ಬಿಜೆಪಿಯಲ್ಲಿ ಮೂರನೇ ಗುಂಪು: ಪಕ್ಷವೊಂದು, ಮೂರು ಬಾಗಿಲು..!

By Suvarna Web DeskFirst Published Jun 22, 2017, 11:24 PM IST
Highlights

ಇಷ್ಟು ದಿನ ತೆರೆಮರೆಯಲ್ಲೇ ಕಾರ್ಯಾಚರಿಸುತ್ತಿದ್ದ ರಾಜ್ಯ ಬಿಜೆಪಿಯಲ್ಲಿನ ಮೂರನೇ ಗುಂಪು ಮುನ್ನೆಲೆಗೆ ಬರಲು ಪ್ರಯತ್ನ ನಡೆಸುತ್ತಿರುವಂತಹ ಬೆಳವಣಿಗೆಗಳು ನಡೆಯುತ್ತಿರುವಂತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ನಡುವಿನ ಹಗ್ಗ ಜಗ್ಗಾಟವನ್ನೇ ನೋಡುತ್ತಿರುವ ಸಂದರ್ಭದಲ್ಲಿ ಈಗ ಸಂತೋಷ್  ಬಳಗ ಎಂಬ ಮತ್ತೊಂದು ಟೀಂ ರಚನೆಯಾಗಿರುವ ಅಂಶ ಬಹಿರಂಗವಾಗಿದೆ. ಈ ಸಂಬಂಧ ಇವತ್ತು ಸಂತೋಷ್ ಬಳಗದ ಹೆಸರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಾಲಯದ ಲೆಟರ್ ಹೆಡ್ನಲ್ಲೇ ಮಾಧ್ಯಮಗಳಿಗೆ ಪತ್ರವೊಂದು ತಲುಪಿದ್ದು ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಗುಂಪು ಸಕ್ರೀಯವಾಗುತ್ತಿರುವ ಸೂಚನೆ ಸಿಕ್ಕಿದೆ.

ಬೆಂಗಳೂರು(ಜೂ.22): ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಗುಂಪು ಹುಟ್ಟಿಕೊಂಡಿದೆಯಾ? ಹೀಗೊಂದು ಪ್ರಶ್ನೆ ಇವತ್ತು ಉದ್ಭವವಾಗಿದೆ. ಯಾಕೆಂದರೆ ಸಂತೋಷ್ ಬಳಗ ಎಂಬ ಹೆಸರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಾಲಯದ ಲೆಟರ್ ಹೆಡ್ ಹೊಂದಿರುವ ಪತ್ರವೊಂದು ಬಹಿರಂಗವಾಗಿದೆ‌. ಸತ್ಯಾಸತ್ಯತೆಯ  ಪ್ರಶ್ನೆಗಳ ಜೊತೆಗೆ ಹಲವು ಆಂತರಿಕ ಅಂಶಗಳನ್ನು ಈ ಪತ್ರ ಬಯಲು ಮಾಡಿದೆ.

ಇಷ್ಟು ದಿನ ತೆರೆಮರೆಯಲ್ಲೇ ಕಾರ್ಯಾಚರಿಸುತ್ತಿದ್ದ ರಾಜ್ಯ ಬಿಜೆಪಿಯಲ್ಲಿನ ಮೂರನೇ ಗುಂಪು ಮುನ್ನೆಲೆಗೆ ಬರಲು ಪ್ರಯತ್ನ ನಡೆಸುತ್ತಿರುವಂತಹ ಬೆಳವಣಿಗೆಗಳು ನಡೆಯುತ್ತಿರುವಂತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ನಡುವಿನ ಹಗ್ಗ ಜಗ್ಗಾಟವನ್ನೇ ನೋಡುತ್ತಿರುವ ಸಂದರ್ಭದಲ್ಲಿ ಈಗ ಸಂತೋಷ್  ಬಳಗ ಎಂಬ ಮತ್ತೊಂದು ಟೀಂ ರಚನೆಯಾಗಿರುವ ಅಂಶ ಬಹಿರಂಗವಾಗಿದೆ. ಈ ಸಂಬಂಧ ಇವತ್ತು ಸಂತೋಷ್ ಬಳಗದ ಹೆಸರಿನಲ್ಲಿ ರಾಜ್ಯ ಬಿಜೆಪಿ ಕಾರ್ಯಾಲಯದ ಲೆಟರ್ ಹೆಡ್ನಲ್ಲೇ ಮಾಧ್ಯಮಗಳಿಗೆ ಪತ್ರವೊಂದು ತಲುಪಿದ್ದು ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಗುಂಪು ಸಕ್ರೀಯವಾಗುತ್ತಿರುವ ಸೂಚನೆ ಸಿಕ್ಕಿದೆ.

ಇಂದು ಸಂತೋಷ್ ಬಳಗದ ಹೆಸರಿನಲ್ಲಿ ಬಹಿರಂಗವಾಗಿರುವ ಪತ್ರದಲ್ಲಿ ಕೆಲವು ತಿಂಗಳ ಹಿಂದೆ ಮೈಸೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಣಿಯ ಕೆಲವು  ಆಂತರಿಕ ಅಂಶಗಳನ್ನು ಬಹಿರಂಗಗೊಳಿಸಿದೆ. ಸಂತೋಷ್ ಬಳಗದ ಹೆಸರಿನಲ್ಲಿ ಬಿಜೆಪಿ ಕಚೇರಿಯ ಲೆಟರ್ ಹೆಡ್ನಲ್ಲಿ ಹೊರಬಿದ್ದಿರುವ ಪತ್ರದ ಸತ್ಯಾಸತ್ಯತೆ ಇನ್ನಷ್ಟೇ ಖಚಿತ ಆಗಬೇಕಿದೆ. ಆದರೂ ಮೈಸೂರು ಕಾರ್ಯಕಾರಣಿ ವೇಳೆ ನಡೆದ ಕೆಲವು ಘಟನೆಗಳಿಗೂ ಪತ್ರದಲ್ಲಿ ಉಲ್ಲೇಖವಾಗಿರುವ ಅಂಶಗಳಿಗೂ ತಾಳೆಯಾಗುತ್ತಿರುವುದು ಗಮನಾರ್ಹ.

ಒಂದು ವೇಳೆ ಸಂತೋಷ್ ಬಳಗದ ಕಾರ್ಯಚಟುವಟಿಕೆ ಸಕ್ರಿಯ ಆಗಿತ್ತು ಅಂತ ಇಟ್ಕೊಳ್ಳಿ. ಮೊದಲೇ ಯಡಿಯೂರಪ್ಪ ಮತ್ತು ಈಶ್ವರಪ್ಪ ಭಿನ್ನಮತದಿಂದ ಬಳಲುತ್ತಿರುವ ಬಿಜೆಪಿಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಿದೆ. ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಯಲ್ಲಿನ ಇಂದಿನ ಬೆಳವಣಿಗೆ ಕಾರ್ಯಕರ್ತರನ್ನು ಕಂಗೆಡಿಸಿದೆ.

ವರದಿ:ಕಿರಣ್  ಹನಿಯಡ್ಕ, ಸುವರ್ಣ ನ್ಯೂಸ್.

click me!