ನಿತೀಶ್ ಕುಮಾರ್ ರಾಜಿನಾಮೆ ನೀಡಲು ಕಾರಣವಾಗಿದ್ದೇನು ಗೊತ್ತಾ? ಮೋದಿ ಕಡೆಗೆ ವಾಲಲು ಕಾರಣವಾದ ಆ ಅಂಶ...!

By Suvarna Web DeskFirst Published Jul 27, 2017, 10:50 AM IST
Highlights

ಆರ್‌ಜೆಡಿ ನೇತಾರ ಲಾಲುಪ್ರಸಾದ್ ಯಾದವ್ ಅವರ ಪುತ್ರ, ಡಿಸಿಎಂ ತೇಜಸ್ವಿ ಯಾದವ್ ಮೇಲೆ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದರೂ ಅವರು ಕೊನೆಯವರೆಗೂ ಸ್ಪಷ್ಟನೆ ನೀಡಲಿಲ್ಲ. ಹಾಗಾಗಿ ಬೇರೆ ದಾರಿಯೇ ಇಲ್ಲದೇ ರಾಜೀನಾಮೆ ನೀಡಿದ್ದೇನೆ ಎಂದು ಬಿಹಾರದ ನಿರ್ಗಮಿತ ಮುಖ್ಯಮಂತ್ರಿ ನಿತೀಶ್ ಕುಮಾರ ಹೇಳಿದ್ದಾರೆ.

ಪಟನಾ(ಜು.27): ಆರ್‌ಜೆಡಿ ನೇತಾರ ಲಾಲುಪ್ರಸಾದ್ ಯಾದವ್ ಅವರ ಪುತ್ರ, ಡಿಸಿಎಂ ತೇಜಸ್ವಿ ಯಾದವ್ ಮೇಲೆ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದರೂ ಅವರು ಕೊನೆಯವರೆಗೂ ಸ್ಪಷ್ಟನೆ ನೀಡಲಿಲ್ಲ. ಹಾಗಾಗಿ ಬೇರೆ ದಾರಿಯೇ ಇಲ್ಲದೇ ರಾಜೀನಾಮೆ ನೀಡಿದ್ದೇನೆ ಎಂದು ಬಿಹಾರದ ನಿರ್ಗಮಿತ ಮುಖ್ಯಮಂತ್ರಿ ನಿತೀಶ್ ಕುಮಾರ ಹೇಳಿದ್ದಾರೆ.

ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರಿಗೆ ರಾಜೀನಾಮೆ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿ, ‘20 ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಲು ಪ್ರಯತ್ನಿಸಿದ್ದೇನೆ. ಆರ್‌ಜೆಡಿ ನಾಯಕರ ಮೇಲೆ ಎದ್ದಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ವಿವರಣೆ ನೀಡುವಂತೆ ನಾನವರನ್ನು ಕೇಳಿದೆ. ತೇಜಸ್ವಿ ಯಾದವ್‌ರ ರಾಜೀನಾಮೆಯನ್ನು ನಾನು ಕೇಳಲಿಲ್ಲ. ಬದಲಾಗಿ ಅವರನ್ನು ಭೇಟಿ ಮಾಡಿ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿದೆ. ಆ ಪ್ರಕಾರ, ಆರೋಪದ ಬಗ್ಗೆ ಸ್ಪಷ್ಟಿಕರಣ ನೀಡಬೇಕಾಗಿತ್ತು. ಆದರೆ ಅವರು ನೀಡಲಿಲ್ಲ. ಎಲ್ಲಿ ಹೋದರೂ ನನಗೆ ಹಗರಣದ್ದೇ ಪ್ರಶ್ನೆ. ಹೀಗಾಗಿ ಇವರ ಮೈತ್ರಿ ಜೊತೆ ಕೆಲಸ ಮಾಡುವುದು ನನಗೆ ಕಷ್ಟವಾಯಿತು. ನಾವು ಮಹಾಮೈತ್ರಿ ಧರ್ಮವನ್ನು ಪಾಲಿಸಿದ್ದೇವೆ. ಆದರೆ ಅವರು ಪಾಲಿಸಲಿಲ್ಲ. ಹಾಗಾಗಿ ಇದರಲ್ಲೇ ಮುಂದುವರೆಯಲು ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ವಿವಾದ ಬೇಡ ಎಂದು ರಾಜೀನಾಮೆ ನೀಡಿದೆ’ ಎಂದರು.

‘ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಜೊತೆಗೂ ಈ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇನೆ. ‘ಭ್ರಷ್ಟ ರಾಜಕಾರಣಿಗಳ ರಕ್ಷಿಸುವ ಸುಗ್ರೀವಾಜ್ಞೆಯನ್ನು ಅವರು ಹರಿದು ಎಸೆದಿದ್ದನ್ನೂ ಜ್ಞಾಪಿಸಿದೆ. ಆದರೆ ಯಾವುದೂ ನೀಡಲಿಲ್ಲ. ಆದ್ದರಿಂದ ನಾನೇ ಮೈತ್ರಿಯಿಂದ ದೂರ ಉಳಿದೆ’ ಎಂದು ಹೇಳಿದರು. ನೋಟು ರದ್ದತಿ, ಸರ್ಜಿಕಲ್ ದಾಳಿ, ಕೋವಿಂದ್ ರಾಷ್ಟ್ರಪತಿ ಉಮೇದುವಾರಿಕೆ ಬಗ್ಗೆ ನಾವು ಬೆಂಬ ಲಿಸಿದ್ದ ಬಗ್ಗೆ ಸಾಕಷ್ಟು ಟೀಕೆ ಮಾಡಲಾಯಿತು. ಆದರೆ ಅದನ್ನೆಲ್ಲ ಸಹಿಸಿಕೊಂಡು ಸುಮ್ಮನಿದ್ದೆ ಎಂದು ಲಾಲು ಬಗ್ಗೆ ಕಿಡಿಕಾರಿದರು.

ರಾಜೀನಾಮೆ ತಂತ್ರ ಆಯ್ಕೆ ಏಕೆ?

ಆರ್‌ಜೆಡಿಯನ್ನು ತೊರೆದು ಬಂದರೆ ಬೆಂಬಲ ನೀಡಲು ಬಿಜೆಪಿ ತುದಿಗಾಲಿನಲ್ಲಿ ನಿಂತಿತ್ತು. ‘ಭ್ರಷ್ಟಾಚಾರ ಆರೋಪಗಳಿಂದ ಮುಜುಗರ ಉಂಟಾಗುತ್ತಿದ್ದರೆ ಸರ್ಕಾರದಿಂದ ಹೊರಬಂದು ಬಾಹ್ಯ ಬೆಂಬಲ ನೀಡುವುದಾಗಿ ಆರ್‌ಜೆಡಿ ಕೂಡ ಹೇಳಿತ್ತು. ‘ಭ್ರಷ್ಟಾಚಾರ ಆರೋಪ ಗಳನ್ನು ನಿರ್ಲಕ್ಷಿಸಿ ದೇಶದ ವಿವಿ‘ ಮುಖ್ಯಮಂತ್ರಿಗಳಂತೆ ಮುಖ್ಯ ಮಂತ್ರಿ ಪಟ್ಟದಲ್ಲಿ ಮುಂದುವರಿಯುವ ಎಲ್ಲ ಅವಕಾಶಗಳೂ ನಿತೀಶ್ ಕುಮಾರ್‌ಗೆ ಇದ್ದವು. ಆದರೆ ಅದನ್ನೆ ಲ್ಲವನ್ನೂ ತೊರೆದು ನಿತೀಶ್ ಕುಮಾರ್ ರಾಜೀನಾಮೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?

1. ಲಾಲು ಪ್ರಸಾದ್ ಅವರ ಮೇವು ಹಗರಣವನ್ನು ಮುಂದಿಟ್ಟು ಕೊಂಡು, ತಾವೊಬ್ಬ ಕಳಂಕರಹಿತ ಆಡಳಿತಗಾರ ಎಂದು ಬಿಂಬಿಸಿ ಕೊಂಡು ಮುಖ್ಯಮಂತ್ರಿ ಗದ್ದುಗೆ ಹಿಡಿದಿವರು ನಿತೀಶ್ ಕುಮಾ ರ್. ಸಿಎಂ ಆದಾಗಿನಿಂದಲೂ ಅವರು ಭ್ರಷ್ಟಾಚಾರ ಸಹಿಸಿ ಕೊಂಡವರಲ್ಲ. ಇದೇ ಕಾರಣಕ್ಕೆ ನಿತೀಶ್ ಕುಮಾರ್‌ಗೆ ‘ಸುಶಾಸನ್ ಬಾಬು’ (ಅತ್ಯುತ್ತಮ ಆಡಳಿತಗಾರ) ಎಂಬ ಬಿರುದು ಬಿಹಾರದಲ್ಲಿದೆ. ಬಿಜೆಪಿಯನ್ನು ಅಧಿಕಾರದಿಂದ ದೂ ವಿಡುವ ಧಾವಂತದಲ್ಲಿ ಲಾಲು ಪ್ರಸಾದ್‌ರ ಆರ್‌ಜೆಡಿ ಜತೆ ಮಹಾಘಟ ಬಂ‘ನವನ್ನು ನಿತೀರ್ಶ್ ಮಾಡಿಕೊಂಡರು. ಅದು ಯಶಸ್ವಿ ಪ್ರಯೋಗವೂ ಆಯಿತು. ಆದರೆ ಲಾಲು ವಿರುದ್ಧದ ಹಳೆಯ ಭ್ರಷ್ಟಾಚಾರ ಆರೋಪಗಳಿಗೆ ಈಗ ಜೀವ ಬರಲು ಆರಂಭಿಸಿತು. ತಮ್ಮ ಸಂಪುಟದಲ್ಲಿ ಪಮುಖ್ಯಮಂತ್ರಿಯಾಗಿದ್ದ ಲಾಲು ಪುತ್ರ ತೇಜಸ್ವಿ ಯಾದವ್ ವಿರುದ್ಧವೇ ಭ್ರಷ್ಟಾಚಾರ ಆರೋಪ ಸಂಬಂಧ ಎಫ್'ಐಆರ್ ದಾಖಲಿಸಿತು. ತಮ್ಮ ಭ್ರಷ್ಟಾಚಾರರಹಿತ ರಾಜಕೀಯ ಜೀವನಕ್ಕೆ ಕಳಂಕದಂತಿದ್ದ ತೇಜಸ್ವಿ ಯಾದವ್‌ರಿಂದ ರಾಜೀನಾಮೆ ಕೊಡಿಸಲು ನಿತೀಶ್ ಯತ್ನಿಸಿತಾದರೂ, ಮೈತ್ರಿ ರಾಜಕಾರಣದ ಮಿತಿಗಳಿಂದಾಗಿ ಅದು ಫಲ ಕೊಡಲಿಲ್ಲ.

2. ತೇಜಸ್ವಿ ಯಾದವ್‌ರನ್ನು ಸಂಪುಟದಿಂದ ಕಿತ್ತೊಗೆದರೆ ಆರ್ ಜೆಡಿಯಿಂದ ಮಂತ್ರಿಯಾಗಿರುವವರೆಲ್ಲಾ ರಾಜೀನಾಮೆ ಕೊಡುತ್ತಾರೆ. ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲಾಗುತ್ತದೆ ಎಂಬ ಸಂದೇಶವನ್ನು ಲಾಲು ಯಾದವ್ ರವಾನಿಸಿದ್ದರು. ಸರ್ಕಾರದೊಳಗೆ ಭಾಗಿಯಾಗಿದ್ದಾಗಲೇ ಲಾಲು ಯಾದವ್ ರಿಂದ ಮುಖ‘ಂಗವಾಗಿದೆ. ಬಾಹ್ಯ ಬೆಂಬಲ ಪಡೆದರೆ, ಲಾಲು ಹಾಗೂ ಆರ್‌ಜೆಡಿಯ ಬ್ಲ್ಯಾಕ್‌ಮೇಲ್‌ಗಳು ಜಾಸ್ತಿಯಾಗಿ, ಅವರ ಕೈಗೊಂಬೆಯಾಗಬೇಕಾಗುತ್ತದೆ ಎಂಬ ಅಭಿಪ್ರಾಯ ನಿತೀಶ್‌ರಲ್ಲಿತ್ತು

ಮೋದಿ ಕಡೆಗೆ ವಾಲಿದ್ದು ಹೀಗೆ

-2014, ಜುಲೈ 27: ಬಿಹಾರದಲ್ಲಿ ನಿತೀಶ್ -ಲಾಲು-ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟ ಘೋಷಣೆ

-2015 ನವೆಂಬರ್ 8: ಮಹಾಮೈತ್ರಿಕೂಟಕ್ಕೆ ಭರ್ಜರಿ ಬಹುಮತ, ನಿತೀಶ್ ಮುಖ್ಯಮಂತ್ರಿ

-2016 ಸೆಪ್ಟೆಂಬರ್ 29: ಕೇಂದ್ರ ಸರ್ಕಾರದ ಸರ್ಜಿಕಲ್ ದಾಳಿಗೆ ನಿತೀಶ್ ಬೆಂಬಲ

-2016 ನವೆಂಬರ್ 9: ಮೋದಿ ಸರ್ಕಾರದ ಅಪನಗದೀಕರ ಣದ ಬೆಂಬಲಕ್ಕೆ ನಿತೀಶ್; ಬಳಿಕ ಮೋದಿ ಜತೆ ಹೆಚ್ಚು ಆಪ್ತತೆ

-2017 ಜೂನ್ 21: ಯುಪಿಎ ಬದಲು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ ಕೋವಿಂದ್‌ಗೆ ನಿತೀಶ್ ಬೆಂಬಲ

-2017 ಜುಲೈ 7: ‘‘ಭೂಲಂಚ’ ಹಗರಣಕ್ಕೆ ಸಂಬಂಧಿಸಿ ಲಾಲು, ತೇಜಸ್ವಿ ಯಾದವ್ ಮೇಲೆ ಸಿಬಿಐ ದಾಳಿ

-2017 ಜುಲೈ 18: ಲಾಲು, ತೇಜಸ್ವಿ ಜತೆ ನಿತೀಶ್ ಮುನಿಸು; ಬಳಿಕ ಭೇಟಿ; ಹಗರಣದ ಬಗ್ಗೆ ಸ್ಪಷ್ಟನೆ ನೀಡಲು ಸೂಚನೆ; ರಾಜೀನಾಮೆಗೆ ತೇಜಸ್ವಿ ನಕಾರ

-2017 ಜುಲೈ 26: ತೇಜಸ್ವಿ ನಿರಾಕರಣೆಯಿಂದ ಬೇಸತ್ತು ನಿತೀಶ್ ರಾಜೀನಾಮೆ, ಮತ್ತೆ ನಿತೀಶ್‌ಗೆ ಬಿಜೆಪಿ ಬೆಂಬಲ

 

click me!