
ಬೆಂಗಳೂರು(ಮೇ.11): ನಿನ್ನೆಯಷ್ಟೆ ಸ್ಯಾಂಡಲ್ ವುಡ್ ಬ್ಯೂಟಿ ಅಮೂಲ್ಯ ಮತ್ತು ಜಗದೀಶ್ ಮೆಹಂದಿ ಕಾರ್ಯಕ್ರಮ ಬಹಳ ಸಂಭ್ರಮದಿಂದ ನಡೆಯಿತು. ಸಂಭ್ರಮದ ಮೆಹಂದಿ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಬಳಗ ಸಾಕ್ಷಿಯಾಯಿತು. ಇಂದು ನವ ವಧು-ವರರು ಆದಿಚುಂಚನಗಿರಿ ಕ್ಷೇತ್ರದತ್ತ ಪ್ರಯಾಣ ಬೆಳಸಲಿದ್ದಾರೆ.
ಅಮೂಲ್ಯ ಸ್ವಗೃಹದಲ್ಲಿ ವಧು ಪೂಜೆ ಸಲ್ಲಿಸಿ ಕುಟುಂಬ ಸಮೇತ ಅಮೂಲ್ಯ ಆದಿಚುಂಚನಗಿರಿಗೆ ಪ್ರಯಾಣ ಬೆಳಸಲಿದ್ದಾರೆ. ಇನ್ನು ಅಮೂಲ್ಯ ಕುಟುಂಬ ಪ್ರಯಾಣ ಬೆಳಸಿದ ಬಳಿಕ ಆರ್ ಆರ್ ನಗರದಿಂದ ಜಗದೀಶ್ ವರ ಪೂಜೆ ಮುಗಿಸಿ ಕುಟುಂಬ ಸಮೇತರಾಗಿ ಆದಿಚುಂಚನಗಿರಿಯತ್ತ ಪ್ರಯಾಣ ಬೆಳಸಲಿದ್ದಾರೆ.
ಇನ್ನು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದಲ್ಲಿ ಜಗದೀಶ್ ಕುಟುಂಬದವರನ್ನ ಮಂಟಪಕ್ಕೆ ಕರೆದುಕೊಂಡು ಬರುವ ಶಾಸ್ತ್ರ ನಡೆಯುತ್ತದೆ. ಇದಾದ ಮೇಲೆ ಗಂಗೆ ಶಾಸ್ತ್ರ ಹಾಗು ವಧು ವರರ ಶಾಸ್ತ್ರಗಳು ನಡೆಯಲಿವೆ. ನಾಳೆ ಶುಭ ಲಗ್ನದಲ್ಲಿ ಅಮೂಲ್ಯ ಜಗದೀಶ್ ಮದುವೆ ಮುಹೂರ್ತ ನೆರವೇರಲಿದೆ. ಎರಡು ಕುಟುಂಬದವರು ಹಾಗೂ ಶ್ರೀ ನಿರ್ಮಾಲಾನಂದ ಸ್ವಾಮಿ ಸಮ್ಮುಖದಲ್ಲಿ ಜಗದೀಶ್ ಅಮೂಲ್ಯ ಕೈ ಹಿಡಿಯಲಿದ್ದಾರೆ. ನೂರಾರು ಜನ ಸ್ಯಾಂಡಲ್ವುಡ್ ಮಂದಿ ಅಮ್ಮು, ಜಗದೀಶ್ ಮದುವೆಗೆ ಸಾಕ್ಷಿಯಾಗಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.