ಹೆಸರಾಂತ ಕವಿ ದಂಪತಿಯನ್ನು ತಡೆದ ಪೊಲೀಸರು..ಸಾಹಿತ್ಯ ಸಮ್ಮೇಳನದಲ್ಲಿ ಇದೇನು?

By Web DeskFirst Published Jan 4, 2019, 9:48 PM IST
Highlights

ಧಾರವಾಡದಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ಆದರೆ ಸಮ್ಮೇಳನಕ್ಕೆ ಕನ್ನಡದ ಹೆಸರಾಂತ ಕವಿ, ಸಾಹಿತಿಗಳನ್ನು ಆಹ್ವಾನಿಸಲಾಗಿಲ್ಲ ಎಂಬ ದೂರು ಸಹ ಕೇಳಿ ಬಂದಿದೆ.

ಧಾರವಾಡ[ಜ.04]  ಸಮ್ಮೇಳನಕ್ಕೆ ತಮಗೆ ಆಹ್ವಾನಿಸದೇ ಕಸಾಪದವರು ತಮಗೆ ಅಗೌರವ ತೋರಿದ್ದಾರೆಂದು ಸಾಹಿತಿ, ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ಹೇಮಾ ಪಟ್ಟಣಶೆಟ್ಟಿ ದಂಪತಿ ಕಸಾಪ ಮತ್ತು ಮನು ಬಳಿಗಾರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ ಬಳಿಯೇ ತಮ್ಮ ಅಸಮಾಧಾನ ಹೊರಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯ ವೇದಿಕೆ ಬಳಿ ಪಾಸ್ ಇಲ್ಲದ್ದರಿಂದ ಪಟ್ಟಣಶೆಟ್ಟಿ ದಂಪತಿಗಳನ್ನು ಪೊಲೀಸರು ತಡೆದರು.
ಆಗ ತಮಗೆ ಸೌಜನ್ಯಕ್ಕೂ ಆಯೋಜಕರು ಪಾಸ್ ನೀಡಿಲ್ವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಹೊರಗೆ ಹೊರಟಿದ್ದರು. ಇದನ್ನು ಕಂಡ ಮನು ಬಳಿಗಾರ್  ವೇದಿಕೆ ಇಳಿದು ಬಂದು ಕ್ಷಮೆ ಕೇಳಿ ಕರೆದುಕೊಂಡು ಹೋದರು.

ಧಾರವಾಡದಲ್ಲಿ ಚಂದ್ರಶೇಖರ ಕಂಬಾರ್ ಸರ್ವಾಧ್ಯಕ್ಷತೆಯಲ್ಲಿ ಕನ್ನಡ ಹಬ್ಬ ನಡೆಯುತ್ತಿದೆ. ರಾಜ್ಯ ಮಾತ್ರವಲ್ಲದೇ ದೇಶ ವಿದೇಶಗಳಿಂದಲೂ ಕನ್ನಡಿಗರೂ ಆಗಮಿಸಿದ್ದು ಸಾಹಿತ್ಯದ ಚಿಂತನ-ಮಂಥನ ನಡೆಯುತ್ತಿದೆ.

click me!