
ಬೆಂಗಳೂರು(ಫೆ.12): ಸಮಾಜದ ರಕ್ಷಣೆ ಮಾಡುವ ಪೊಲೀಸರಿಗೆ ರಕ್ಷಣೆಯೇ ಇಲ್ವಾ ಎಂಬಂತಾಗಿದೆ. ದೊಡ್ಡಬಳ್ಳಾಪರದಲ್ಲಿ ಪಿಎಸ್ಐ ಜಗದೀಶ್ ರನ್ನು ಕಳ್ಳರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಘಟನೆ ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸಿತ್ತು. ಈಗ ಅಂತದ್ದೇ ಒಂದು ಘಟನೆ ಮರುಕಳಿಸಿದೆ. ನಿನ್ನೆ ಬೆಂಗಳೂರು ಹೊರವಲಯ ವಿಶ್ವನಾಥಪುರ ನ್ಯೂ ಹೊಸೂರು ಬಳಿ ದೊಡ್ಡಬಳ್ಳಾಪುರ ಸಬ್ ಇನ್ಸ್ ಪೆಕ್ಟರ್ ಯಶವಂತ್ ಮೇಲೆ ಕಳ್ಳರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರ ಪಿಎಸ್ ಐ ಯಶವಂತ್ ದರೋಡೆಕೋರರನ್ನು ಅರೆಸ್ಟ್ ಮಾಡುವ ಸಲುವಾಗಿ ವಿಶ್ವನಾಥಪುರದ ನ್ಯೂ ಹೊಸೂರು ಬಳಿ ಬಂದಿದ್ದಾರೆ. ಈ ವೇಳೆ ದುಷ್ಕರ್ಮಿಗಳ ತಂಡ ಯಶ್ವಂತ್ ಮೇಲೆ ಹಲ್ಲೆ ನಡೆಸಿ ಬೈಕನ್ನು ಅವ್ರ ಮೇಲೆ ಹತ್ತಿಸಿ ಹೋಗಿದ್ದಾರೆ.. ಇನ್ನು ಬೈಕ್ ಹತ್ತಿಸಿದ್ದರಿಂದ ಯಶ್ವಂತ್ ಅವ್ರ ಕೈ ಮೂಳೆಗೆ ಪೆಟ್ಟು ಬಿದ್ದಿದ್ದು ಅವ್ರಿಗೆ ನಗರದ ಬಾಣಸವಾಡಿ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳ್ಳರ ಚೇಸಿಂಗ್ ವೇಳೆ ಕೊಲೆಯಾಗಿದ್ದ ಪಿಎಸ್ಐ ಜಗದೀಶ್ : ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದ ಮಲ್ಲಿಕಾರ್ಜುನ ಬಂಡೆ
ಪೊಲೀಸರ ಮೇಲೆ ಹಲ್ಲೆ ಘಟನೆ ಇದೇ ಮೊದಲೇನಲ್ಲಾ. 2015ರ ಅಕ್ಟೋಬರ್ 16ರಂದು ದೊಡ್ಡಬಳ್ಳಾಪುರದಲ್ಲಿ ಕಳ್ಳರನ್ನು ಹಿಡಿಯಲು ಹೋದ ಪಿಎಸ್ ಐ ಜಗದೀಶ್ ಅವ್ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಇದಲ್ಲದೇ 2014 ಜನವರಿ 8ರಂದು ಕಲಬುರಗಿಯಲ್ಲೂ ರೌಡಿ ಮುನ್ನಾ ಎಂಬಾತ ಪೊಲೀಸರ ಬಂದೂಕಿನಿಂದಲೇ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಅವರ ಮೇಲೆ ಹಾಡಹಗಲೇ ಗುಂಡನ್ನು ಹಾರಿಸಿ ಕೊಲೆ ಮಾಡಿದ್ದ.
ಅದೇನೇ ಇದ್ದರೂ ನಮ್ಮನ್ನು ರಕ್ಷಣೆ ಮಾಡುವ ಆರಕ್ಷಕರ ಮೇಲೆ ಪದೇ ಪದೇ ಇಂತಹ ಹಲ್ಲೆ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಇದಕ್ಕೆ ಶಾಶ್ವತವಾಗಿ ಬ್ರೇಕ್ ಬೀಳಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.