ಧಾರವಾಡ ಸಮ್ಮೇಳನಕ್ಕೆ ತೆನಾಲಿ ರಾಮನಾಗಿ ಬಂದ ಹಿರಿಯ ರಂಗಕರ್ಮಿ!

Published : Jan 04, 2019, 10:26 PM IST
ಧಾರವಾಡ ಸಮ್ಮೇಳನಕ್ಕೆ  ತೆನಾಲಿ ರಾಮನಾಗಿ ಬಂದ ಹಿರಿಯ ರಂಗಕರ್ಮಿ!

ಸಾರಾಂಶ

ಸಮ್ಮೇಳನಕ್ಕೆ ಆಹ್ವಾನವಿಲ್ಲ, ನಮ್ಮನ್ನು ಕಡೆಗಣಿಸಲಾಗಿದೆ ಎಂದು ತರಹೇವಾರಿ ಪ್ರತಿಭಟನೆಗಳನ್ನು ನೋಡಿದ್ದೇವೆ. ಆದರೆ, ಧಾರವಾಡ ಮೂಲದ ಹಿರಿಯ ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರು ಇದೇ ಕಾರಣಕ್ಕಾಗಿ ತೆಲೆಗೆ ಅಲ್ಯೂಮಿನಿಯಂ ಗಡಿಗೆ ಹಾಕಿಕೊಂಡು ತೆನಾಲಿ ರಾಮನ ವೇಷದಲ್ಲಿ ವಿಶೇಷವಾಗಿ ಗಮನ ಸೆಳೆದರು.

ಧಾರವಾಡ[ಜ.04]  ಹತ್ತಾರು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಬರೀ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿರುವ ನನಗೆ ಸೌಜನ್ಯಕ್ಕೂ ಸಮ್ಮೇಳನಕ್ಕೆ ಆಹ್ವಾನಿಸಿಲ್ಲ ಎಂದು ರಂಗಕರ್ಮಿ ಯಶವಂತ ಸರದೇಶಪಾಂಡೆ ಆರೋಪಿಸಿದರು.

ತಲೆ ಮೇಲೆ ಪಾತ್ರೆ ಇಟ್ಟುಕೊಂಡ ಅವರು ಆಯೋಜಕರ ಕ್ರಮದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಅಲ್ಯೂಮಿನಿಯಂ ಪಾತ್ರೆಯಿಂದ ಮುಖಮುಚ್ಚಿಕೊಂಡು ತೆನಾಲಿ ರಾಮನ ಶೈಲಿಯಲ್ಲಿ ಕೃಷಿ ವಿವಿ ಮುಖ್ಯಧ್ವಾರದ ಎದುರು ಆಗಮಿಸಿದ ಅವರು, ಕಸಾಪ ಜಿಲ್ಲಾ ಘಟಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಕನ್ನಡ ಮಾಧ್ಯಮ ಕಡೆಗಣನೆ, ಕುಮಾರಸ್ವಾಮಿಗೆ ಕುಟುಕಿದ ಕಂಬಾರ

ತಮನ್ನು ಸಮ್ಮೇಳನದಲ್ಲಿ ಯಾವುದಕ್ಕೂ ಬಳಸಿಕೊಂಡಿಲ್ಲ. ಕನಿಷ್ಟ ಪಕ್ಷ ಕಾರ್‍ಯಕ್ರಮಕ್ಕೂ ಆಹ್ವಾನ ಮಾಡಿಲ್ಲ. ಈ ಕುರಿತು ವಾರದ ಹಿಂದಷ್ಟೇ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅವರಿಗೆ ಕರೆ ಮಾಡಿದಾಗ, ರಂಗಾಯಣ ನಿರ್ದೇಶಕ ಪ್ರಮೋದ ಶಿಗ್ಗಾಂವ ಹಾಗೂ ಮನೋಜ ಹಾನಗಲ್ ಅವರೇ ನೋಡಿಕೊಳ್ಳುತ್ತಿದ್ದಾರೆಂದು ಜವಾಬ್ದಾರಿಯಿಂದ ತಪ್ಪಿಸಿಕೊಂಡರು. ಹೀಗಾಗಿ  ಬೇಸರಿಂದ ಮುಖ್ಯ ವೇದಿಕೆಗೆ ತೆನಾಲಿ ರಾಮನ ವೇಷಧಾರಿಯಾಗಿ ಬಂದು ಸಾತ್ವಿಕ ಪ್ರತಿಭಟನೆ ತೋರಿದ್ದೇನೆ ಎಂದರು.


 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜನ್ಮ ದಿನದಲ್ಲಿ ಒಮ್ಮೆಯಾದ್ರೂ ಸಂಖ್ಯೆ 1 ಇದ್ಯಾ? ಹಾಗಿದ್ದರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ- ಎಷ್ಟು ಬಾರಿ ಇದ್ದರೆ ಏನು ಫಲ?
ಅತಿಹೆಚ್ಚು ಮದ್ಯಪಾನ ಮಾಡುವ ಜಗತ್ತಿನ ಸೈನ್ಯ ಯಾವುದು? ಭಾರತದ ಸೇನೆಗೆ ಎಷ್ಟನೇ ಸ್ಥಾನ?