿಕೆ ದಿಢೀರನೆ ಕುಸಿದಿದೆ.

ಕಳೆದ ವರ್ಷದ 892.9 ಟನ್‌ಗೆ ಹೋಲಿಸಿದರೆ ಏಪ್ರಿಲ್‌ನಿಂದ-ಜನವರಿವರೆಗಿನ ಈ ಹಣಕಾಸು ವರ್ಷದಲ್ಲಿ ಚಿನ್ನದ ಆಮದು 546 ಟನ್‌ಗೆ ಕುಸಿದಿದೆ. 2015-16ನೇ ಹಣಕಾಸು ವರ್ಷದಲ್ಲಿ ಭಾರತ ಒಟ್ಟಾರೆ 968 ಟನ್ ಚಿನ್ನವನ್ನು ಆಮದು ಮಾಡಿಕೊಂಡಿದೆ.

ದೇಶದಲ್ಲಿ ಶೇ.80ರಷ್ಟು ಚಿನ್ನಾಭರಣಗಳ ಖರೀದಿಯನ್ನು ನಗದಿನ ರೂಪದಲ್ಲಿ ಮಾಡಲಾಗುತ್ತದೆ. ಆದರೆ, ಹಣದ ಕೊರತೆಯಿಂದಾಗಿ ಚಿನ್ನ ಖರೀದಿಯ ಮೇಲೆ ಹೊಡೆತ ಬಿದ್ದಿದೆ ಎಂದು ಆರ್‌ಬಿಐ ತಿಳಿಸಿದೆ. ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ರಾಷ್ಟ್ರವೆನಿಸಿಕೊಂಡಿದೆ. ಆಭರಣಗಳ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ.

click me!