ಸರ್ಕಾರದ ದಿಟ್ಟ ಕ್ರಮ, ಸಂಜೆ 6ರ ನಂತರ ಸಿಗಲ್ಲ ಎಣ್ಣೆ!

By Web DeskFirst Published Jul 10, 2019, 6:47 PM IST
Highlights

ಈ ರಾಜ್ಯದಲ್ಲಿ ಇನ್ನು ಮುಂದೆ ಸಂಜೆ ಆರು ಗಂಟೆ ನಂತರ ಎಣ್ಣೆ ಸಿಗಲ್ಲ! ಮದ್ಯಪ್ರಿಯರಿಗೆ ರಾಜ್ಯ ಸರಕಾರ ಭರ್ಜರಿ ಶಾಕ್ ನೀಡಿದೆ. ಆಂಧ್ರದಲ್ಲಿ ಹೊಸ ನೀತಿ ಜಾರಿಗೆ ಸಿದ್ಧತೆ ಆರಂಭವಾಗಿದೆ.

ವಿಜಯವಾಡ[ಜು. 10]  ಆಂಧ್ರಪ್ರದೇಶ ಸರಕಾರ ಹೊಸ ಚಿಂತನೆ ಮಾಡಿದ್ದು ಈ ಮೊದಲು ರಾತ್ರಿ 10 ಗಂಟೆಗೆ ಬಂದ್ ಆಗುತ್ತಿದ್ದ ಮದ್ಯದಂಗಡಿಗಳು ಇನ್ನು ಮುಂದೆ ಸಂಜೆ 6 ಗಂಟೆಗೆ ಬಂದ್  ಆಗಲಿವೆ.

ಜನರು ಸಂಜೆ ಸಮಯದಲ್ಲಿಯೇ ಮದ್ಯ ಸೇವನೆ ಬಹಳ ಇಷ್ಟಪಡುತ್ತಾರೆ. ಸಂಜೆ 6 ರ ನಂತರವೇ ಅಮಲೇರಿಸಿಕೊಳ್ಳುವ ಮಜಾ ಅನುಭವಿಸುತ್ತಿದ್ದಾರೆ. ಇದರಿಂದ  ಉಳಿದ ವ್ಯಾಪಾರ-ವಹಿವಾಟು ಇಳಿಮುಖವಾಗಿದ್ದು 6 ಗಂಟೆಗೆ ಲಿಕ್ಕರ್ ಶಾಪ್ ಬಂದ್ ಮಾಡುವ ಆಲೋಚನೆ ಸರಕಾರದ್ದು.

ಬಾರ್ ಮತ್ತು ವೈನ್ ಶಾಪ್ ಗಳಿಗೆ ತೆರಳಿ ಅಲ್ಲೇ ತಮ್ಮ ಬಹುತೇಕ ಸಮಯ ಕಳೆಯುತ್ತಿದ್ದಾರೆ ಎಂಬ ಗಂಭೀರ ಮಾಹಿತಿ ಆಧರಿಸಿಯೇ ಸರಕಾರ ಈ ಕ್ರಮಕ್ಕೆ  ಮುಂದಾಗಿದ್ದು ಶೇ. 20 ರಷ್ಟು ಮದ್ಯದಂಗಡಿಗಳನ್ನು ಕಡಿಮೆ ಮಾಡಲು ಚಿಂತನೆ ನಡೆಸಿದೆ.

ಸಿಎಂ ಜಗನ್ ಮೋಹನ್ ರೆಡ್ಡಿ ಚುನಾವಣೆ ಸಂದರ್ಭ ಇಡೀ ರಾಜ್ಯದಲ್ಲಿ ಸಂಪೂರ್ಣ ನಿಷೇಧ ಮಾಡುತ್ತೇನೆ ಎಂದು ತಮ್ಮ ಪ್ರಣಾಳಿಕೆಯಲ್ಲಿ  ಹೇಳಿದ್ದರು. ಜೂನ್ 30ಕ್ಕೆ ಕೊನೆಗೊಂಡಂತೆ ಆಂಧ್ರದ ಅಬಕಾರಿ ಪಾಲಿಸಿ ಸಹ ಅಂತ್ಯವಾಗಿದೆ. ಸರಕಾರ ಮೂರು ತಿಂಗಳ ಅವಧಿಗೆ ವಿಸ್ತರಣೆ ಮಾಡಿದ್ದು ಮುಂದೆ  6 ಗಂಟೆಗೆ ಲಿಕ್ಕರ್ ಶಾಪ್ ಕ್ಲೋಸ್ ಮಾಡುವ ಇರಾದೆ ಹೊಂದಿದೆ.

click me!