
ಬೆಂಗಳೂರು(ಮೇ.11): ಬೆಂಗಳೂರಿನಲ್ಲಿ ಕಳ್ಳಕಾಕರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಚಿನ್ನಾಭರಣ ಕದಿಯುತ್ತಿದ್ದ ಖದೀಮರು ಇದೀಗ ಮದ್ಯ ಕದಿಯಲು ಶುರು ಮಾಡಿಕೊಂಡಿದ್ದಾರೆ. ಇಲ್ಲೊಂದು ಜನನಿಬಿಡ ಪ್ರದೇಶದ ಬಾರ್'ವೊಂದರಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯ ಸರಸ್ವತಿಪುರಂ ಮುಖ್ಯ ರಸ್ತೆಯಲ್ಲಿರುವ ಸ್ಫೂರ್ತಿ ಬಾರ್ನಲ್ಲಿ ಕಳ್ಳರು ಕೇವಲ ನಾಲ್ಕಿಂಚು ಅಂತವಿರುವ ಸರಳನ್ನು ಹಿಗ್ಗಿಸಿ ಬಾರ್ ಒಳಗೆ ನುಗ್ಗಿದ್ದಾರೆ.
ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ದೊಣ್ಣೆ ಹಾಗೂ ತಂತಿಯ ಸಹಾಯದಿಂದ ಕಿಟಕಿಯ ಸರಳನ್ನ ಸದ್ದೇ ಆಗದಂತೆ ಹಿಗ್ಗಿಸಿದ್ದಾರೆ. ಕೇವಲ ಐದಿಂಚು ಜಾಗದಲ್ಲೆ ನುಸುಳಿರುವ ಖದೀಮ ಸುಮಾರು 10 ನಿಮಿಷಗಳ ಕಾಲ ಇಡೀ ಬಾರ್ ತಡಕಾಡಿದ್ದಾನೆ. 8 ಸಾವಿರ ರೂಪಾಯಿ ನಗದು ಜೊತೆಗೆ 10 ಸಾವಿರ ಮೌಲ್ಯದ ಮದ್ಯವನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ.
ಬಾರ್'ಗೆ ಕನ್ನ ಹಾಕಿದ್ದನ್ನು ಕಂಡು ಬೆಚ್ಚಿಬಿದ್ದ ಬಾರ್ ಮಾಲೀಕ ಮುನಿರಾಜ್ ಮಹಾಲಕ್ಷ್ಮೀಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಪಕ್ಕದ ಬಟ್ಟೆ ಅಂಗಡಿಯ ಶೆಟರ್ ಮುರಿದು ಗಲ್ಲಾ ಪೆಟ್ಟಿಗೆಯಲ್ಲಿದ್ದ ಚಿಲ್ಲರೇ ಕಾಸನ್ನು ಎತ್ತಿಕೊಂಡು ಪರಾರಿಯಾಗಿದ್ದರು. ಇನ್ನೂ ಮುಖ್ಯ ರಸ್ತೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ 8ಕ್ಕೂ ಹೆಚ್ಚು ಅಂಗಡಿಗಳಲ್ಲಿ ಕಳ್ಳತನವಾಗಿದೆ. ಈ ಬಗ್ಗೆ ದೂರು ನೀಡಿದ್ರೂ, ಪೊಲೀಸರು ಮಾತ್ರ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಇನ್ನಾದರೂ ಪೊಲೀಸರು, ಸರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಕಳ್ಳರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.