ತೆರಿಗೆಗಳ್ಳರಿಗೆ ಕಪ್ಪು ಹಣ ಬಿಳಿಯಾಗಿಸಲು ಈಗ ಮತ್ತೊಂದು ಅವಕಾಶ

By Suvarna Web DeskFirst Published Dec 13, 2016, 2:11 PM IST
Highlights

ಬ್ಯಾಂಕಿನಲ್ಲಿಟ್ಟಿರುವಲೆಕ್ಕವಿಲ್ಲದಠೇವಣಿಯನ್ನುಘೋಷಿಸಿಕೊಳ್ಳುವಮಾದರಿ, ವಿಧಾನಗಳನ್ನು, ಅದಕ್ಕೆವಿಧಿಸಲಾಗುವತೆರಿಗೆಪ್ರಮಾಣಮತ್ತಿತರಮಾಹಿತಿಯನ್ನುವಿವರಿಸಲಾಗುತ್ತದೆ.

ನವದೆಹಲಿ(ಡಿ.13): ಕೇಂದ್ರ ಸರ್ಕಾರ ತೆರಿಗೆಗಳ್ಳರಿಗೆ ಮತ್ತೊಂದು ಅವಕಾಶ ಒದಗಿಸುತ್ತಿದೆ. ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಶೇ.50​ರಷ್ಟುತೆರಿಗೆ ಪಾವತಿಸಿ ಕಪ್ಪು ಹಣ ಬಿಳಿ ಹಣ ಮಾಡಿಕೊಳ್ಳಲು ಮತ್ತೊಂದು ಅವಕಾಶ ನೀಡಲು ಈ ವಾರ ಕೇಂದ್ರ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ.
ನವೆಂಬರ್‌ 8 ರಂದು ಕೇಂದ್ರ ಸರ್ಕಾರ .500 ಮತ್ತು .1000 ನೋಟುಗಳ ರದ್ದು ಮಾಡಿದ ನಂತರ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಲೆಕ್ಕರಹಿತ ಮೊತ್ತಕ್ಕೆ ಇದು ಅನ್ವಯವಾಗುತ್ತದೆ. ಲೆಕ್ಕವಿಲ್ಲದಷ್ಟುಮೊತ್ತಕ್ಕೆ ಶೇ.50ರಷ್ಟುತೆರಿಗೆ ಪಾವತಿಸಿ ಬಿಳಿಯಾಗಿಸಿಕೊಳ್ಳಬಹುದು.
ಈ ವಾರ ಪ್ರಕಟಿಸುವ ಅಧಿಸೂಚನೆಯಲ್ಲಿ ಬ್ಯಾಂಕಿನಲ್ಲಿಟ್ಟಿರುವ ಲೆಕ್ಕವಿಲ್ಲದ ಠೇವಣಿ​ಯನ್ನು ಘೋಷಿಸಿಕೊಳ್ಳುವ ಮಾದರಿ, ವಿಧಾನಗಳನ್ನು, ಅದಕ್ಕೆ ವಿಧಿಸಲಾಗುವ ತೆರಿಗೆ ಪ್ರಮಾಣ ಮತ್ತಿತರ ಮಾಹಿತಿಯನ್ನು ವಿವರಿಸಲಾಗುತ್ತದೆ. ನವೆಂಬರ್‌ 29 ರಂದು ಲೋಕಸಭೆ ಅಂಗೀಕರಿಸಿದ ತೆರಿಗೆ ಕಾನೂನು (ಎರಡನೇ ತಿದ್ದುಪಡಿ) 2016ರಲ್ಲಿ ಅ ಅಂಶ ಸೇರಿತ್ತು.
ಡಿಸೆಂಬರ್‌ 30 ರಂದು ಹಳೆ ನೋಟು​ಗಳನ್ನು ಠೇವಣಿ ಇಡಲು ಕೊನೆ ಇದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟುಕಪ್ಪು ಹಣವನ್ನು ಬಿಳಿ ಹಣವನ್ನಾಗಿಸಲಾಗುತ್ತಿದೆ. ತೆರಿಗೆ ರೂಪದಲ್ಲಿ ಬಂದ ಶೇ.50ರಷ್ಟುಮೊತ್ತವನ್ನು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಗೆ ಬಳಸಲಾಗುತ್ತದೆ. ಉಳಿದ ಮೊತ್ತವನ್ನು 4 ವರ್ಷಗಳ ಕಾಲ ಬ್ಯಾಂಕಿನಲ್ಲಿ ಬಡ್ಡಿ ರಹಿತ ಠೇವಣಿಯಾಗಿ ಇಡಬೇಕು ಎಂಬುದು ಪೂರ್ವ ನಿರ್ಧಾರಿತ ಷರತ್ತು.
ನವೆಂಬರ್‌ 29 ರಂದು ಲೋಕಸಭೆಯು ತೆರಿಗೆ ಕಾನೂನು ತಿದ್ದುಪಡಿಯನ್ನು ಹಣ​ಕಾಸು ಮಸೂದೆ ಸ್ವರೂಪದಲ್ಲಿ ಅಂಗೀಕರಿ​ಸಿದೆ. ರಾಜ್ಯಸಭೆಯು ಹಣಕಾಸು ಮಸೂದೆ​ಯನ್ನು ಲೋಕಸಭೆಯಲ್ಲಿ ಮಂಡಿಸಿದ 14 ದಿನಗಳೊಳಗೆ ಹಿಂದಕ್ಕೆ ಕಳುಹಿಸಲು ಅವ​ಕಾಶ ಇದೆ. ಡಿಸೆಂಬರ್‌ 14ಕ್ಕೆ ಅಗತ್ಯವಾಗಿ ಬೇಕಾದ 14 ದಿನಗಳ ಅವಧಿ ಪೂರ್ಣಗೊಳ್ಳು ತ್ತದೆ. ನಂತರ ಅದನ್ನು ರಾಷ್ಟ್ರಪತಿಗಳಿಗೆ ರವಾನಿಸಿ ನಂತರ ಅಧಿಸೂಚನೆ ಹೊರಡಿಸ ಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿ​ದ್ದಾರೆ. ಜೂನ್‌ ತಿಂಗಳಲ್ಲಿ ಘೋಷಿಸಿದ್ದ ಆದಾಯ ಘೋಷಣೆ ಯೋಜನೆ 2016ರ ಮಾದರಿ​ಯಲ್ಲೇ ಈ ಯೋಜನೆಯಡಿ ಆದಾಯ ಘೋಷಿಸಿಕೊಂಡರೆ ಅದರ ಮೂಲ​ವನ್ನು ತೆರಿಗೆ ಇಲಾಖೆ ಅಥವಾ ಇನ್ನಾ ವುದು ಸಕ್ಷಮ ಪ್ರಾಧಿಕಾರವು ಪ್ರಶ್ನಿಸುವುದಿಲ್ಲ. ಆದರೆ, ಫೆಮಾ, ಪಿಎಂಎಲ್‌ಎ ನಾರ್ಕೊಟಿಕ್ಸ್‌ ಮತ್ತು ವಿದೇಶಿ ಕಪ್ಪುಹಣ ಕಾಯ್ದೆಯಡಿ ಕ್ಷಮೆ ಇರುವುದಿಲ್ಲ.

(http://epaper.kannadaprabha.in)

Latest Videos

click me!