ಡೈರಿ ರಹಸ್ಯ ಬಯಲು: ಕೋಡ್ ವರ್ಡ್'ಗಳಲ್ಲಿದ್ದ ಹೆಸರು ಯಾರದ್ದು ಗೊತ್ತಾ? ಗೋವಿಂದರಾಜ್ ಹೇಳಿದ್ದೇನು?

Published : Jun 23, 2017, 08:26 AM ISTUpdated : Apr 11, 2018, 01:12 PM IST
ಡೈರಿ ರಹಸ್ಯ ಬಯಲು: ಕೋಡ್ ವರ್ಡ್'ಗಳಲ್ಲಿದ್ದ ಹೆಸರು ಯಾರದ್ದು ಗೊತ್ತಾ? ಗೋವಿಂದರಾಜ್ ಹೇಳಿದ್ದೇನು?

ಸಾರಾಂಶ

ರಾಜ್ಯ ಸಚಿವರು ಕಾಂಗ್ರೆಸ್ ಹೈ ಕಮಾಂಡ್‌ಗೆ ಕಪ್ಪ ಕೊಟ್ಟಿದ್ದು ನಿಜನಾ ಡೈರಿಯಲ್ಲಿ ಉಲ್ಲೇಖಿಸಿರುವ ಸಂಕೇತಗಳಾದ SG ಅಂದ್ರೆ ಸೋನಿಯಾ ಗಾಂಧಿ..! RG ಅಂದ್ರೆ ರಾಹುಲ್ ಗಾಂಧಿನಾ.? ಐಟಿ ಅಧಿಕಾರಿಗಳ ಮುಂದೆ ಪರಿಷತ್ ಸದಸ್ಯ ಗೋವಿಂದರಾಜ್ ಡೈರಿ ಬಗ್ಗೆ ಏನ್ ಹೇಳಿದ್ರು. ಇದ್ರೆಲ್ಲದ ಬಗ್ಗೆ ಸುವರ್ಣನ್ಯೂಸ್‌ಗೆ ಎಕ್ಸ್ ಕ್ಲ್ಯೂಸಿವ್ ಮಾಹಿತಿ ಸಿಕ್ಕಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು(ಜೂ.23): ರಾಜ್ಯ ಸಚಿವರು ಕಾಂಗ್ರೆಸ್ ಹೈ ಕಮಾಂಡ್‌ಗೆ ಕಪ್ಪ ಕೊಟ್ಟಿದ್ದು ನಿಜನಾ ಡೈರಿಯಲ್ಲಿ ಉಲ್ಲೇಖಿಸಿರುವ ಸಂಕೇತಗಳಾದ SG ಅಂದ್ರೆ ಸೋನಿಯಾ ಗಾಂಧಿ..! RG ಅಂದ್ರೆ ರಾಹುಲ್ ಗಾಂಧಿನಾ.? ಐಟಿ ಅಧಿಕಾರಿಗಳ ಮುಂದೆ ಪರಿಷತ್ ಸದಸ್ಯ ಗೋವಿಂದರಾಜ್ ಡೈರಿ ಬಗ್ಗೆ ಏನ್ ಹೇಳಿದ್ರು. ಇದ್ರೆಲ್ಲದ ಬಗ್ಗೆ ಸುವರ್ಣನ್ಯೂಸ್‌ಗೆ ಎಕ್ಸ್ ಕ್ಲ್ಯೂಸಿವ್ ಮಾಹಿತಿ ಸಿಕ್ಕಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ದೊಡ್ಡ ಸಂಚಲನ ಸೃಷ್ಟಿಸಿದ  ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡಿದ ಆರೋಪ ಪ್ರಕರಣ ಇದೀಗ ಮತ್ತೆ ರಾಜ್ಯ ಸರ್ಕಾರಕ್ಕೆ ಮುಳುವಾಗಲಿದೆ. ಮೊನ್ನೆಯಷ್ಟೇ 50 ಸಾವಿರ ರೂಪಾಯಿ ರೈತರ ಸಾಲ ಮನ್ನಾ ಮಾಡಿ ಬೀಗುತ್ತಿದ್ದ ಸಿಎಂ ಸಿದ್ದರಾಮಯ್ಯ, ಇದ್ರಿಂದ ಮುಜುಗರಕ್ಕೀಡಾಗುವ ಸಾಧ್ಯತೆಯಿದೆ.

‘ಕೈ’ಗೆ  ಕಪ್ಪ ಸಂಕಷ್ಟ!: ಸತ್ಯ ಒಪ್ಪಿಕೊಂಡರಾ MLC ಗೋವಿಂದರಾಜು?

ಒಂದು ವರ್ಷದ ಹಿಂದೆ ಸಿಎಂ ಸಿದ್ದರಾಮಯ್ಯ ಆಪ್ತ, ವಿಧಾನ ಪರಿಷತ್ ಸದಸ್ಯ ಕೆ ಗೋವಿಂದರಾಜ್ ಮನೆಯ ಮೇಲೆ ಐಟಿ ದಾಳಿ ನಡೆದಾಗ ಡೈರಿ ಸಿಕ್ಕಿತ್ತು. ಡೈರಿಯಲ್ಲಿ ರಾಜ್ಯ ಸರ್ಕಾರದ ಸಚಿವರು, ಹೈಕಮಾಂಡ್ ಗೆ ನೀಡಿದ್ದಾರೆನ್ನಲಾದ ಕಪ್ಪದ ಮಾಹಿತಿಯನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿತ್ತು. ಗೋವಿಂದರಾಜ್‌ ಅವರ ಡೈರಿಯಲ್ಲಿರುವ ಸಂಕೇತ ರೂಪದ ಶಬ್ದಗಳು ಸಿದ್ದರಾಮಯ್ಯ ಅವರ ಸಂಪುಟದ ಐವರು ಪ್ರಭಾವಿ ಸಚಿವರ ಹೆಸರನ್ನು ಸೂಚಿಸುತ್ತವೆ ಎಂದು ರಾಷ್ಟ್ರೀಯ ವಾಹಿನಿಯೊಂದು ಹಂತಹಂತವಾಗಿ ವರದಿ ಪ್ರಸಾರ ಮಾಡಿತ್ತು. ಇದು ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿತ್ತು.

ಆದರೆ  ಗೋವಿಂದರಾಜ್ ಮಾತ್ರ, ಡೈರಿ ನನ್ನದಲ್ಲ. ಡೈರಿಯಲ್ಲಿರುವ ಕೈ ಬರಹ ನನಗೆ ಸಂಬಂಧಿಸಿದ್ದಲ್ಲ ಅಂತಾ ಹೇಳ್ತಲೆ ಬರ್ತಿದ್ದರು. ಸದನದ ಮುಂದೆಯೂ ಇದನ್ನೇ ಹೇಳಿದ್ರು. ಅಲ್ದೇ ಐಟಿ ಅಧಿಕಾರಿಗಳೇ ತನ್ನ ಮನೆಗೆ ಡೈರಿ  ತಂದಿಟ್ಟು ವಶಪಡಿಸಿಕೊಂಡಿದ್ದಾರೆ ಅಂತಾ ಆರೋಪ ಮಾಡ್ತಾ ಬರ್ತಿದ್ದರು. ಆದ್ರೆ ಐಟಿ ಮುಂದೆ ಡೈರಿ ಬಗ್ಗೆ ಗೋವಿಂದರಾಜ್ ಏನ್ ಹೇಳಿದ್ರು ಎಂಬುದರ ದಾಖಲೆ ಸುವರ್ಣನ್ಯೂಸ್‌ಗೆ ಎಕ್ಸ್ ಕ್ಲ್ಯೂಸಿವ್ ಮಾಹಿತಿ ಸಿಕ್ಕಿದೆ.

ಡೈರಿ ರಹಸ್ಯ ಐಟಿ ಅಧಿಕಾರಿಗಳ ಮುಂದೆ ಬಯಲು

ಪರಿಷತ್ ಸದಸ್ಯ ಗೋವಿಂದರಾಜ್‌ಕನ್ನು ವಿಚಾರಣೆಗೊಳಪಡಿಸಿದ್ದಾಗ  ಡೈರಿ ಹಿಂದಿನ ರಹಸ್ಯ ಬಯಲಾಗಿದೆ. ಆದ್ರೆ ಡೈರಿಯಲ್ಲಿದ್ದಾಗ ಕೋಡ್ ವರ್ಡ್‌ಗಳ ಬಗ್ಗೆ ಐಟಿ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ದಾಗ, ಗೋವಿಂದರಾಜ್ ಜಾಣನಡೆ ಪ್ರದರ್ಶಿಸಿದ್ದಾರೆ. ವಿಚಾರಣೆಗೂ ಮುನ್ನ ಏನ್ ಹೇಳ್ಬೇಕು ಅಂತಾ ತಯಾರಿ ಮಾಡ್ಕೊಂಡು ಬಂದಿದ್ದರು ಅದನ್ನಷ್ಟೇ ಹೇಳಿದ್ದಾರೆ.

ಗೋವಿಂದರಾಜ್ ಉತ್ತರ

ಐಟಿ ಅಧಿಕಾರಿಗಳ ಮುಂದೆ  ಡೈರಿಯಲ್ಲಿ ಕೋಡ್ ವರ್ಡ್ ಗಳಲ್ಲಿದ್ದ ಹೆಸರು ಕಾಂಗ್ರೆಸ್ ನಾಯಕರದ್ದೇ ಅಂತಾ  ಗೋವಿಂದರಾಜ್ ಹೇಳಿದ್ದಾರೆ. ಆದರೆ ತನ್ನ ವೈಯಕ್ತಿಕ ಲೆಕ್ಕಾಚಾರಗಳಿಗೆ ಬರೆದುಕೊಂಡಿದ್ದಾಗಿ ಉತ್ತರಿಸಿದ್ದಾರೆ.

ಒಟ್ಟಿನಲ್ಲಿ ಇಷ್ಟು ದಿನ ಡೈರಿ ನನ್ನದಲ್ಲ ಅಂತಾ ಹೇಳುತ್ತಾ ಬಬಂದಿದ್ದ ಗೋವಿಂದರಾಜ್, ಇದೀಗ ಐಟಿ ಅಧಿಕಾರಗಳ ಮುಂದೆ ಡೈರಿ ನನ್ನದೇ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್'ಗೆ ಕೊಟ್ಟ ದುಡ್ಡಿನ ವಿವರ ಡೈರಿಯಲ್ಲಿ ಬಯಲಾಗಿದ್ದು, ಗೋವಿಂದರಾಜ್ ಹೇಳಿಕೆ ಇಡೀ ಪಕ್ಷದ ಭವಿಷ್ಯವನ್ನೇ ಬುಡಮೇಲು ಮಾಡಿದರೂ ಆಶ್ಚರ್ಯವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯಪುರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 5 ಎಕರೆ ಕಬ್ಬು, ಟ್ರೈಲರ್ ಬೆಂಕಿಗಾಹುತಿ! ರೈತ ಕಣ್ಣೀರು
ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ