ಲಿಂಗಾಯತ ಧರ್ಮದ ವಿಚಾರದಲ್ಲಿ ಸರ್ಕಾರದ ನಿರ್ಧಾರ ಖುಷಿ ತಂದಿದೆ : ಚಂಪಾ

By Suvarna Web DeskFirst Published Mar 20, 2018, 12:51 PM IST
Highlights

ಸಾಹಿತಿ  ಚಂದ್ರಶೇಖರ್ ಪಾಟೀಲ್ ಅವರು ಲಿಂಗಾಯತ ಪ್ರತ್ಯೇಕ ಧರ್ಮದ  ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಣಯ ಖುಷಿ ತಂದಿದೆ ಎಂದು ಹೇಳಿದ್ದಾರೆ.

ಬೆಂಗಳೂರು :  ಸಾಹಿತಿ  ಚಂದ್ರಶೇಖರ್ ಪಾಟೀಲ್ ಅವರು ಲಿಂಗಾಯತ ಪ್ರತ್ಯೇಕ ಧರ್ಮದ  ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಣಯ ಖುಷಿ ತಂದಿದೆ ಎಂದು ಹೇಳಿದ್ದಾರೆ.

ಇದು ಐತಿಹಾಸಿಕವಾದ ನಿರ್ಣಯವಾಗಿದೆ. ಲಿಂಗಾಯತ  ಸಮುದಾಯ ಬಲಾಢ್ಯವಾದ ಸಮುದಾಯ. ಆರ್ಥಿಕ, ಸಾಂಸ್ಕೃತಿಕ, ರಾಜಕೀಯವಾಗಿ ಬಲಾಢ್ಯವಾದ ಸಮುದಾಯವಾಗಿದೆ. ಮನುವಾದದ ವಿರುದ್ಧ ಕ್ರಾಂತಿ ಮಾಡಿದ ಧರ್ಮಕ್ಕೆ ಇದೀಗ ನ್ಯಾಯ ಸಿಕ್ಕಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು  ಚಂಪಾ ಹೇಳಿದ್ದಾರೆ.

ನಾನೂ ಕೂಡ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಗುರುತಿಸಿಕೊಂಡವನು.  ವೀರಶೈವ ಎಂದು ಕರೆದುಕೊಳ್ಳೋದು ಲಿಂಗಾಯತ ಧರ್ಮದ ಭಾಗ. ಲಿಂಗಾಯತ ಎನ್ನುವುದು ವೀರಶೈವ ಪಂಗಡ. ವೀರಶೈವ ಮಠಾಧೀಶರು ಈ ಸತ್ಯವನ್ನು ಒಪ್ಪಿಕೊಂಡು ಲಿಂಗಾಯತದೊಳಗೆ  ಬರಬೇಕು.

ನಾನು ವೀರಶೈವ ಎಂಬ ಪಂಗಡಕ್ಕೆ ಸೇರಿದವರು. ನಾನೂ ಕೂಡ ಒಬ್ಬ ಜಂಗಮ. ಜಂಗಮರೆಲ್ಲರೂ ಕಾಯಕ ನಿಷ್ಠೆಯಿಂದ ಲಿಂಗಾಯತರಾದವರು ಎಂದು ಹೇಳಿದ್ದಾರೆ.

click me!