
ಗದಗ(ಅ.13): ಕದ್ದ ಮೊಬೈಲ್ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಕಳ್ಳನಿಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗದಗ ನಗರದ ಹಾತಲಗೇರಿ ನಾಕಾದಲ್ಲಿ ನಡೆದಿದೆ.
ಲಕ್ಷ್ಮಿಸಿಂಗನಕೇರಿ ನಿವಾಸಿ ಅಶೋಕ ಕೆಳಗಿಮನೆ ಥಳಿಕ್ಕೊಳಗಾದ ಯುವಕ. ಈ ಚಾಲಾಕಿ ಕಳ್ಳ ಅಕ್ಕ ಪಕ್ಕದ ಮನೆ, ಅಂಗಡಿ , ಹಾಸ್ಟೆಲ್ ಗೆ ನುಗ್ಗಿ ಕಳ್ಳತನ ಮಾಡ್ತಿದ್ದ. ಕದ್ದ ಮೊಬೈಲ್ ಮಾರಾಟ ಮಾಡುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದು ಒದೆ ತಿಂದಿದ್ದಾನೆ.
ಇದೀಗ ಇಲ್ಲಿನ ಸ್ಥಳೀಯರು ಈ ಚಾಲಾಕಿ ಕಳ್ಳನನ್ನು ಗದಗ ಬೆಟಗೇರಿ ಬಡಾವಣೆ ಪೊಲೀಸ್'ರಿಗೆ ಅಶೋಕನ್ನು ಒಪ್ಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.