ಸ್ತಬ್ಧವಾಯ್ತು ಚಿಕ್ಕಮಗಳೂರು ನಗರ| ಸಿದ್ಧಾರ್ಥ್ ಗೌರವಾರ್ಥ್ ಇಡೀ ಚಿಕ್ಕಮಗಳೂರು ನಗರ ಬಂದ್| ಸ್ವಯಂಪ್ರೇರಿತವಾಗಿ ಅಂಗಡಿ- ಮುಂಗಟ್ಟು ಬಂದ್ ಮಾಡಿದ ವ್ಯಾಪಾರಿಗಳು| ಕೊಟ್ಟಿಗೆಹಾರದಿಂದ ಚಿಕ್ಕಮಗಳೂರುವರೆಗೆ ಸಾಲುಗಟ್ಟಿ ನಿಂತಿರುವ ಜನತೆ
ಚಿಕ್ಕಮಗಳೂರು[ಜು.31]: ಕಾಫಿನಾಡಿನ ಧಣಿ, ಹಲವರ ಬಾಳಿನ ಆಶಾಕಿರಣ..., ಸಾವಿರಾರು ನಿರುದ್ಯೋಗಿಗಳಿಗೆ ಕೆಲಸ ಕೊಟ್ಟು ಜೀವನ ಹಸನಾಗಿಸಿದ ಕರುಣಾಮಯಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮಾಲೀನಕನನ್ನು ಕಳೆದುಕೊಂಡ ಕಾಫಿ ಡೇ, ಸಿಬ್ಬಂದಿ ಅನಾಥರಾಗಿದ್ದಾರೆ. ನಾಪತ್ತೆಯಾಗಿ, ಶವವಾಗಿ ಮರಳಿ ಬರುತ್ತಿರುವ ತನ್ನೂರಿನ 'ಕಾಫಿ ಸಾಮ್ರಾಟ'ನನ್ನು ಕೊನೆಯ ಬಾರಿ ನೋಡಲು ಚಿಕ್ಕಮಗಳೂರಿನ ಜನ ರಸ್ತೆಯುದ್ಧಕ್ಕೂ ಸಾಲು ನಿಂತು ಕಾಯುತ್ತಿದ್ದಾರೆ.
ಹೌದು ಸೋಮವಾರ ನೇತ್ರಾವತಿ ತಟದಲ್ಲಿ ನಾಪತ್ತೆಯಾಗಿದ್ದ ಸಿದ್ಧಾರ್ಥ ಇಂದು ಬುಧವಾರ ಬೆಳಗ್ಗೆ ಹೊಯ್ಗೆ ಬಜಾರ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಈ ಮೂಲಕ ಅವರು ಮರಳಿ ಬರುತ್ತಾರೆಂದು ಆಸೆಯಿಟ್ಟುಕೊಂಡಿದ್ದವರಿಗೆ ತೀವ್ರ ನಿರಾಸೆಯಾಗಿದೆ. ಸದ್ಯ ತವರು ನಾಡು ಚಿಕ್ಕಮಗಳೂರಿಗೆ ಕರೆತರಲಾಗುತ್ತಿರುವ ಅವರ ಮೃತದೇಹವನ್ನು ನೋಡಲು ಕೊಟ್ಟಿಗೆಹಾರದಿಂದ ಚಿಕ್ಕಮಗಳೂರುವರೆಗೆ ಸಾಲುಗಟ್ಟಿ ನಿಂತು ಕಾಯುತ್ತಿದ್ದಾರೆ.
ನಾಪತ್ತೆಯಾದ ಕಾಫಿ ಡೇ ಒಡೆಯ ಮೃತದೇಹ ಪತ್ತೆ: ಸೋಮವಾರದಿಂದ ಏನೇನಾಯ್ತು?
ಅಂತರಾಷ್ಟ್ರೀಯ ಮಟ್ಟದಲ್ಲಿ ನಾಡಿನ ಕಾಫಿ ಕಂಪು ಹರಿಸಿದ್ದ ಸಿದ್ಧಾರ್ಥನನ್ನು ಕಳೆದುಕೊಂಡ ಚಿಕ್ಕಮಗಳೂರು ನಗರ ಸ್ಥಬ್ಧವಾಗಿದೆ. ಸಿದ್ಧಾರ್ಥ್ ಗೌರವಾರ್ಥ್ ಜನರು ಸ್ವಯಂಪ್ರೇರಿತವಾಗಿ ಅಂಗಡಿ- ಮುಂಗಟ್ಟು ಬಂದ್ ಮಾಡಿದ್ದಾರೆ. 'ಕಾಫಿ ರಾಜ'ನ ಸಾವಿನಿಂದ ತವರು ಜಿಲ್ಲೆಯ ಜನ ಆಘಾತಕ್ಕೊಳಗಾಗಿದ್ದಾರೆ.