
ನವದೆಹಲಿ: ‘ಹೋಗಿ.. ಈ ಸರದಿ ಸಾಲು ನಿಮ್ಮದಲ್ಲ.. ಎಕಾನಮಿ ಕ್ಲಾಸ್ ಕ್ಯೂನಲ್ಲಿ ನಿಲ್ಲಿ. ಇದು ಬಿಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ಮಾತ್ರ’.
- ಹೀಗಂತ ಲಂಡನ್'ನ ಹೀಥ್ರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಲೇಖಕಿ ಸುಧಾ ಮೂರ್ತಿ ಅವರಿಗೆ ಹೈಹೀಲ್ಡ್ ಚಪ್ಪಲಿ ಧರಿಸಿ, ಐಷಾರಾಮಿ ವ್ಯಾನಿಟಿ ಬ್ಯಾಗ್ ಹಿಡಿದಿದ್ದ ಗಾಗಲ್ ಧಾರಿಣಿಯೊಬ್ಬಳು ಅವಮಾನ ಮಾಡಿದ್ದಳಂತೆ. ಬಹುಶಃ ಸುಧಾ ಅವರು ಸಾದಾ ಚೂಡಿದಾರ್ ಧರಿಸಿದ್ದು ಇದಕ್ಕೆ ಕಾರಣವಾಗಿತ್ತು.
ತಮ್ಮ ಜೀವನದಲ್ಲಿ ನಡೆದ ಹಲವು ಮರೆಯಲಾರದ ಘಟನೆಗಳನ್ನು ಹೆಕ್ಕಿ, ಸುಧಾಮೂರ್ತಿ ಅವರು ‘ತ್ರೀ ಥೌಸಂಡ್ ಸ್ಟಿಚಸ್’ ಪುಸ್ತಕವನ್ನು ಬರೆದಿದ್ದು, ಅದರಲ್ಲಿ ಈ ವಿಷಯವಿದೆ.
‘ನನಗೆ ಹೀಗೆ ಅವಮಾನ ಮಾಡಿದಾಗ, ನಾನು ನನ್ನ ಟಿಕೆಟ್ ತೋರಿಸಿ ಆ ಮಹಿಳೆಗೆ ಉತ್ತರಿಸಬಹುದಾಗಿತ್ತು. ಆದರೆ ಬೇಡ ಎಂದು ಸುಮ್ಮನಿದ್ದೆ. ಆದರೆ ಕಾಕತಾಳೀಯವೆಂಬಂತೆ ಮರುದಿನ ಅದೇ ಮಹಿಳೆ ತನ್ನ ಹೈಹೀಲ್ಡ್ ಚಪ್ಪಲಿ, ಗಾಗಲ್, ಐಷಾರಾಮಿ ವ್ಯಾನಿಟಿ ಬ್ಯಾಗ್ ತೊರೆದು ಸಾದಾ ಖಾದಿ ಸೀರೆ ಉಟ್ಟು ನಮ್ಮ ಇನ್ಫೋಸಿಸ್ ಪ್ರತಿಷ್ಠಾನದ ಸಭೆಗೆ ಆಗಮಿಸಿದರು. ಆಗ ನಾನೂ ಆ ಸಭೆಯಲ್ಲಿದ್ದೆ. ನನ್ನನ್ನು ನೋಡಿ ಅವರು ಅವಾಕ್ಕಾದರು.’
ಹೀಗೆ ಕುತೂಹಲಕಾರಿ ಸಂಗತಿಯನ್ನು ಸುಧಾ ಅವರು ಬರೆದಿದ್ದಾರೆ. ‘ಯಾವತ್ತೂ ಮನುಷ್ಯನನ್ನು ಉಡುಪು ಹಾಗು ದುಡ್ಡು ನೋಡಿ ಅಳೆಯಬಾರದು’ ಎಂದು ಅವರು ಈ ಮೂಲಕ ಕಿವಿಮಾತು ಹೇಳಿದ್ದಾರೆ.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.