ಸಂಧಾನ ವಿಫಲ : ಕೋರ್ಟ್'ನಲ್ಲೇ ಬಗೆಹರಿಯಲಿ ಎಂದ ನಟರು

By Web DeskFirst Published Oct 25, 2018, 8:34 PM IST
Highlights

ನನ್ನನ್ನು ತೇಜೋವಧೆ ಮಾಡಲು ಷಡ್ಯಂತ್ರ ನಡೆಯುತ್ತಿದೆ.  ನನ್ನ ಕುಟುಂಬ, ಹಿತೈಷಿಗಳು, ಸ್ನೇಹಿತರಿಗೆ ಜೊತೆಗೆ ನಾಲ್ಕು ರಾಜ್ಯಗಳ ಅಭಿಮಾನಿಗಳಿಗೆ ನೋವಾಗಿದ್ದು ಆರೋಪ ಕೋರ್ಟಿನಲ್ಲೇ ತೀರ್ಮಾನವಾಗಲಿ, ತಾವು  ಸಂಧಾನಕ್ಕೆ ಸಿದ್ದರಿಲ್ಲ - ಅರ್ಜುನ್ ಸರ್ಜಾ

ಬೆಂಗಳೂರು[ಅ.25]: ಅಂಬರೀಶ್ ನೇತೃತ್ವದಲ್ಲಿ   #MeToo ಆರೋಪಕ್ಕೆ  ಬಹುಭಾಷ ನಟ ಅರ್ಜುನ್ ಸರ್ಜಾ ಹಾಗೂ ನಟಿ ಶೃತಿ ಹರಿಹರನ್ ಅವರಿಗೆ ಕರ್ನಾಟಕ್ಕೆ ವಾಣಿಜ್ಯ ಮಂಡಳಿಯಲ್ಲಿ ಕರೆದಿದ್ದ ಸಂಧಾನ ಸಭೆ ವಿಫಲವಾಗಿದೆ.

ತಮ್ಮ ಮೇಲಿನ ಆರೋಪಗಳೆಲ್ಲವೂ ಸುಳ್ಳು. ಆರೋಪ ನನ್ನೊಬ್ಬನ ಮೇಲಾಗಿದ್ದರೆ ಕ್ಷಮಿಸಿ ಬಿಡುತ್ತಿದ್ದೆ. ನನ್ನನ್ನು ತೇಜೋವಧೆ ಮಾಡಲು ಷಡ್ಯಂತ್ರ ನಡೆಯುತ್ತಿದೆ.  ನನ್ನ ಕುಟುಂಬ, ಹಿತೈಷಿಗಳು, ಸ್ನೇಹಿತರ ಜೊತೆಗೆ ನಾಲ್ಕು ರಾಜ್ಯಗಳ ಅಭಿಮಾನಿಗಳಿಗೂ ನೋವಾಗಿದ್ದು ಆರೋಪ ಕೋರ್ಟಿನಲ್ಲೇ ತೀರ್ಮಾನವಾಗಲಿ. ಸಂಧಾನಕ್ಕೆ ಸಿದ್ದರಿಲ್ಲ ಎಂದು ತಿಳಿಸಿದ್ದಾರೆ.

"

ನಾಳೆಯವರೆಗೂ ಕಾಯುತ್ತೇನೆ : ಶೃತಿ
ಅನ್ಯಾಯವಾಗಿರುವುದು ನನಗೆ. ಹೆಣ್ಣು ಮಕ್ಕಳ ಮೇಲೆ ತಪ್ಪು ಹೊರಿಸುವ ಕೆಲಸ ಆಗುತ್ತಿದೆ. ವಾಣಿಜ್ಯ ಮಂಡಳಿಯ ಮಾತಿಗೆ ಬೆಲೆ ಕೊಟ್ಟು ನಾಳೆಯವರೆಗೂ ಕಾಯಲಿದ್ದು ಯಾವುದೇ ಸಹಮತ ವ್ಯಕ್ತವಾಗದಿದ್ದರೆ ಕೋರ್ಟ್'ನಲ್ಲಿ ಪ್ರಕರಣ ದಾಖಲಿಸುತ್ತಾನೆ ಎಂದು ತಾವೂ ಕೂಡ ರಾಜಿಯಾಗಲು ಸಿದ್ದರಿಲ್ಲ ಎಂದು ತಿಳಿಸಿದರು.

"

ವಿವಾದ ದೊಡ್ಡದಾಗುವುದು ಬೇಡ ಎಂದ ಮಂಡಳಿ
ಸಂಧಾನ ಸಭೆ ನಡೆಸಿದ ಅಂಬರೀಶ್, ವಿವಾದವನ್ನು ದೊಡ್ಡದು ಮಾಡಿಕೊಳ್ಳುವುದು ಬೇಡ. ಮಂಡಳಿಯಲ್ಲೇ ಬಗೆಹರಿಸಿಕೊಳ್ಳಿ ಎಂದು ಇಬ್ಬರಿಗೂ ತಿಳಿಮಾತು ಹೇಳಿದ್ದೇವೆ. ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಹೇಳಿದ್ದಾರೆ. 

click me!