
ಮುಂಬೈ[ಅ. 03] ಕೇಂದ್ರ ಸಚಿವರ ಮನೆಯಲ್ಲೆ ಕಳ್ಳತನವಾಗಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಕಂಪ್ಯೂಟರ್ ನಲ್ಲಿದ್ದ ಮಾಹಿತಿ ಹಾಗೂ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಯಲ್ ಅವರಿಗೆ ಸಂಬಂಧಿಸಿದ ಕಂಪ್ಯೂಟರ್ ನಲ್ಲಿದ್ದ ಮಾಹಿತಿಗಳನ್ನು ಮನೆಕೆಲಸ ಮಾಡುತ್ತಿದ್ದ ವಿಷ್ಣು ಕುಮಾರ್ ಎಂಬಾತ ಕಳ್ಳತನ ಮಾಡಿದ್ದು, ಅಪರಿಚಿತ ವ್ಯಕ್ತಿಗಳಿಗೆ ನೀಡಿದ್ದ ಎಂದು ಹೇಳಲಾಗಿದೆ.
ಆಪರೇಶನ್ ಕಮಲಕ್ಕೆ ಅಸಲಿ ಮಾಸ್ಟರ್ ಮೈಂಡ್ ಅವರೇ!
ದೆಹಲಿಯ ನಿವಾಸಿಯಾಗಿರುವ ಆರೋಪಿ ವಿಷ್ಣು (25) ವಿರುದ್ಧ ಇದೀಗ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಸೆ. 16 ರಿಂದ 18 ರ ನಡುವಿನ ದಿನಾಂಕದಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ವಸ್ತುಗಳು ನಾಪತ್ತೆಯಾಗಿರುವುದು ಕಂಡು ಬಂದ ನಂತರ ಕಳ್ಳತನದ ಅರಿವಾಗಿದೆ.
ಬೆಳ್ಳಿ ಕಲಾಕೃತಿ, ವಾಚ್, 40 ಸಾವಿರ ಮೌಲ್ಯದ ಬಟ್ಟೆ ಮತ್ತು ಹಾರ್ಡ್ ಡಿಸ್ಕ್ ಮೊದಲಾದವುಗಳನ್ನು ಕಳವು ಮಾಡಿದ್ದ ಈತನನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದು, ಗುರುವಾರ ಮುಂಬೈಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.