
ನವದೆಹಲಿ (ಮಾ. 20): ಕಾಂಗ್ರೆಸ್ ಅಧಿವೇಶನದಲ್ಲಿ ಸೋನಿಯಾ, ಮನಮೋಹನ ಸಿಂಗ್'ರಿಂದ ಹಿಡಿದು ಚಿದಂಬರಂವರೆಗೆ ಎಲ್ಲರೂ ಎರಡು ದಿನ ಪಟ್ಟಾಗಿ ಕುಳಿತರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಅರ್ಧ ದಿನ
ಹಾಜರಿ ಹಾಕಿ ತಮ್ಮ ಭಾಷಣ ಮುಗಿದ ಮೇಲೆ ಗೈರಾಗಿದ್ದಾರೆ.
ರಾಹುಲ್'ರ ಮೊದಲ ಭಾಷಣ ಕೇಳಲು ಎಲ್ಲರೂ ಬಂದು ಕುಳಿತಿದ್ದರು. ಆದರೆ ಸಿದ್ದರಾಮಯ್ಯ ಮಾತ್ರ ಯುಗಾದಿ ಹಬ್ಬದ ಪ್ರಯುಕ್ತ ತುರ್ತು ಕೆಲಸವಿದೆ ಎಂದು ಬೆಂಗಳೂರು ವಿಮಾನ ಹತ್ತಿ ವಾಪಸ್ ಹೋಗಿದ್ದರು. ಹಿಂದೆ ಕೂಡ ಸಿಎಂ ಸಿದ್ದರಾಮಯ್ಯ ರಾಹುಲ್ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಆದರೆ, ಸಿದ್ದರಾಮಯ್ಯ ಏನೇ ಮಾಡಿದರೂ ಸುಮ್ಮನೆ ಕುಳಿತಿರಬೇಕಾದ ಅನಿವಾರ್ಯ ಸ್ಥಿತಿ ಕಾಂಗ್ರೆಸ್ ಹೈಕಮಾಂಡ್‌ಗೆ ಬಂದಿದೆ. ಹಿಂದೆಲ್ಲ ಗಾಂಧಿ ಕುಟುಂಬದ ಕಾರ್ಯದರ್ಶಿಯ ಮನೆಯಲ್ಲಿ ಮದುವೆ ಇದ್ದರೂ ಕಾಂಗ್ರೆಸ್ ಮುಖ್ಯಮಂತ್ರಿಗಳು ದೆಹಲಿಗೆ ಬಂದು ಮೂರು ನಾಲ್ಕು ದಿನ ಠಿಕಾಣಿ ಹೂಡಿದ ಉದಾಹರಣೆಗಳು ಇದೆ.
-ಪ್ರಶಾಂತ್ ನಾತು
ರಾಜಕಾರಣದ ಕುತೂಹಲಕಾರಿ ವಿಚಾರಗಳಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.