’ನನ್ನ ರಮ್ಯಾ ನಡುವೆ ಮನಸ್ತಾಪ ಏನಿದ್ರೂ ಮನೆಯಲ್ಲಿ; ಸ್ವತಂತ್ರವಾಗಿ ಮಂಡ್ಯದಿಂದಲೇ ಸ್ಪರ್ಧಿಸುತ್ತೇನೆ’

By Suvarna Web DeskFirst Published Mar 20, 2018, 12:53 PM IST
Highlights

ಮಂಡ್ಯ ಜನರ ಸೇವೆ ಮಾಡುವ ಆಸೆಯಿಂದ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಫರ್ಧೆ ಮಾಡ್ತೀನಿ. ರಮ್ಯಾ ಕಾಂಗ್ರೆಸ್’ನಲ್ಲೆ‌ ಇರ್ತಾರೆ, ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡ್ತೀನಿ ಎಂದು ರಮ್ಯಾ ತಾಯಿ ಸುವರ್ಣ ನ್ಯೂಸ್’ಗೆ ತಿಳಿಸಿದ್ದಾರೆ. 

ಮಂಡ್ಯ (ಮಾ. 20): ಮಂಡ್ಯ ಜನರ ಸೇವೆ ಮಾಡುವ ಆಸೆಯಿಂದ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಫರ್ಧೆ ಮಾಡ್ತೀನಿ. ರಮ್ಯಾ ಕಾಂಗ್ರೆಸ್’ನಲ್ಲೆ‌ ಇರ್ತಾರೆ, ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡ್ತೀನಿ ಎಂದು ರಮ್ಯಾ ತಾಯಿ ಸುವರ್ಣ ನ್ಯೂಸ್’ಗೆ ತಿಳಿಸಿದ್ದಾರೆ. 

ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತದೆ. ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ. ನಿಷ್ಠಾವಂತ ಕಾರ್ಯಕರ್ತೆಯಾಗಿ  ದುಡಿದಿದ್ದೇನೆ. ಜನರ ಸೇವೆ ಮಾಡುವ ಅವಕಾಶ ಸಿಗಲಿಲ್ಲ. ಜನರ ಸೇವೆ ಮಾಡಲು ಯಾವ ಪಕ್ಷವಾದರೇನು? ಮಂಡ್ಯದಿಂದಾನೇ ಸ್ಫರ್ಧೆ ಮಾಡ್ತೀನಿ. ವೈಯಕ್ತಿಕ ವಿಷ್ಯಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. 

ನನ್ನ ರಮ್ಯಾ ಮಧ್ಯೆ ಏನೇ ಮನಸ್ತಾಪ ಇದ್ದರೂ ಅದು ಮನೆಯಲ್ಲಿ. ಅದನ್ನು ರಾಜಕೀಯಕ್ಕೆ ತರುವುದಿಲ್ಲ. ರಮ್ಯಾ ಸ್ವತಂತ್ರಳು ನಾನು ಸ್ವತಂತ್ರಳು. ನನ್ನ ನಿರ್ಧಾರ ನನಗೆ ಬಿಟ್ಟಿದ್ದು.  ನಾನು ಈ ವಿಚಾರದ ಬಗ್ಗೆ ರಮ್ಯಾ ಜೊತೆ ಚರ್ಚಿಸಿಲ್ಲ. ಸಂಬಂದ ಬೇರೆ ಅಭಿಪ್ರಾಯ ಬೇರೆ.  ಮುಂದಿನ ವಾರ ಮಂಡ್ಯದಲ್ಲಿ ಎಲ್ಲವೂ  ತೀರ್ಮಾನ ಮಾಡ್ತೀವಿ.  ಇದು ನನ್ನ ವೈಯಕ್ತಿಕ ನಿರ್ಧಾರ. ರಮ್ಯಾ ಬೇಡ ಎನ್ನಲು ಸಾಧ್ಯವಿಲ್ಲ.  ಒಂದೇ ಪಕ್ಷದಲ್ಲಿ ಒಂದೇ  ಮನೆಯವರು ಇರಬಾರ್ದು ಎಂದು ಎಂಬ ನಿಯಮ‌ ಇಲ್ಲ.  ನಾನು ಕಾಂಗ್ರೆಸ್ ಟಿಕೆಟ್’ಗಾಗಿ ಯಾರ ಬಳಿಯೂ ಚರ್ಚಿಸಿಲ್ಲ.  ನಾನು ಅಂಬರೀಶ್ ಹಾಗೂ ಕಾಂಗ್ರೆಸ್ ವಿರುದ್ಧ ಹೋಗಲ್ಲ. ನಾನು ಬಂಡಾಯ ಎದ್ದಿಲ್ಲ ಎಂದು ರಮ್ಯಾ ತಾಯಿ ಹೇಳಿದ್ದಾರೆ. 

click me!