ಇಬ್ಬರಲ್ಲಿ ಯಾರಿಗೆ ಒಲಿಯುತ್ತೆ BSY ಸಂಪುಟದಲ್ಲಿ DCM ಸ್ಥಾನ?

By Web Desk  |  First Published Jul 31, 2019, 12:42 PM IST

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ. BSY ಅಧಿಕಾರಕ್ಕೆ ಏರಿ ಐದು ದಿನಗಳಷ್ಟೇ ಕಳೆದಿದ್ದು, ಇಷ್ಟರಲ್ಲೇ ಸಚಿವ ಸ್ಥಾನ ಹಾಗೂ ಡಿಸಿಎಂ ಸ್ಥಾನಗಳಿಗೆ ಲಾಬಿ ಶುರುವಾಗಿದೆ. 


ಬಳ್ಳಾರಿ [ಜು.31]: ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ ಐದು ದಿನಗಳಷ್ಟೇ ಕಳೆದಿದೆ. ಇನ್ನೂ ಸಂಪುಟ ವಿಸ್ತರಣೆಯಾಗದ ಕಾರಣ ಸಚಿವ ಸ್ಥಾನ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಗೆ ಲಾಬಿ ಶುರುವಾಗಿದೆ.

ಹಲವರು ತಮ್ಮ ಸಮುದಾಯ ಹಾಗೂ ತಮ್ಮ ಕ್ಷೇತ್ರದ ನಾಯಕರಿಗೆ ಸಚಿವ ಸ್ಥಾನ ನೀಡಲು ಸಿಎಂ ಭೇಟಿ ಮಾಡಿ ಮನವಿ ಮಾಡುತ್ತಿದ್ದಾರೆ. ಇತ್ತ ಬಳ್ಳಾರಿಯಲ್ಲಿ ಉಪ ಮುಖ್ಯಮಂತ್ರಿ ಹುದ್ದೆಗೆ ಕೂಗು ಕೇಳಿ ಬಂದಿದೆ.

Latest Videos

undefined

ಬಿಜೆಪಿಯಿಂದ ಮಂತ್ರಿ ಸ್ಥಾನ : ಅಚ್ಚರಿ ಹೆಸರುಗಳಿಗೆ ಕೊಕ್‌ ಸಾಧ್ಯತೆ? 

ಮಾದಿಗ ಮೀಸಲಾತಿ ಹೋರಾಟ ಸಮಿತಿ ತಮ್ಮ ಸಮುದಾಯದ ಹಿರಿಯ ನಾಯಕ ಮುಧೋಳ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಗೋವಿಂದ ಗೋವಿಂದ ಕಾರಜೋಳ  ವರಿಗೆ ಡಿಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. 

ಕಾಂಗ್ರೆಸ್ ಅನರ್ಹ ಶಾಸಕರಿಗೆ BSY ಸಂಪುಟದಲ್ಲಿ ಸಚಿವ ಸ್ಥಾನ ಫಿಕ್ಸ್

ಪರಿಶಿಷ್ಟ ಜಾತಿ ಕೋಟಾ ಅಡಿಯಲ್ಲಿ ಕಾರಜೋಳ ಹಾಗೂ ST ಸಮುದಾಯದ ನಾಯಕ ಶ್ರೀ ರಾಮುಲುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹಿಸಿದ್ದಾರೆ. 

ಈಗಾಗಲೇ ಆಂಧ್ರ ಪ್ರದೇಶದ  ಮುಖ್ಯಮಂತ್ರಿ  YSR ಕಾಂಗ್ರೆಸ್ ನಾಯಕ ಜಗನ್ ಮೋಹನ್ ರೆಡ್ಡಿ ಹಿಂದುಳಿದ ಸಮುದಾಯಗಳಿಗೆ 5 ಉಪ ಮುಖ್ಯಮಂತ್ರಿ ಹುದ್ದೆ ನೀಡಿದಂತೆ ರಾಜ್ಯದಲ್ಲಿಯೂ ನೀಡುವುದೂ ಸೂಕ್ತ ಎಂದು ರಾಜ್ಯ ನಾಯಕರಲ್ಲಿ ಮನವಿ ಮಾಡಿದ್ದಾರೆ. 

ಅದೃಷ್ಟದ ಮನೆಗೆ ಸಿಎಂ ಬಿಎಸ್‌ವೈ ವಾಪಸ್‌

ಕಾಂಗ್ರೆಸ್ ದಲಿತ ಹಾಗೂ ಶೋಷಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಆದರೆ ಯಡಿಯೂರಪ್ಪ ನೇತೃತ್ವದ ಸರ್ಕಾರದಿಂದ ನ್ಯಾಯ ದೊರೆಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. 

click me!