
ನೈಜೀರಿಯಾ(ಫೆ.12): ಈವರೆಗೆ ಚಿತ್ರ ವಿಚಿತ್ರ ಘಟನೆಗಳ ಕುರಿತು ನಾವು ಕೇಳಿದ್ದೇವೆ. ಆದರೆ ಇದೀಗ ನೈಜೀರಿಯಾದಲ್ಲಿ ನಡೆದ ಘಟನೆಯೊಂದು ಜಗತ್ತಿನಾದ್ಯಂತ ಚರ್ಚೆಗೀಡಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ
ಈ ಘಟನೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ. ನೈಜೀರಿಯಾದ ಮಹಿಳೆಯೊಬ್ಬಳು ಗರ್ಭವತಿಯಾಗಿದ್ದಳು, ಆದರೆ ಒಂಭತ್ತು ತಿಂಗಳಿಗೆ ಮಗುವನ್ನು ಹೆರಬೇಕಾದವಳಿಗೆ ಹೆರಿಗೆ ನೋವೇ ಕಾಣಿಸಿಕೊಂಡಿರಲಿಲ್ಲ. ಕೊನೆಗೂ ಬರೋಬ್ಬರಿ ಮೂರು ವರ್ಷಗಳ ಬಳಿಕ ಆಕೆಗೆ ನೋವು ಕಾಣಿಸಿಕೊಂಡಿದೆ. ಆದರೆ ಆಕೆ ಜನ್ಮ ನೀಡಿದ್ದು ಮಾತ್ರ ಮೇಕೆಗೆ, ಇದನ್ನು ಕಂಡು ಅಲ್ಲಿದ್ದವರೆಲ್ಲಾ ತಬ್ಬಿಬ್ಬಾಗಿದ್ದಾರೆ.
ಸಾಮಾಜಿಕ ಜಾಲಾತಾಣಗಳಲ್ಲಿ ಮಹಿಳೆಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇವುಗಳನ್ನು ಸೈಮನ್ ಚುಕವು ಎಂಬ ವ್ಯಕ್ತಿ ತಮ್ಮ ಫೇಸ್'ಬುಕ್ ಪೇಜ್'ನಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಪೋಸ್ಟ್'ನಲ್ಲಿ 'ನೈಜೀರಿಯಾದ ಪೋರ್ ಹಾರ್ಕೋರ್ಟ್ ಎಂಬಲ್ಲಿ ಕಳೆದ ಎರಡು ದಿನಗಳ ಹಿಂದೆ, ಮೂರು ವರ್ಷಗಳಿಂದ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬಳು ಮೇಕೆಯೊಂದಕ್ಕೆ ಜನ್ಮ ನೀಡಿದ್ದಾಳೆ' ಎಂಬುವುದನ್ನು ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನು ಕೇಳಿ ಒಂದೆಡೆ ಜನರು ಶಾಕ್ ಆಗುತ್ತಿದ್ದರೆ, ಮತ್ತೊಂದೆಡೆ ಮಹಿಳೆಯ ಕುಟುಂಬಸ್ಥರು ಆಕೆ ಕಳೆದ ಮೂರು ವರ್ಷಗಳಿಂದ ಗರ್ಭಿಣಿಯಾಗಿದ್ದು, ಕೊನೆಗೂ ಹೆರಿಗೆಯಾಗಿದೆ' ಎಂದು ನಿಟ್ಟುಸಿರು ಬಿಟದ್ಟಿದ್ದಾರೆ. ಇನ್ನು ಈ ವಿಚಿತ್ರವನ್ನು ನೋಡಲು ಮಹಿಳೆಯ ಮನೆಗೆ ಜನರ ದಂಡೇ ಹರಿದು ಬರುತ್ತಿದೆಯಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.