2000 ರೂ. ನೋಟು 5 ವರ್ಷದ ನಂತರ ರದ್ದತಿ ? : ಕೇವಲ 500 ರೂ.ಗೆ ಮಾತ್ರ ಉಳಿಯುತ್ತೆ

Published : Dec 13, 2016, 02:03 PM ISTUpdated : Apr 11, 2018, 12:34 PM IST
2000 ರೂ. ನೋಟು 5 ವರ್ಷದ ನಂತರ ರದ್ದತಿ ? : ಕೇವಲ 500 ರೂ.ಗೆ ಮಾತ್ರ ಉಳಿಯುತ್ತೆ

ಸಾರಾಂಶ

‘‘.500, 1,000ದ ನೋಟುಗಳನ್ನು ಅಮಾನ್ಯಗೊಳಿಸಿ​ದಾಗ, ಚಲಾವಣೆಯಿಂದ ವಾಪಸ್‌ ಪಡೆದ ನೋಟುಗಳ ಅಂತರವನ್ನು ತುಂಬಲಷ್ಟೇ 2 ಸಾವಿರ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಯಿತು.

ನವದೆಹಲಿ(ಡಿ.13): ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 2 ಸಾವಿರ ಮುಖಬೆಲೆಯ ಹೊಸ ನೋಟು​ಗಳು ಕೂಡ ಮುಂದಿನ 5 ವರ್ಷಗಳೊಳಗಾಗಿ ಅಮಾನ್ಯಗೊಳ್ಳಲಿದೆ ಎಂದು ಆರೆಸ್ಸೆಸ್‌ ಜೊತೆ ನಿಕಟ ಸಂಬಂಧ ಹೊಂದಿರುವ ಖ್ಯಾತ ಚಾರ್ಟರ್ಡ್‌ ಅಕೌಂಟೆಂಟ್‌ ಎಸ್‌ ಗುರು​ಮೂರ್ತಿ ಹೇಳಿದ್ದಾರೆ.

ಅಷ್ಟೇ ಅಲ್ಲ, ಇನ್ನು ದೇಶದಲ್ಲಿ .500ರ ನೋಟುಗಳಷ್ಟೇ ಅಧಿಕ ಮುಖಬೆಲೆಯ ನೋಟುಗಳಾಗಿ ಉಳಿಯ​ಲಿದೆ ಎಂದೂ ಅವರು ತಿಳಿಸಿದ್ದಾರೆ.
‘ಇಂಡಿಯಾ ಟುಡೇ'ಗೆ ನೀಡಿದ ಸಂದರ್ಶನದಲ್ಲಿ ಗುರುಮೂರ್ತಿ ಅವರು ಈ ವಿಚಾರ ತಿಳಿಸಿದ್ದು, ಸರ್ಕಾರ ಮತ್ತು ಆರ್‌ಬಿಐನ ನೀತಿನಿಬಂಧನೆಗಳನ್ನು ತಾವೂ ಅರಿತಿರುವಂತೆ ಅವರು ಮಾತನಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಗುರುಮೂರ್ತಿ ಅವರು ಆರೆಸ್ಸೆಸ್‌ ಬೆಂಬಲಿತ ವಿವೇಕಾನಂದ ಇಂಡಿಯಾ ಪ್ರತಿಷ್ಠಾನದ ಪ್ರಮುಖ ಸದಸ್ಯರೂ ಆಗಿದ್ದಾರೆ.
ಹೊಸ ನೋಟು ಇರಲ್ಲ: ‘‘.500, 1,000ದ ನೋಟುಗಳನ್ನು ಅಮಾನ್ಯಗೊಳಿಸಿ​ದಾಗ, ಚಲಾವಣೆಯಿಂದ ವಾಪಸ್‌ ಪಡೆದ ನೋಟುಗಳ ಅಂತರವನ್ನು ತುಂಬಲಷ್ಟೇ 2 ಸಾವಿರ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಯಿತು. ಹೀಗಾಗಿ, ಇನ್ನು ಕೆಲವೇ ವರ್ಷಗಳಲ್ಲಿ ಈ ಹೊಸ ನೋಟನ್ನೂ ಅಮಾನ್ಯಗೊಳಿ​ಸಲಾ​ಗುವುದು. ಸಣ್ಣ ಮುಖಬೆಲೆಯ ನೋಟು​ಗಳತ್ತ ಮುಖಮಾಡುವುದು ಸರ್ಕಾರದ ಉದ್ದೇಶ. ಅದರಂತೆ, 500ರ ನೋಟು ಇನ್ನು ಅತಿ ಹೆಚ್ಚಿನ ಮುಖಬೆಲೆಯ ನೋಟು ಆಗಿರಲಿದೆ,'' ಎಂದಿದ್ದಾರೆ ಗುರುಮೂರ್ತಿ.
ಆರ್ಥಿಕ ಪೋಖ್ರಾನ್‌: ‘‘ಪ್ರಧಾನಿ ಮೋದಿ ಅವರ ನೋಟು ಅಮಾನ್ಯ ನಿರ್ಧಾರವು ಆರ್ಥಿಕ ಪೋಖ್ರಾನ್‌ಗೆ ಸಮ,'' ಎಂದೂ ಅವ​ರು ಬಣ್ಣಿ​ಸಿದ್ದಾರೆ. ಯಾವಾಗ ಜನರಲ್ಲಿ ಸಾಕಷ್ಟುಹಣವಿರುತ್ತದೋ, ಅವರು ಅನಗತ್ಯ​ವಾಗಿ ವೆಚ್ಚ ಮಾಡಲು ಶುರು​ಮಾಡುತ್ತಾರೆ. ಇದರಿಂದ ಬೇಜವಾಬ್ದಾರಿ​ಯುತ ದುಂದು​ವೆಚ್ಚಕ್ಕೆ ಕಾರಣಲಾಗುತ್ತದೆ. ಈ ನಿಟ್ಟಿನಲ್ಲಿ, ನೋಟು ಅಮಾನ್ಯವು ಬದಲಾವಣೆ ತರ ಲಿದೆ. ಪೋಖ್ರಾನ್‌ ಪರೀಕ್ಷೆ ಅನಿರೀಕ್ಷಿತ ಬದಲಾವಣೆಯನ್ನು ಉಂಟು ಮಾಡಿದಂತೆ ಇದೂ ಮಾಡುತ್ತೆ ಎಂದಿ​ದ್ದಾ​ರೆ.

(http://epaper.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪವರ್‌ ಪಾಯಿಂಟ್‌: ದ್ವೇಷ ಭಾಷಣ ಮಸೂದೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ
'ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ಫೆಬ್ರವರಿ-ಮಾರ್ಚ್ ಹಣ ಯಾವಾಗ ಬರುತ್ತೆ? ಸದನಕ್ಕೆ ತಪ್ಪು ಮಾಹಿತಿ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು!